ಶಿವಮೊಗ್ಗ, ಆ.8:
ಶಿವಮೊಗ್ಗದ ಮೂಲೆಮೂಲೆಗಳಲ್ಲಿ ವಕ್ಕರಿಸುತ್ತಿರುವ ಕೊರೊನಾ ಸೊಂಕಿನ ಕಹಿ ಘಟನೆಗಳು ಈಗ ಶಿವಮೊಗ್ಗ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳ ಕಛೇರಿಯ ನೌಕರರೊಬ್ಬರಿಗೆ ತಗುಲಿದೆ ಎಂದು ಪತ್ರಿಕಾ ಮೂಲಗಳು ಸ್ಪಷ್ಟಪಡಿಸಿವೆ.
ಜಿಲ್ಲಾಧಿಕಾರಿಗಳು ಸಹ ಪತ್ರಿಕೆಗೆ ಈ ಸಂಬಂಧ ಮಾಹಿತಿ ನೀಡಿದ್ದು, ಓರ್ವರಿಗೆ ಪಾಸೀಟೀವ್ ಬಂದಿರುವುದಾಗಿ ಹೇಳಿದ್ದಾರೆ.
ಇಂದು ಮಧ್ಯಾಹ್ನ ದೊರೆತ ಮಾಹಿತಿಯನುಸಾರ ಜಿಲ್ಲಾಧಿಕಾರಿಗಳ ಕಚೇರಿಯ ನೌಕರರೊಬ್ಬರಿಗೆ ಕೊರೋನಾ ಪಾಸಿಟಿವ್ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತದೆ.
ಜಿಲ್ಲಾಧಿಕಾರಿಗಳ ಕಚೇರಿಯ ನೌಕರರು ಹಾಗೂ ಕಾರ್ಯನಿಮಿತ್ತ ಬಂದು ಹೋಗುವ ಸಾರ್ವಜನಿಕರಲ್ಲಿ ಆತಂಕದ ಛಾಯೆ ಕಾಣುತ್ತದೆ. ಇದು ಜಿಲ್ಲಾಡಳಿತದ ಕೇಂದ್ರ ಸ್ಥಾನದ ಒಬ್ಬರಿಗೆ ಕಾಣಿಸಿಕೊಂಡಿರುವುದು ಆತಂಕವನ್ನು ಸೃಷ್ಟಿಸಿದೆ.
ಎಲ್ಲೆಡೆ ವಿಜೃಂಭಿಸುತ್ತಿರುವ ಕೊರೊನಾ ಶಿವಮೊಗ್ಗ ಕೋವಿಡ್ ಸೆಂಟರ್ ಹೊಂದಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ತಗುಲಿ ಭಯ ಹುಟ್ಟಿಸಿದೆ. ಸಾವಿನ ಸಂಖ್ಯೆಗಳೂ ಹೆಚ್ಚಿವೆ.

By admin

ನಿಮ್ಮದೊಂದು ಉತ್ತರ

You missed

error: Content is protected !!