ಪ್ರೀತಿ ಯಾರ್ ಬೇಕಾದ್ರೂ ಮಾಡ್ತಾರೆ…, ಮೊದ್ಲು ದುಡ್ಡು ಮಾಡು..!

ಪ್ರೀತಿ ಎಂಬ ಪದಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಎರಡಕ್ಷರದ ಪದವಾದರೂ ಸಹ ಅದಕ್ಕೆ ಇರುವ ಶಕ್ತಿ ಎಂತಹವರನ್ನು ಸಹ ಕರಗಿಸಿಬಿಡುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಪ್ರೀತಿ ಎಂಬ ಮಾಯೆ ಬಂದು ಹೋಗಿರುತ್ತದೆ. ಕೆಲವರಿಗೆ ಪ್ರೀತಿ ಸಿಕ್ಕರೆ ಇನ್ನೂ ಕೆಲವರಿಗೆ ಸಿಗದೇ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿರುವ ಘಟನೆಗಳು ನಮ್ಮ ಸಮಾಜದಲ್ಲಿ ಹಲವು ನಡೆದಿವೆ.

ಇಂದು ಲವ್ ಹೆಸರಿನಲ್ಲಿ ಕೆಲ ಹುಡುಗ ಹುಡುಗಿಯರು ಬರೀ ಟೈಂಪಾಸ್ ಮಾಡಿ ಬಿಟ್ಟು ಎಂಜಾಯ್ ಮಾಡಿ ಹೋಗುತ್ತಾರೆ. ಅವರಿಗೆ ತಮ್ಮ ಆ ಕ್ಷಣದ ಅಗತ್ಯಗಳಿಗೆ ಹುಡುಗ ಅಥವಾ ಹುಡುಗಿಯರು ಬಲಿಪಶುವಾಗುತ್ತಿದ್ದಾರೆ.
ಕೆಲವರ ಪ್ರೀತಿ ರಾಧ-ಕೃಷ್ಣರ ಹಾಗೇ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಂಡು ಕಷ್ಟ-ಸುಖಗಳಲ್ಲಿ ಬಾಗಿಯಾಗುವುದರ ಜೊತೆಗೆ ಇಬ್ಬರೂ ಪ್ರೇಮಿಗಳು ಒಂದೇ ತರಹ ಮೌಲ್ಯಗಳನ್ನು ಅಳವಡಿಕೊಂಡು ಅದನ್ನು ಸಂಬಂಧದ ಅಡಿಪಾಯವಾಗಿಸಿಕೊಳ್ಳುವದು ಅವಶ್ಯಕ. ಪ್ರೀತಿಸಿದಾಗ ಒಬ್ಬರು ಇನ್ನೊಬ್ಬರನ್ನು ಅರ್ಥ ಮಾಡಿಕೊಂಡು ಪರಸ್ಪರ ಪ್ರೀತಿ, ಗೌರವ, ಪ್ರಾಮಾಣಿಕತೆ, ಕಾಳಜಿ, ಸ್ನೇಹ, ಸಲುಗೆ ಪ್ರೀತಿಯ ಸಂಬಂಧವನ್ನು ಬಿಗಿಗೊಳಿಸುತ್ತದೆ ಎಂದರೆ ತಪ್ಪಾಗಲಾರದು.
ಇಂದಿನ ದಿನಮಾನಗಳಲ್ಲಿ ಪ್ರೀತಿಯನ್ನು ನಿರಾಕರಿಸಿದ ಯುವತಿಗೆ ಚಾಕು ಇರಿದು ಕೊಲೆ ಮಾಡುವ ಬೆದರಿಕೆ ಹಾಗೂ ಕೊಲೆ ಮಾಡಿ ಜೈಲು ಶಿಕ್ಷೆಯನ್ನು ಸಹ ಅನುಭವಿಸುತ್ತಿರುವ ಯುವಕರನ್ನು ಸಹ ನೋಡಬಹುದು. ಈ ಪ್ರೀತಿ ಎಂಬ ಬಲೆಗೆ ಬಿದ್ದರೆ ಜೀವನದಲ್ಲಿ ಅದನ್ನು ಗೆಲ್ಲುವ ಆತ್ಮವಿಶ್ವಾಸವನ್ನು ಸಹ ಹೊಂದಿರಬೇಕು. ಯಾವುದೋ ಕಾಣದ ಕೈಗಳಿಗೆ ಹೆದರದೇ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು. ಇಲ್ಲದಿದ್ದರೆ ತ್ಯಾಗ ಮಾಡಲು ಸಹ ಹಿಂಜರಿಯಬಾರದು.


