ಶಿವಮೊಗ್ಗ, ಜೂ.೧೦:
ನಗರದ ಮೆಟ್ರೋಯುನೈಟೆಡ್ ಹೆಲ್ಸ್‌ಕೇರ್‌ಆಸ್ಪತ್ರೆ, ಹೃದಯ್ ಸ್ಪೆಷಾಲಿಟಿ ಕ್ಲೀನಿಕ್, ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘ


ಶಿವಮೊಗ್ಗ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ರಕರ್ತರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.


ಒಂದು ದಿನದ ಈ ಶಿಬಿರದಲ್ಲಿ ವಿಶೇಷ ವಾಗಿ ಹೃದಯ, ಮೂತ್ರಪಿಂಡ, ರಕ್ತದೊತ್ತಡ, ಮಧು ಮೇಹ ಸೇರಿದಂತೆ ವಿವಿಧ ಸಂಗತಿ ಯಗಳ ಕುರಿತುತಜ್ಞ ವೈದ್ಯರಿಂದಅತ್ಯಾಧುನಿಕ ಯಂತ್ರಗಳ ಸಹಾಯದಿಂದತಪಾಸಣೆ ನಡೆಸಲಾಗುತ್ತಿದೆ.


ಈ ಶಿಬಿರದ ನೇತೃತ್ವವನ್ನು ಮೆಟ್ರೋಯು ನೈಟೆಡ್ ಹೆಲ್ಸ್‌ಕೇರ್‌ಆಸ್ಪತ್ರೆಯತಜ್ಞ ವೈದ್ಯರಾದಡಾ. ಪೃಥ್ವಿ, ಹೃದಯ್ ಸ್ಪೆಷಾಲಿಟಿ ಕ್ಲೀನಿಕ್‌ನಡಾ. ಮಹೇಶ್ ಮೂರ್ತಿಯವರು ವಹಿಸಿಕೊಂಡಿದ್ದಾರೆ. ಈ ಶಿಬಿರವನ್ನು ಜು. ೧೨ರ ಭಾನುವಾರ ಬೆಳಿಗ್ಗೆ ೯.೦೦ಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜು ನಾಥ್, ಡಿ. ಎಸ್. ಅರುಣ್, ಉದ್ಯಮಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ಈ. ಕಾಂತೇಶ್, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನುಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು, ಶಿವಮೊಗ್ಗ ಜಿಲ್ಲಾಕಾ ರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಕೆ. ವಿ. ಶಿವಕುಮಾರ್ ವಹಿಸಲಿದ್ದಾರೆ.


ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿ ನಿರ್ದೇಶಕಎನ್. ರವಿಕುಮಾರ್, ವಿಶೇಷ ಆಹ್ವಾನಿತರಾದ ಜೆ.ಪದ್ಮನಾಭ್ ಉಪಸ್ಥಿತರಿರಲಿದ್ದಾರೆ.


ಆರೋಗ್ಯತಪಾಸಣೆಯು ಸವಳಂಗ ರಸ್ತೆಯ ಶಿವಮೂರ್ತಿ ವೃತ್ತದ ಸಮೀಪದ ಮೆಟ್ರೋಯುನೈಟೆಡ್ ಹೆಲ್ಸ್‌ಕೇರ್‌ಆಸ್ಪತ್ರೆ ಹಾಗೂ ದುರ್ಗಿಗುಡಿ ಮೊದಲ ಪ್ಯಾರಲಲ್ ರಸ್ತೆಯ ಹೃದಯ್ ಸ್ಪೆಷಾಲಿಟಿ ಕ್ಲೀನಿಕ್‌ಗಳಲ್ಲಿ ನಡೆಯಲಿದೆ.

By admin

ನಿಮ್ಮದೊಂದು ಉತ್ತರ

error: Content is protected !!