ಶಿವಮೊಗ್ಗ, ಮೇ 24:
ನಗರದ ಹೊರವಲಯ ಸೋಮಿನಕೊಪ್ಪ ಗ್ರಾಮದ ಕೆರೆ ಉಕ್ಕಿ ಹರಿದ ಪರಿಣಾಮ, ಭತ್ತದ ಫಸಲು ಹಾಳಾದ ಗದ್ದೆಗೆ ಸೋಮವಾರ ಬೆಳಿಗ್ಗೆ ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್ ಹಾಗೂ ಕೃಷಿ ಇಲಾಖೆ ಅಧಿಕಾರಿ ಸುನೀಲ್ ನಾಯ್ಕ್ ಅವರು ಭೇಟಿ ನೀಡಿದ್ದರು. ನಿಯಮಾನುಸಾರ ರೈತರಿಗೆ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳ ತಂಡ ತಿಳಿಸಿದೆ.
ಕೆರೆ ನೀರು ಉಕ್ಕಿ ಹರಿದ ಪರಿಣಾಮ, ಕಟಾವಿಗೆ ಬಂದ ಭತ್ತದ ಫಸಲು ಹಾಳಾಗಿತ್ತು. ಹೂಳು ತುಂಬಿಕೊಂಡಿತ್ತು. ಆದರೆ ಆಡಳಿತದಿಂದ ತಮಗೆ ಯಾವುದೇ ನೆರವು ದೊರಕಿಲ್ಲ ಎಂದು ರೈತರು ದೂರಿದ್ದರು.