ಜಾತಿ, ಧರ್ಮಗಳಲ್ಲಿ ಸಿಲುಕಿದ ಪ್ರೀತಿ.
ಪ್ರೀತಿ ಎಂಬುದು ಮಾರುಕಟ್ಟೆಗಳಲ್ಲಿ ಸಿಗುವ ಸಾಮಾಗ್ರಿಗಳಂತೆ ಖರೀದಿಲಾಗುವುದಿಲ್ಲ ಎಂಬ ಸತ್ವವನ್ನು ಸಹ ಉಳಿಸಿಕೊಂಡಿದೆ. ಹಾಗೆಯೇ ಧರ್ಮ, ಜಾತಿ ಎಂಬ ಸಾಮಾಜಿಕ ಕಟ್ಟುಪಾಡುಗಳಲ್ಲಿ ಪ್ರೀತಿಯನ್ನು ಉಸಿರು ಗಟ್ಟುವಂತೆ ಮಾಡಲಾಗುತ್ತಿದೆ. ಸಮಾಜದಲ್ಲಿ ಕೆಲವರ ಪ್ರೀತಿಗಳು ಮನೆಯವರ ಒತ್ತಡಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದನ್ನು ಸಹ ನೋಡಬಹುದು.
ವಿಶೇಷವೆಂದರೆ ಇಲ್ಲೊಂದು ಪ್ರೀತಿ ಹಣ, ಆಸ್ತಿಗೆ ಬಲಿಯಾಗಿರುವುದನ್ನು ನೋಡಬಹುದು…. ಜಸ್ಟ್ ಕಾಲ್ಪನಿಕವಷ್ಟೆ..!
ಗ್ರಾಮೀಣ ಪ್ರದೇಶಗಳಲ್ಲಿ ಒಂದು ಬೀದಿಗೆ ಒಂದು ನೆಲ್ಲಿ ಅಥವಾ ಊರಿಗೆ ಒಂದ್ ಬೋರ್ ಇರುವುದನ್ನು ಗಮನಿಸಬಹುದು.
ಅಂದು ಮುಂಜಾನೆ ಸರಿ ಸುಮಾರು 7ರ ಹೊತ್ತಿಗೆ ನೀರು ಬಿಡುವ ಹೊತ್ತು…. ಆ ಸಮಯದಲ್ಲಿ ಮನೆಗೆ ನೀರು ತರಲೆಂದು ಹೊರಟ ಅವನಿಗೆ ನೀರಿನ ಜೊತೆಗೆ ಕಂಡದ್ದು ಅವಳು, ಅವಳ ಕಣ್ಣಿನ ನೋಟಕ್ಕೆ ಮನ ಸೋತ ಅವನು ಪ್ರೀತಿಯೆಂಬ ಅದ್ಭುತವಾದ ಜಗತ್ತಿನಲ್ಲಿ ತೇಲಿಸುತ್ತಿತ್ತು.
ಹೌದು.. ಈಗೆ ಬರೀ ಕಣ್ಣಿ ನೋಟಗಳ ಮೂಲಕವೇ ಅವರ ಪ್ರೀತಿಯ ಮೊದಲ ಎರಡು ಮೂರು ದಿನಗಳು ಕಳೆದವು. ಅವಳನ್ನು ಮಾತನಾಡಿಸಲು ಹೋದ ಅವನಿಗೆ ಸಣ್ಣ ಭಯ, ಸಂಕೋಚ ಅವನ ಬಾಯಿಗೆ ಬೀಗ ಹಾಕಿತ್ತು. ಆದರೆ ಒಂದು ದಿನ ಅವಳೇ ಇದಕ್ಕಿಂದಂತೆ ಬಂದು ಮಾತನಾಡಿಸಿದಾಗ ಮನದಲ್ಲಿ ಏನೋ ಒಂಥರ ಧೈರ್ಯ, ಆತ್ಮವಿಶ್ವಾಸ ಮೂಡಿತ್ತು.
ಅವನು ಸೈಕಲ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಅವಳು ಮನೆಯಿಂದ ಬಸ್ ಹತ್ತಲು ನಡೆದುಕೊಂಡು ಬರುವಾಗ ಅವಳನ್ನೇ ಹಿಂಬಾಲಿಸಿದ ಅವನು ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಹೋದ..

