ಫೆಬ್ರವರಿ 14 ಪ್ರೇಮಿಗಳ ದಿನ(Valentines day) ನಿನ್ನ ಬಗ್ಗೆ ಏನ್ನೊ ಹೇಳುವ ಮುನ್ನ “ನಿನಗೆ ಪ್ರೇಮಿಗಳ ದಿನದ ಶುಭಾಶಯ” ಮತ್ತು I LOVE YOU, I LOVE YOU, & I L U…!!!
ನಂಗೊತ್ತು ನಿಂಗೆ ಎಷ್ಟೇ ಸಲ I LOVE YOU ಅಂದ್ರು ನಿನ್ನ ಕಡೆಯಿಂದ No response ನಿನ್ಜೊತೆ ಮಾತಾಡುವಾಗ, ನೀನು ಸಿಕ್ಕಾಗ ಕನಿಷ್ಠ ಎರಡು ಮೂರು ಭಾರಿಯಾದರು I LOVE YOU ಅನ್ನುತ್ತಿರುತ್ತೇನೆ. ಮೊದಲೆಲ್ಲಾ ನೀನು ನಾನು ಐ ಲವ್ ಯು ಅಂದಾಗ, at least I hate you ಅಂತನಾದ್ರು ಅಂತಿದ್ದೆ ಇತ್ತೀಚೆಗೆ ಯಾಕೋ ಹಾಗೆ ಅನ್ನೊದನ್ನೆ ಬಿಟ್ ಬಿಟ್ಟಿದಿಯಲ್ಲಾ. ಯಾಕೆ ನಿನಗೂ ನನ್ ಮೇಲೆ Sudden ಆಗಿ ಲವ್ ಆಗಿದೆಯಾ, ಆಗಿದ್ದರೆ ಹೇಳೊಕೇನಂತೆ.? ನೀ ನಂಗೆ I hate you ಅನ್ನೋದನ್ನೇ ಬಿಟ್ ಬಿಟಿದಿಯಾ ಅಂದ್ರೆ ನಿಂಗೆ ನನ್ ಮೇಲೆ ಪಕ್ಕಾ love ಆಗಿರಲೇ ಬೇಕಲ್ವ ಅಥವಾ ಹೇಗೆ Raect ಮಾಡ್ಬೇಕಂತಾನೆ ಗೊತ್ತಾಗ್ತಿಲ್ವಾ….?
ಈ ಪ್ರೇಮ ಅನ್ನೋದೇ ಹೀಗೆ ಅದೊಂದು ಸೂಕ್ಷ್ಮ ಸಂವೇದನೆ ಜಾತಿ, ಮತ, ಅಂತಸ್ತು, ಕುಲ ಗೋತ್ರ, ಸಿರಿತನ, ಬಡತನ, ವಯಸ್ಸು ಸ್ಥಾನಮಾನ ಇವೆಲ್ಲವನ್ನು ಧಿಕ್ಕರಿಸಿ ಬಿಡುತ್ತದೆ.
ಅಸಲಿಗೆ ನೀನು ಯಾಕೆ ಅಷ್ಟೊಂದು ಇಷ್ಟ ಆದೇ ಅಂಥ ಅರ್ಥ ಆಗ್ಲಿಲ್ಲ. ಕಾಲೇಜಿನಲ್ಲಿ ಎಂತೆಂತಹ ಅಂದ ಚೆಂದದ ಹುಡುಗಿಯರನ್ನು ಕಂಡಿದ್ದೆ, ಆದ್ರೆ ಅವರಲ್ಲಿ ಯಾರು " ಈ ಹುಡುಗಿ ನನ್ನೋಳು" ಅಂತ ಅನ್ನಿಸಿರಲಿಲ್ಲ. ಅವೆರೆಡೆಗೆ ಮನಸ್ಸಾಗಿರಲ್ಲಿ ಲವ್ವು ಗಿವ್ವು ಪ್ರಶ್ನೆಯೇ ಇಲ್ಲ. ಅದೊಂದು ದಿನ ಬೆಳಿಗ್ಗೆ ಬಸ್ಸಿನಲ್ಲಿ ಮೀನಾಕ್ಷಿ ಭವನದಿಂದ ಸಹ್ಯಾದ್ರಿ ಕಾಲೇಜಿಗೆ ಹೋಗುತ್ತಿದ್ದೆ, ನೀನು ಗುಲಾಬಿ ಬಣ್ಣದ ಚೂಡಿಯನ್ನು ಹಾಕಿಕೊಂಡು ಹೊಳೆಸ್ಟಾಪ್ ನಲ್ಲಿ ನಿಂತಿದ್ದೆ, ಆಗ ನಿನ್ನನ್ನು ನೋಡಿದೆ ನೋಡು...? ಅಂದು ಯಾಕಾದರೂ ನಿನ್ನನ್ನು ನೋಡಿದೆನೋ ಅನ್ನಿಸುತ್ತಿದೆ! ಏಕೆಂದರೆ ಅಂದು ನಾನು ನಿನ್ನನ್ನು ನೋಡದೇ ಹೋಗಿದ್ದರೆ, ನನ್ನಲ್ಲಿ ನಿನ್ನ ಮೇಲೆ ಪ್ರೀತಿಯೇ ಹುಟ್ಟುತ್ತಿರಲಿಲ್ಲವೇ,
