ಪೊಲೀಸರು ಸಕಾಲದಲ್ಲಿ ಬರೊಲ್ಲ. ಎಲ್ಲಾ ಮುಗಿದ ಮೇಲೆ ಬರ್ತಾರೆ. ಅವಾಗ ತಲೆ ಉರುಳಿರುತ್ತಾವೆ ಎಂಬ ಸರ್ವೇ ಜನರ ಮಾತು ಒಂದು ಕಡೆ ಆದರೆ, ಮತ್ತೊಂದು ಕಡೆ ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡುವ ಮಟ್ಟಿಗೆ ಈ ವ್ಯವಸ್ಥೆ ತಲುಪಿರುವುದು ದುರಂತ


ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಇಂತಹ ಸಾಲಿನಲ್ಲಿ ಇತ್ತಿಚೆಗೆ ಎರಡು ಬಾರೀ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ಜಗಳವೆಂದು ಅಲ್ಲಿಗೆ ಹೋದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆನಡೆಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ.
ನಗರದ ಬೊಮ್ಮನ ಕಟ್ಟೆಯ ಎ ಬ್ಲಾಕ್ ನಲ್ಲಿ ಹರೀಶ್ ನಾಯ್ಕ್ ಮತ್ತು ಶಮಂತ ನಾಯ್ಕ್ ಜಗಳವಾಡಿಕೊಂಡಿದ್ದು, ಈ ಕುರಿತು 112 ತುರ್ತು ವಿಭಾಗಕ್ಕೆ ಕರೆಹೋಗಿರುತ್ತದೆ.


ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಮ್ ಆರ್ ಅಲ್ಲಿಗೆ ಹೋಗಿದ್ದಾರೆ.
ಜಗಳ ವಾಡುತ್ತಿದ್ದ ಸ್ಥಳಕ್ಕೆ ಹೋದ ಶಿವರಾಮ್ ಜಗಳ ಏಕೆ ಜಗಳ ಆಡುತ್ತಿರುವುದು ಎಂದು ಶಮಂತ ನಾಯ್ಕ್ ಗೆ ಕೇಳಿದ್ದಾರೆ.
ಇದನ್ನ ಕೇಳಿದ ಶಮಂತ ನಾಯ್ಕ ಕರ್ತವ್ಯದ ಮೇಲಿದ್ದ ಶಿವರಾಮ್ ರವರನ್ನ ಎಳೆದಾಡಿ ಬಲಗಣ್ಣನ್ನ ಪರಚಿ ಪರಾರಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಶಿವರಾಮ್ ವಿನೋಬ ನಗರದಲ್ಲಿ ಶಮಂತ ನಾಯ್ಕ್ ನ ವಿರುದ್ದ ದೂರು ದಾಖಲಿಸಿದ್ದಾರೆ. ಎಲ್ಲಿಗೆ ಬಂತು ಕಾಲ!

By admin

ನಿಮ್ಮದೊಂದು ಉತ್ತರ

error: Content is protected !!