ಜೂ. ೧೬ ರಂದು ಕುವೆಂಪು ವಿವಿ ಘಟಿಕೋತ್ಸವ

ವಿವಿಯ ೩೧ & ೩೨ನೇ ಘಟಿಕೋತ್ಸವಗಳು ಒಂದೇ ದಿನ ವಿವಿಯ ಇತಿಹಾಸದಲ್ಲೇ ಇದೇ ಮೊದಲು

ಶಂಕರಘಟ್ಟ, ಜೂ. ೧೪: ಕುವೆಂಪು ವಿಶ್ವವಿದ್ಯಾಲಯವು ಜೂನ್ ೧೬ರಂದು ಏರ್ಪಡಿಸಿರುವ ೩೧ ಮತ್ತು ೩೨ನೇ ಘಟಿಕೋತ್ಸವದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ ಅವರು ಮತ್ತು ಇತರೆ ಐದು ಮಂದಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದೆ.

ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ವಿವಿಯ ಆಡಳಿತವು, ಎರಡು ಘಟಿಕೋತ್ಸವಗಳಿಂದ ಒಟ್ಟು ಆರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿರುವ ವಿಷಯವನ್ನು ತಿಳಿಸಿದೆ. ಕೊರೊನಾ ಹಾವಳಿ ಹಾಗೂ ಅತಿಥಿಗಳ ಸಮಯ ಹೊಂದಾಣಿಕೆ ಸಾಧ್ಯವಾಗದ ಕಾರಣ ನೆನೆಗುದಿಗೆ ಬಿದ್ದಿದ್ದ ವಿವಿಯ ಎರಡು ಶೈಕ್ಷಣಿಕ ಘಟಿಕೋತ್ಸವಗಳನ್ನು ಪ್ರಸ್ತುತ ಜೂನ್ ೧೬ ರಂದು ಒಂದೇ ದಿನ ನಡೆಸಲು ವಿಶ್ವವಿದ್ಯಾಲಯವು ಮುಂದಾಗಿದೆ. ೨೦೧೯-೨೦ ಮತ್ತು ೨೦೨೦-೨೧ ನೇ ಸಾಲಿನ ಘಟಿಕೋತ್ಸವಗಳನ್ನು ರಾಜ್ಯಪಾಲರ ಅನುಮತಿ ಮೇರೆಗೆ ಒಂದೇ ದಿನ ಆಯೋಜಿಸಲು ಸಿದ್ಧತೆ ಕೈಗೊಂಡಿದೆ.

೩೧ನೇ ಘಟಿಕೋತ್ಸವದ ಭಾಗವಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುತ್ತಿದೆ. ೩೨ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ವಿಶ್ರಾಂತ ಕುಲಪತಿ ಪ್ರೊ. ಟಿ. ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಟಿಕೋತ್ಸವ ಕಾರ್ಯಕ್ರಮಕ್ಕೆ ಕುಲಾಧಿಪತಿ ಮತ್ತು ರಾಜ್ಯ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಆಗಮಿಸಿಲಿದ್ದಾರೆ. ಎರಡೂ ಘಟಿಕೋತ್ಸವಗಳ ಮುಖ್ಯಭಾಷಣವನ್ನು ಮೈಸೂರಿನ ಭಾರತೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಮಾಡಲಿದ್ದಾರೆ.

೩೧ನೇ ಘಟಿಕೋತ್ಸವದಲ್ಲಿ ವಿವಿಧ ರ‍್ಯಾಂಕ್ ಹಾಗು ಪದವಿ ಪಡೆಯುವವರ ಮಾಹಿತಿ: ೨೦೧೯-೨೦ರ ಸಾಲಿನ ಘಟಿಕೋತ್ಸವದಲ್ಲಿ ೬೧ ಪುರುಷರು ಹಾಗೂ ೩೦ ಮಹಿಳೆಯರು ಸೇರಿ ಒಟ್ಟು ೯೧೯೪ಅಭ್ಯರ್ಥಿಗಳು ಪಿಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ ೧೦೨೧೪ ಪುರುಷರು ಹಾಗೂ ೧೫೨೨೧ ಮಹಿಳೆಯರು ಸೇರಿ ಒಟ್ಟು ೨೫೪೩೫ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.