ಹೋಗಲಿ ಬಿಡು ಆದದ್ದಾಯಿತು. ಆದರೆ ನೀ ನಂಗೆ ಇಷ್ಟವಾದಮೇಲೆ ನಿನ್ನ ಪರಿಚಯ ಮಾಡಿಕೊಳ್ಳಲು, ನಿನ್ನ ಮೊಬೈಲ್ ನಂಬರ್ ಕಲೆಕ್ಟ್ ಮಾಡಲು ನಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನೀನು ನಮ್ಮ ಕಾಲೇಜ್ ಹುಡ್ಗಿ ಎಂದು ತಿಳಿದ ಮೇಲಂತೂ ನಿನ್ನ LOVE ಮಾಡಿದ್ದಕ್ಕೂ ಸಾರ್ಥಕ ಎನ್ನಿಸಿಬಿಡ್ತು.
ನಾ ಮನಸ್ಸಿಗೆ ಅನ್ನಿಸಿದನ್ನು ಹೇಳೋ ಹುಡ್ಗ ಅಂದೊಂದು ದಿನ ನಿನ್ನಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೀ ಅಂದ್ರೆ ನಂಗೆ ತುಂಬಾ ಇಷ್ಟ! LOVE YOU ಅಂದು ಬಿಟ್ಟೆ ಇದನ್ನು ನಿರೀಕ್ಷಿಸಿದ್ದೆ ಏನೋ ಎಂಬಂತೆ ನಿನ್ನ ಮುಖದಲ್ಲಿ Sudden shock ನ ಛಾಯೆ ಏನೂ ಇರಲಿಲ್ಲ ಆದ್ರೆ ಆಶ್ಚರ್ಯಕರವಾದ ಚಿನ್ಹೆ ಅಂತೂ ಇತ್ತು.
ಆ ಮೇಲೆ ನಿನಗೆ ಅದೆಷ್ಟು ಸಲ I LOVE YOU ಅಂದೇನೋ ಅದೆಷ್ಟು ಸಲ Message ಮಾಡಿದೆನೋ ಲೆಕ್ಕವಿಲ್ಲ. ನಿನಗೆ I LOVE YOU ಅಂದಾಗಲೆಲ್ಲ, ನೀನು ತುಂಗಾ ಹೊಳೆಗೆ ಹಾಕ್ತಿನಿ, ಶಿವಮೊಗ್ಗ ಬಿಟ್ಟು ದಾವಣಗೆರೆಗೆ ಓಡಿಸ್ತೀನಿ ಅಂತೆಲ್ಲಾ ಹೇಳಿದ್ದೆ.
ಆಯ್ತು ಬಾ ಹೊಳೆಗೆ ಹಾಕು *"ಪ್ರಿಯಕರನ ಕೊಂದ ಪ್ರೇಯಸಿ"* ಎಂದು ಸುದ್ದಿಯಾಗಲಿ ಅಂತಾ ನಾ ಹೇಳಿದಾಗ, ಅಯ್ಯೋ? ನಾ ಹಾಗೆ ಹೇಳೆ ಇಲ್ಲಪ್ಪ ಅಂದು ಬಿಡುತ್ತಿದ್ದೆ. ಮೊದಲೇ ಮಹಾನ್ ಸುಳ್ಳು ಬುರುಕಿ ನೀನು. ಪ್ರಪಂಚದಲ್ಲೇನಾದರೂ ಸುಳ್ಳು ಹೇಳೋ ಸ್ಪರ್ಧೆ ಏರ್ಪಡಿಸಿದ್ರೆ ನಿಂಗೆ ಫಸ್ಟ್ ಪ್ರೈಜ್ ಗ್ಯಾರಂಟಿ ಕಣ್ರಿ. ಈ ಸುಳ್ಳು ಹೇಳೋದೊಂದನ್ನ ಬಿಟ್ರೆ ಉಳಿದೆಲ್ಲದ್ರಲ್ಲೂ ನೀನು ಫರ್ಫೆಕ್ಟ್.
