ಸ್ಮಾರ್ಟ್ ಸಿಟಿ ಹೆಸರಿನ ಕೋಟ್ಯಾಂತರ ರೂ ನೆಪದಲ್ಲಿ ಶಿವಮೊಗ್ಗ ಜಲಾವೃತಗೊಂಡ ಸತ್ಯಾಂಶ ಮೊದಲ ಬಾರೀ ಬಿದ್ದ ಹೌದೆನ್ನುವ ಭಾರೀ ಮಳೆಯಿಂದ ಬಹಿರಂಗಗೊಂಡಿದೆ.

ಶಿವಮೊಗ್ಗ, ಮೇ.19:
ಶಿವಮೊಗ್ಗ ನಗರದ ಸೇರಿದಂತೆ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳ ಕಾಲದ ವರದಿ ಪ್ರಕಾರ ಇಡೀ ಶಿವಮೊಗ್ಗ ನಗರ ಹಾಗೂ ಜಿಲ್ಲೆ ತಲ್ಲಣಗೊಂಡಿದೆ. ಸ್ಮಾರ್ಟ್ ಸಿಟಿ ಹೆಸರಿನ ಲೆಕ್ಕವಿಲ್ಲದಂತೆ ಮಾಡಿದ ಕೆಲಸಕ್ಕೆಜನ ಹಾಲೀ ಕಾರ್ಪೂರೇಟರ್ ಹಾಗೂ ಸ್ಥಳೀಯ ಶಾಸಕರಿಗೆ, ವಿಶೇಷವಾಗಿ ಸ್ಮಾರ್ಟ್ ಸಿಟಿಯ ಗೆಬರಣ್ಣ ಇಂಜಿನಿಯರ್ ಗಳಿಗೆ ಹಿಡಿಶಾಪ ಹಾಕುತ್ತಿದ್ದರು.
ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.


ಅಸಾನಿ ಚಂಡಮಾರುತದ ಹಿನ್ನೆಲೆ ಮತ್ತು ಮುಂಗಾರುವಿನ ಬಂದೂ ಬಾರದಂತಿದ್ದ ರೋಹಿಣಿ ಮಳೆಯ ಆಗಮನ ಸೇರಿಕೊಂಡು ಇಡೀ ಮಲೆನಾ ಡಿನಲ್ಲಿ ಮಳೆಯ ರುದ್ರನರ್ತನ ಉಂಟಾಗಿದೆ.
ಕೆರೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಭತ್ತ ಕೊಯ್ಲಿಗೆ ಬಂದಿದ್ದು, ಮಳೆಗೆ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಅಲ್ಲದೆ, ಸಾಕಷ್ಟು ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ಒಂದುಕಡೆಯಾದರೆ, ನಗರ ದಲ್ಲಿ ವಾಸಿಸುತ್ತಿರುವ ಅದರಲ್ಲೂ ತಗ್ಗಿನ ಪ್ರದೇಶ ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಬದುಕು ದುಸ್ತರವಾ ಗಿದೆ.


ರಾತ್ರಿಯಿಡೀ ಸುರಿದ ಮಳೆಗೆ ನಿದ್ರೆ ಯನ್ನೂ ಮಾಡದೇ ಆತಂಕದ ಕ್ಷಣಗಳನ್ನು ಇಲ್ಲಿನ ಸಾರ್ವಜನಿಕರು ಕಳೆಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮ ಗಾರಿ ಆರಂಭವಾದ ಮೇಲಂತೂ ಅವಾಂತರಗಳೇ ಸೃಷ್ಟಿಯಾಗಿವೆ. ಎಲ್ಲಿ ಬೇಕೆಂದರಲ್ಲಿ ಚರಂಡಿ, ಬಾಕ್ಸ್ ಚರಂಡಿ, ಯುಇಡಿಗೆ ಗುಂಡಿಗಳನ್ನು ತೆಗೆದು, ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದರಿಂದ ವಾಹನಸ ವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಾಗಿದೆ. ಏಕೆಂದರೆ, ಮಳೆ ಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತ ವಾಗಿದ್ದು, ಕಾಮಗಾರಿಯ ಗುಂಡಿಗಳು ಬಲಿಗಾಗಿ ಬಾಯಿತೆರೆದು ನಿಂತಂತಾಗಿದೆ.
ಅನೇಕ ಬಡಾವಣೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ, ಹೊಳೆಯಂತೆ ನೀರು ಹರಿಯುತ್ತಿದೆ. ರಾಜಕಾಲುವೆಗಳು ತುಂಬಿ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುತ್ತಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವ ವಿನೋಬನಗರದ ೬೦ ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದ ಬಳಿ ಚರಂಡಿಯಲ್ಲಿ ನೀರು ಹರಿಯದೇ ನೂತನವಾಗಿ ನಿರ್ಮಿಸಿರುವ ರಸ್ತೆಯಲ್ಲಿಯೇ ಹರಿಯುತ್ತಿದೆ. ಇದೇ ರಸ್ತೆಯಲ್ಲಿರುವ ಚಾನಲ್ ಸೇತುವೆ ಮೇಲೂ ಮಳೆಯ ನೀರು ಹರಿಯುತ್ತಿದೆ.
ಇತ್ತೀಚೆಗಷ್ಟೇ ಕಟ್ಟಡ ಕುಸಿಯುವ ಭೀತಿಯಿಂದ ಹೊಸ ಕಟ್ಟಡ ಕಟ್ಟಿಸಿಕೊಡ ಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ನ್ಯೂ ಮಂಡ್ಲಿಯ ಸರ್ಕಾರಿ ಶಾಲೆಯ ಆವರಣ ಸಂಪೂರ್ಣ ಜಲಾವೃತ ಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ನಿಂತಿದೆ. ಯಾವುದೇ ಬಡಾವಣೆಗಳ ನೀರು ಚರಂಡಿಗಳ ಮೂಲಕ ಸರಾಗವಾಗಿ ಹರಿಯದೇ ರಸ್ತೆಗಳ ಮೂಲಕವೇ ಕೊಳಚೆ ಯನ್ನು ಸೇರಿಸಿಕೊಂಡು ಹರಿಯುತ್ತಿದೆ.
ಇನ್ನು ಧಾರಾಕಾರವಾಗಿ ಸುರಿಯುತ್ತಿ ರುವ ಮಳೆಯ ಹಿನ್ನೆಲೆಯಲ್ಲಿ ಜನರು ಮಳೆ ಯಿಂದ ಹೊರಗೆ ಬರುವುದೇ ಕಷ್ಟವಾಗಿದೆ. ಎರಡು ನಿಮಿಷವೂ ವಿಶ್ರಾಂತಿ ಕೊಡದೇ ಮೋಡಕ್ಕೆ ರಂಧ್ರಬಿದ್ದಂತೆ ಮಳೆ ಸುರಿಯು ತ್ತಿದ್ದು, ತಮ್ಮ ದೈನಂದಿನ ಕೆಲಸಗಳಿಗಾಗಿ ಜನರು ಹೊರ ಬರುವುದು ಕಷ್ಟವಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ಒಂದು ದಿನ ರಜೆ ಘೋಷಿಸಿ ಆದೇಶಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!