ಸದರಿ ಘಟಿಕೋತ್ಸವದಲ್ಲಿ ೧೨೭ ಸ್ವರ್ಣಪದಕಗಳು ಇದ್ದು, ಅವುಗಳನ್ನು ೨೦ ಪುರುಷರು ಹಾಗೂ ೫೧ ಮಹಿಳೆಯರು ಸೇರಿ ಒಟ್ಟು ೭೧ ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. ೧೭ ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು ೧೩ ಮಹಿಳಾ ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ.

ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಅವರು ಒಟ್ಟು ೮ ಸ್ವರ್ಣ ಪದಕ ಹಾಗೂ ೨ ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ವಿವಿಯ ಎಂ. ಬಿ. ಎ. ಯ ಯತೀಶ್ ಕೆ. ಯು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ ಎಸ್., ಎನ್. ಇ. ಎಸ್. ಸಂಸ್ಥೆಯ ಬಿ. ಕಾಂ. ಕೋರ್ಸ್ನ ನಿವ್ಯಾ ಕೆ. ನಾಯಕ್ ತಲಾ ಐದು ಸ್ವರ್ಣಪದಕಗಳನ್ನು ಪಡೆದಿದ್ದಾರೆ.

ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಖಾಯಗಳಡಿ ೧೨೯೨೩ ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

೩೨ನೇ ಘಟಿಕೋತ್ಸವದಲ್ಲಿ ವಿವಿಧ ರ‍್ಯಾಂಕ್ ಹಾಗು ಪದವಿ ಪಡೆಯುವವರ ಮಾಹಿತಿ: ೨೦೨೦-೨೧ರ ಸಾಲಿನ ಘಟಿಕೋತ್ಸವದಲ್ಲಿ ೮೨ ಪುರುಷರು ಹಾಗೂ ೪೭ ಮಹಿಳೆಯರು ಸೇರಿ ಒಟ್ಟು ೧೨೯೪ಅಭ್ಯರ್ಥಿಗಳು ಪಿಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ ೮೩೨೪ ಪುರುಷರು ಹಾಗೂ ೧೨೩೧೪ ಮಹಿಳೆಯರು ಸೇರಿ ಒಟ್ಟು ೨೦೬೩೮ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.

ಸದರಿ ಘಟಿಕೋತ್ಸವದಲ್ಲಿ ೧೩೨ ಸ್ವರ್ಣಪದಕಗಳು ಇದ್ದು, ಅವುಗಳನ್ನು ೧೪ ಪುರುಷರು ಹಾಗೂ ೫೨ ಮಹಿಳೆಯರು ಸೇರಿ ಒಟ್ಟು ೬೬ ವಿದ್ಯಾರ್ಥಿಗಳು ಹಂಚಿಕೊAಡಿರುತ್ತಾರೆ. ೧೭ ನಗದು ಬಹುಮಾನಗಳು ಇದ್ದು, ೧೩ ಅನ್ನು ಮಹಿಳಾ ವಿದ್ಯಾರ್ಥಿಗಳು ಹಾಗೂ ಎರಡನ್ನು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು ೧೫ ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ.
ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಒಟ್ಟು ೧೧ ಸ್ವರ್ಣ ಪದಕ ಹಾಗೂ ೨ ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ಎ. ಬಿ. ಎ. ವಿಭಾಗದ ಪ್ರಿಯಾಂಕ ಟಿ. ಆರು ಸ್ವರ್ಣಪದಕಗಳನ್ನು ಜಯಿಸಿದ್ದಾರೆ. ಎಂ. ಎ. ಸಮಾಜಶಾಸ್ತç ವಿಭಾಗದ ತನೂಷಾ ಸಿ., ರಸಾಯನಶಾಸ್ತç ವಿಭಾಗದ ಸಂಯುಕ್ತ ಪೈ ಎಂ. ಹಾಗೂ ಎಟಿಎನ್‌ಸಿಸಿಯ ಬಿ. ಕಾಂ. ಕೋರ್ಸ್ ಮೇಘನ ತಲಾ ಐದು ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದಾರೆ.

ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಕಾಯಗಳಡಿ ೭೧೮೮ ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!