ಯಾವ್ಯಾವುದೋ ಕಾರಣಕ್ಕಾಗಿ ನಿನ್ನಿಂದ ದೂರ ಆಗ್ಬೇಕು ಅಂತಾ ತಿರ್ಮಾನಿಸಿ ಇದೇ ಕಡೆಯ Message ಎಂದು ಹೇಳಿ ಅದೆಷ್ಟೋ ಸಲ Good bye ಹೇಳಿದ್ದೇನೆ. ನೀನು ಅಷ್ಟೇ ಆದರೂ ಇಬ್ಬರ ನಡುವೇ ಈಗಲೂ ಮಾತು Message ನಿಂತಿಲ್ಲ.
ನಿನ್ ನೆನಪು, ನಗು, ಮುದ್ದು ಮೂಗು, Wonderful voice, ನಿನ್ ಗುಣ etc....etc... ಮತ್ತೇ ಮತ್ತೇ ಕಾಡಿ ನಿನ್ನ ಮಾತಾಡಿಸುವಂತೆ ಮಾಡಿ ಬಿಡುತ್ತೇ, ಕೆಲವೊಂದು ಸಾರಿ ನಿನ್ನ ಪಟಾಯಿಸಿ Loafer ಅನ್ನಿಸ್ಕೊಳ್ಳೋದಕ್ಕಿಂತಾ ನಿನ್ನ ದೃಷ್ಟೀಲಿ ಒಬ್ಬ Decent ಹುಡುಗ ಅನ್ನಿಸಿಕೊಂಡ್ರೆ ಸಾಕು ಅನ್ನಿಸಿಬಿಡುತ್ತೇ ಕಣ್ರೀ ಆದ್ರೂ.......ನೀ ಸನಿಹಕೇ ಬಂದರೆ ಹೃದಯದ ಗತಿಯೇನು....ಹೇಳು ನೀನು, ನೀನೆ ಹೇಳು.......? ಆದ್ರೇ ಒಂದು ಮಾತು ನೆನಪಲ್ಲಿ ಇಟ್ಕೊಳ್ಳಿ, ನೀನು ಹಣ್ಣು ಹಣ್ಣು ಮುದುಕಿಯಾಗಿ, ನಿನ್ ಹಲ್ಲೆಲ್ಲಾ ಬಿದ್ದು ಹೋಗಿ ಕೊನೆಗೂ ನಾ ಸತ್ರು, ನನ್ನ ಪ್ರೀತಿ ಸಾಯಲ್ಲ ಕಣ್ರೀ........ಅಂತಾ ಮುಂಗಾರು ಮಳೇಲಿ ಗಣೇಶ್ ಥರಾ ಡೈಲಾಗೆಲ್ಲಾ ನಂಗೆ ಹೊಡೆಯೋಕೆ ಬರಲ್ಲ.
ಆದ್ರೆ ಇಷ್ಟು ಮಾತ್ರ ಹೇಳಬಲ್ಲೆ. ಈ ಜನ್ಮದಲ್ಲಿ ನಿನ್ನ ಬಿಟ್ರೆ ಬೇರೆ ಯಾರನ್ನು ಇಷ್ಟ ಪಡೋಲ್ಲ. ಅದಕ್ಕೆ ನಿಂಗೆ ಹತ್ತಾರು ಬಾರಿ I LOVE YOU, I LOVE YOU, I LOVE YOU... ಅಂತಾ ಅಂತಾನೆ ಇರ್ತೀನಿ.... ಆದ್ರೆ ನೀ ಮಾತ್ರ *ನಾ ಕೊನೆಯುಸಿರೆಳೆಯುವುದರೊಳಗೊಮ್ಮೆ I LOVE YOU ಅಂದು ಬಿಡು,* ಅಂತೀಯಾ ಅಲ್ವಾ.......?!
ಇಂತಿ ನಿನ್ನ ಇನಿಯಾ
ಬರಹ: ರವಿ ಯು.ಸಿ
ಹುಚ್ಚಂಗಿಪುರ