ಶಿವಮೊಗ್ಗ ನಗರದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ಹಿನ್ನೆಲೆಯಲ್ಲಿ ಕಳರದ 8 ದಿನಗಳ ನಂತರ ಶಾಲಾ ಕಾಲೇಜುಗಳನ್ನು ಆರಂಭಿಸಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರವೇ ಶಾಲಾ ಕಾಲೇಜು ಆರಂಭಿಸಲು ಗ್ರಿನ್ ಸಿಗ್ನಲ್ ದೊರೆಕಿತ್ತು. ಆದರೆ ಪರಿಸ್ಥಿತಿ ಅವಲೋಕಿಸಿ ಫೆ.28ರವರೆಗೆ 144 ಜಾರಿಗೊಳಿಸಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದರು.
ವಿಶೇಷವೆನೆಂದರೆ ಈ ತಿಂಗಳು ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜುಗಳು ನಡೆದಿರುವುದು 12 ದಿನ ಮಾತ್ರ.