ಶಿವಮೊಗ್ಗ, ಜೂ.8:
ಯುವಕನಿಗೆ ಚಾಕುವಿನಿಂದ ಇರಿತದ ಘಟನೆಯೊಂದು ನಿನ್ನೆ ರಾತ್ರಿ ನಡೆದಿದ್ದು, ಅದರ ಸತ್ಯಾಸತ್ಯತೆ ತಿಳಿಯದೇ ಸುಳ್ಳು ವದಂತಿಗಳು ಹರಡಿ ಶಿವಮೊಗ್ಗ ನಗರದ ಹಲವೆಡೆ ಉದ್ವಗ್ನ ಪರಿಸ್ಥಿತಿ ಕಾಣಿಸಿಕೊಂಡಿತ್ತು. ಪೊಲೀಸರ ಸಕಾಲಿಕ ಕ್ರಮ ಸುಳ್ಳು ವದಂತಿ ಹರಡುವುದಕ್ಕೆ ಬ್ರೇಕ್ ಹಾಕಿದೆ.


ನಗರದ ಗಾಂಧಿ ಬಜಾರ್‌ನ ಚೋರ್ ಬಜಾರ್ ನಲ್ಲಿ ನಿನ್ನೆ ರಾತ್ರಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಂಗಡಿಗೆ ನುಗ್ಗಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ.
ಸೆಂಥಿಲ್ ಹಲ್ಲೆಗೊಳದ ಯುವಕ. ಈ ಹಿಂದೆ ಸಂತೋಷ್ ಹಾಗೂ ಸೆಂಥಿಲ್ ನಡುವೆ ಗಲಾಟೆ ಉಂಟಾಗಿ ಸೆಂಥಿಲ್ ಚಾಕುವಿನಿಂದ ಇರಿದಿದ್ದ ಎನ್ನಲಾಗಿದೆ.
ಈ ದ್ವೇಷದ ಹಿನ್ನೆಲೆಯಲ್ಲಿ ಚೋರ್ ಬಜಾರ್‌ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ಸೆಂಥಿಲ್ ಮೇಲೆ ಸಂತೋಷ್ ಹಲ್ಲೆ ಮಾಡಿದ್ದಾನೆ.
ಸೆಂಥಿಲ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಮನವಿ: ಯಾವುದೇ ಘಟನೆ ನಡೆಯಲಿ. ಅದಕ್ಕೊಂದು ಹೊಸ ಬಣ್ಣ ಹಾಕಿ ನಾನಾ ವದಂತಿ ಹರಡಿಸುವುದು ಸಹಜ. ಜನ ಈ ಬಗ್ಗೆ ಚಿಂತಿಸಬೇಕು. ಸುಳ್ಳು ಸುದ್ದಿಗಳನ್ನು ನಿರ್ಲಕ್ಷಿಸುವಂತೆ ನಿಮ್ಮ ತುಂಗಾತರಂಗ ದಿನಪತ್ರಿಕೆ ವಿನಂತಿಸುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!