ಶಿವಮೊಗ್ಗ, ಫೆ.25:
ದ್ವೇಶ ಹಾಗೂ ಕೋಮುದಳ್ಳುರಿಗೆ ತುತ್ತಾದ ಹರ್ಷ ಅವರ ಕುಟುಂಬಕ್ಕೆ ನಾಡಿನ ಮಠಾಧೀಶರು, ಶಾಸಕರು, ಸಚಿವರು, ಜನಪ್ರತಿನಿಧಿಗಳ ದಂಡು ಮನೆಗೆ ಬೇಟಿ ಮಾಡಿ ಸಾಂತ್ವಾನ ಹೇಳುತ್ತಿದೆ. ಕುಟುಂಬಕ್ಕೆ ನಿರೀಕ್ಷೆ ಮೀರಿದ ಸಹಾಯ ಮಾಡುತ್ತಿರುವುದು ಸಂತಸದ ವಿಚಾರವೇ ಹೌದು.
ಇದರ ನಡುವೆ, ಯಾವುದೇ ನಿರೀಕ್ಷೆಗಳಿಲ್ಲದೇ ಶಿವಮೊಗ್ಗದಲ್ಲಿ ಸಮಾಜಸೇವೆ, ನೊಂದವರಿಗೆ ಸಹಾಯಹಸ್ತ ನೀಡುತ್ತಲೇ ಗೌರವಾನ್ವಿತವಾಗಿ ಗುರುತಿಸಿಕೊಂಡಿರುವ ಎಂ. ಶ್ರೀಕಾಂತ್ ಸದ್ದಿಲ್ಲದೇ ಮತ್ತೊಂದು ಸಾರ್ಥಕ ಕಾರ್ಯ ಮಾಡಿದ್ದಾರೆ.
ಕಳೆದ 7 ವರ್ಷದ ಹಿಂದೆ ಕೋಮುದಳ್ಳುರಿಗೆ ಬಲಿಯಾದ ವಿಶ್ವನಾಥ ಶೆಟ್ಟಿ ಯವರ ಕುಟುಂಬ ಬೀದಿ ಪಾಲಾಗಿದ್ದನ್ನು ಗಮನಸಿಸಿದ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ಇಂದು ವಿಶ್ವನಾಥಶೆಟ್ಟಿ ಕುಟುಂಬದ ನೆರವಿಗೆ ಧಾವಿಸಿ, ಆ ಮನೆಗೆ ಅಗತ್ಯದ ಸೇವೆ ಸಲ್ಲಿಸಿದ್ದಾರೆ.
ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೆರವು ನೀಡಿದ್ದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.
ಸಾವಿನಲ್ಲೂ ಜಾತಿ ರಾಜಕೀಯ ಮಾಡುವವರಿಗೆ ಎಂ.ಶ್ರೀ ಕಾಂತ್ ಕಾರ್ಯ ಮೆಚ್ಚುಗೆಗಳಿಸಿದೆ. ಅಗತ್ಯದ ಸಹಾಯ ನಿರಂತರವಾಗಿ ನಡೆಯಬೇಕಿದೆ.