ಶಿವಮೊಗ್ಗ, ಏ.27:

ಮತ್ತೆ ಶಿವಮೊಗ್ಗ ಹೊನ್ನಾಳಿ ರಸ್ತೆಯ ರೈಲ್ವೇ ಓವರ್ ಬ್ರಿಡ್ಜ್ ಸುತ್ತಮುತ್ತ ದರೋಡೆ, ಬೆದರಿಕೆ ಹುಟ್ಟಿಸುವ ಪುಡಾರಿಗಳ ಉಪಟಳ ಜಾಸ್ತಿಯಾಗುತ್ತಿದೆ. ಏಕೆಂದರೆ ಕಳೆದ ತಿಂಗಳ್ಲಿ ಹತ್ತಾರು ಇಂತಹ ಘಟನೆಗಳು ಸರಿರಾತ್ರಿ ಹೊತ್ತಿನಲ್ಲಿ ನಡೆಯುತ್ತಿವೆ ಎನ್ನಲಾಗಿದ್ದು, ನಿನ್ನೆ ರಾತ್ರಿ ನಡೆದ ಘಟನೆಯೊಂದು ಮಾತ್ರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ವ್ಯಕ್ತಿಯೋರ್ವರ ಮೇಲೆ ಮೂರು ಜನ ಅಟ್ಯಾಕ್ ಮಾಡಿದ್ದಾರೆ. ಅವರು ಆತನ ಮುಖಕ್ಕೆ ಪಂಚ್ ಮಾಡಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ನಡೆದಿದೆ.
ಸಿಟಿ ಕ್ಲಬ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ.

ತಡರಾತ್ರಿ ಈ ಘಟನೆ ನಡೆದಿದ್ದು ದಾಳಿ ನಡೆಸಲು ಬಂದವರೆಲ್ಲಾ ಅನ್ಯ ಭಾಷೆಯಲ್ಲಿ ಮಾತನಾಡುತ್ತಿದ್ದವರು ಎಂದು ಹೇಳಲಾಗುತ್ತಿದೆ.
ಪವನ್ ಎಂಬ ಕಾರ್ಮಿಕ ಕೆಲಸ ಮುಗಿಸಿಕೊಂಡು ಮನೆಕಡೆ ನಡೆಯುವ ಹೊತ್ತಿನಲ್ಲೇ ಆಕ್ಟೀವ್ ಹೊಂಡಾದಲ್ಲಿ ಬಂದ ಮೂವರು ಅಪರಿಚಿತರು ಬ್ರಿಡ್ಜ್ ಮೇಲೆ ಅಡ್ಡ ಹಾಕಿದ್ದಾರೆ. ಈ ವೇಳೆ ಯುವಕರು ಉರ್ದು ಭಾಷೆಯಲ್ಲಿ ಮಾತನಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಆತನ ಮುಖಕ್ಕೆ ಪಂಚ್ ಮಾಡಲು ಶುರು ಮಾಡಿದ್ದಾರೆ. 10-30 ರ ನಂತರ ವಾಹನ ಸಂಚಾರ ಕಡಿಮೆಯಾಗಿರುವ ಈ ಜಾಗದಲ್ಲಿ ಕಾರ್ಮಿಕನ ಮೇಲೆ ಮುಗಿಬಿದ್ದ ಈ ಮೂವರು ಇತರೆ ವಾಹನವೊಂದು ತಮ್ಮಕಡೆ ಬರುತ್ತಿದೆ ಎಂದು ಭಾವಿಸಿ ಮೂವರು ಪರಾರಿಯಾಗಿದ್ದಾರೆ.


ಈ ಮೂವರ ವಿರುದ್ಧ ಪವನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಕೂಲಿ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ ಮೂವರು ಅಪರಿಚಿತರ ಬಂಧನಕ್ಕೆ ಖಾಕಿ ಪಡೆ ಬಲೆ ಬೀಸಿದೆ.ಈ ಘಟನೆ ಇಂದು ಬೆಳಗ್ಗಿನ ಜಾವ 12-30 ರಸಮಯದಲ್ಲಿ ನಡೆದಿದೆ

By admin

ನಿಮ್ಮದೊಂದು ಉತ್ತರ

You missed

error: Content is protected !!