ನಂತರ ಅವನಿಗೆ ಧೈರ್ಯ ಸಲಾದಾಗಿ ಹಾಗೆಯೇ ಮುಗುಳುನಗೆಯಿಂದ ನಕ್ಕು ಅಲ್ಲಿಂದ ಕಾಲೇಜಿಗೆ ಹೋರಟ.., ಈಗೆ ಒಂದು ವರ್ಷ ಕಣ್ಣಿನ ನೋಟಗಳ ಮೂಲಕವೇ ಪ್ರೀತಿ ನಡೆಯುತ್ತಿತ್ತು.
ಒಂದು ದಿನ ಊರಿನಲ್ಲಿ ದಸರಾ ಹಬ್ಬ. ಆ ಹಬ್ಬದಲ್ಲಿ ಅವಳನ್ನು ನೋಡಿದ ಅವನು ಈ ದಿನ ಏನಾದರೂ ಆಗಲೀ ಪ್ರೀತಿಯ ವಿಷಯವನ್ನು ಹೇಳುತ್ತೇನೆ ಎಂದು ದೃಢ ನಿರ್ಧಾರ ಮಾಡಿಕೊಂಡು ಹೋದ ಈ ಯುವಕ ಅವಳನ್ನು ದೇವಸ್ಥಾನದ ಹಿಂಭಾಗ ಕರೆದುಕೊಂಡು ಬರಲು ನಾಲ್ಕು ಜನ ಹುಡುಗಿಯರ ಗುಂಪಿನಲ್ಲಿ ಇದ್ದ ಸ್ನೇಹಿತೆಗೆ ತಿಳಿಸಿದ್ದ. ಅವಳನ್ನು ಕರೆದುಕೊಂಡು ಬಂದಕ್ಷಣಾ ಅವಳಿಗೆ ಐ ಲವ್‌ ಯೂ ಎಂದು ಹೇಳಿದ ತಕ್ಷಣವೇ.. ಆ ಯುವತಿಯ ಮೊಗದಲ್ಲಿ ತಲೆಯ ಮೇಲೆ ದೊಡ್ಡ ಬಂಡೆಕಲ್ಲು ಬಿದ್ದ ಆಗಾಯಿತು ಎಂಬಂತೆ ಇಲ್ಲಪ್ಪ…. ನಮ್ಮಪ್ಪ… ಬೈಯ್ದಾರೆ.. ನಮ್ಮ ಮನೆಯಲ್ಲಿ ನೋಡಿದವರನ್ನೆ ಮದುವೆಯಾಗುತ್ತೇನೆ ಎಂದು ಹೇಳಿಹೋದ ಹುಡುಗಿ ವಾರಗಟ್ಟಲೇ ಕಾಣಲೇ ಇಲ್ಲ…


