ಶಿವಮೊಗ್ಗ, ಮೇ.16:

ಪಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಶಿವಮೊಗ್ಗದ ದಂಪತಿಗೆ ಚಿನ್ನ, ಬೆಳ್ಳಿ, ಕಂಚು ಪದಕಗಳ ಸರಮಾಲೆಗಳು ಲಭಿಸಿವೆ

ಮೇ 14 ಮತ್ತು 15 ರಂದು ಬೆಂಗಳೂರಿನ ಯಲಹಂಕದ ಪಡುಕೋಣೆ ದ್ರಾವಿಡ್ ಮೈದಾನದಲ್ಲಿನ ಈಜುಕೊಳದಲ್ಲಿ ನಡೆದ ರಾಷ್ಟ್ರಮಟ್ಟದ “1st Pan India Masters Games” ಈಜು ಸ್ಪರ್ಧೆಯಲ್ಲಿ, ಶಿವಮೊಗ್ಗದ ದೀಪಕ್ ಕುಮಾರ್ ಗೋಂದಕರ್ ಗೆ 2 ಬೆಳ್ಳಿ, 1 ಕಂಚು, ರೇಖಾ ಗೋಂದಕರ್ ಗೆ 2 ಚಿನ್ನ, 2 ಬೆಳ್ಳಿ, 1 ಕಂಚು ಒಟ್ಟು 8 ಪದಕಗಳು ಪಡೆದು, ಶಿವಮೊಗ್ಗಕ್ಕೆ ಕೀರ್ತಿ ತಂದಿದ್ದಾರೆ.

ಶಿವಮೊಗ್ಗದ ಗೋಪಾಳಗೌಡ ಬಡಾವಣೆಯಲ್ಲಿರುವ ಶಿವಮೊಗ್ಗ ಕ್ರೀಡಾ ಸಂಕೀರ್ಣದಲ್ಲಿರುವ ಈಜುಕೊಳದಲ್ಲಿನ ಕೋಚ್ ಸಂಗಮೇಶ್ ಹಾಗೂ ರಮೇಶ್ ಗರಡಿಯಲ್ಲಿ ಪಳಗುತ್ತಿರುವ 10 ಜನ ಈಜು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

  1. ಸಂಗಮೇಶ ಪಾರಶೆಟ್ಟಿ 4 ಬೆಳ್ಳಿ
  2. ದೀಪಕ್ ಕುಮಾರ್ 2 ಬೆಳ್ಳಿ, 1 ಕಂಚು
  3. ಸತ್ಯ ಭಟ್ 2 ಚಿನ್ನ, 2 ಬೆಳ್ಳಿ, 1 ಕಂಚು
  4. ಶಶಿ ಕುಮಾರ್ 2 ಚಿನ್ನ, 2 ಬೆಳ್ಳಿ
  5. ಡಾ. ವಿದ್ಯಾ ರಮೇಶ್ 3 ಚಿನ್ನ, 1 ಬೆಳ್ಳಿ, 1 ಕಂಚು 6. ರೇಖಾ ಬಿ. ವಿ 2 ಚಿನ್ನ, 2 ಬೆಳ್ಳಿ, 1 ಕಂಚು
  6. ಪ್ರಫುಲ್ಲಾ 4 ಚಿನ್ನ, 1 ಬೆಳ್ಳಿ
  7. ಮಮತಾ 1 ಚಿನ್ನ, 2 ಬೆಳ್ಳಿ, 1 ಕಂಚು
  8. ರೇಖಾ ವೈ. ಎಂ. 3 ಚಿನ್ನ, 2 ಬೆಳ್ಳಿ
  9. ಅನುರಾಧ 1 ಚಿನ್ನ, 1 ಬೆಳ್ಳಿ, 1 ಕಂಚು.

10 ಜನರಿಗೆ ಸೇರಿ, ಒಟ್ಟು 18 ಚಿನ್ನದ ಪದಕ, 19 ಬೆಳ್ಳಿ ಪದಕಗಳು, 6 ಕಂಚಿನ ಪದಕಗಳು ಸೇರಿ ಒಟ್ಟು 43 ಪದಕಗಳನ್ನು ಪಡೆದು ಶಿವಮೊಗ್ಗ ಕ್ರೀಡಾ ಸಂಕೀರ್ಣಕ್ಕೆ ಕೀರ್ತಿ ತಂದಿದ್ದಾರೆ.

ವರದಿ: ಮೋಹನ್

By admin

ನಿಮ್ಮದೊಂದು ಉತ್ತರ

error: Content is protected !!