ಉತ್ಸಾಹ ಕಳೆದುಕೊಳ್ಳದ ಯುವಕ ನಂತರ ಹುಡುಗಿಯ ಸಂಬಂಧಿಕರ ಮನೆಗೆ ಮದುವೆ ಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯೂ ಸಹ ಸಮಯ ಸಂದರ್ಭ ನೋಡಿ ಮತ್ತೆ ಐ ಲವ್‌ ಯೂ ………… ಎಂದು ಹೇಳಿದ್ದ ಆ ನಂತರದಲ್ಲಿ ನೋಡು… ನಿನಗೆ ಇಷ್ಟವಿದ್ದರೆ ಈ ನಂಬರ್‌ಗೆ ಕಾಲ್ ಮಾಡು ಎಂದು ಸಹ ಬರೆದುಕೊಟ್ಟು ಹೋಗಿದ್ದ. ನಂತರ ಒಂದು ದಿನ ರಾತ್ರಿ ಅವನ ವಾಟ್ಸಪ್ ಮೂಲಕ ಸಂದೇಶ ರವಾನಿದಳು.. ಈಗೆ ಮುಂದುವರೆದ ಪಕ್ಷದಲ್ಲಿ ಒಂದೊಳ್ಳೆ ಪ್ರೀತಿಯ ಹಕ್ಕಿಗಳಾದರೂ…. ಈಗೆ ಪ್ರೀತಿ ಮುಂದುವರೆಯುತ್ತಿತ್ತು…
ಈಗೆ ಪ್ರೇಮಿಗಳಿಬ್ಬರ ಮಧ್ಯದಲ್ಲಿ ಅವಳನ್ನು ನೋಡಲು ಬೇರೆ ಊರಿನಿಂದ ಹೆಣ್ಣು ನೋಡಲು ಬಂದ ಯುವಕನಿಗೆ ಇಷ್ಟವಾಯಿತು. ಈ ಯುವಕ ಒಳ್ಳೆಯ ಆಸ್ತಿ, ಅಂತಸ್ತು ಇದ್ದೆ ಎಂದು ಮನೆಯವರಿಗೂ ಇಷ್ಟವಾಯಿತು. ಈ ಯುವತಿಗೆ ಒಂದು ಕಡೆ ಮನೆಯವರೊಂದಿಗೆ ತನ್ನ ಪ್ರೀತಿಯನ್ನು ಹೇಳಿ ಕೊಳ್ಳಲಾಗದಂತಹ ಭಯ. ಇನ್ನೊಂದೆಡೆ ಯುವಕನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು..
ಕೊನೆಗೂ ಪ್ರೀತಿ ಎಂಬುದು ಸಂಬಂಧ, ಹಣಕ್ಕೆ ಬಲಿಯಾಯಿತು.
ಈ ಯುವಕ ಬಡವನಾದರೂ ಸಹ ಪ್ರೀತಿಗೆ ಎಂದು ಸಹ ಮೋಸ ಮಾಡಿರಲಿಲ್ಲ. ನಿಜವಾಗಿಯೂ ಹೇಳಬೇಕೆಂದರೆ ಪರಿಶುದ್ದ ಪ್ರೀತಿ., ಅವನ ತಂದೆ-ತಾಯಿಗೆ ಹೇಳಿ ಹುಡುಗಿಯ ಮನೆಗೆ ಕೇಳಲು ಹೋದಾಗ ಇಲ್ಲಿ ಅವರ ಪ್ರೀತಿಗೆ ಅಡ್ಡ ಬಂದಿದ್ದು, ಹಣ, ಆಸ್ತಿ ಅಂತಸ್ತು ಎಂದರೆ ತಪ್ಪಗಲಾರದು. ಇಲ್ಲಿ ಹುಡುಗಿಯ ಕಡೆಯವರು ನನ್ನ ಮಗಳನ್ನು ಕೊಡುವುದಿಲ್ಲವೆಂಬ ಮಾತಿನ ಜೊತೆಗೆ ಬೇರೆ ನೆಪಗಳನ್ನು ಹೇಳಿ ಕಳುಹಿಸಿದ್ದರು.
ಈ ವಿಷಯ ಅವನಿಗೆ ತಿಳಿಯುತ್ತಿದ್ದಂತೆ ಅವನು ಮಾಡಿದ ಗೋಳನ್ನು ನೋಡಿದರೆ ನನ್ನ ಕಣ್ಣಲ್ಲಿ ನೀರು ಹನಿಯ ರೂಪದಲ್ಲಿ ಬರ ತೊಡಗುತ್ತಿತ್ತು.
ಸ್ನೇಹಿತನ ಪ್ರೀತಿಯ ಕಥೆಯನ್ನು ಕೇಳಿದ ನನಗೆ ಅರ್ಥವಾಗಿದ್ದು, ಪ್ರೀತಿ ಯಾರ್ ಬೇಕಾದ್ರು ಮಾಡ್ತರೆ… ಮೊದ್ಲು ಹಣ ಸಂಪಾದನೆ ಮಾಡು ಎಂಬುವುದು ನೆನಪಾಯಿತು.

ಬರಹ: ಎ. ರಾಕೇಶ್, ವರದಿಗಾರರು, ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

You missed

error: Content is protected !!