ಶಿವಮೊಗ್ಗ:
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಡಿವಿಜನಲ್ ಸೌತ್‌ವೆಸ್ಟ್ರನ್ ರೈಲ್ವೆ, ಮೈಸೂರು ವಿಭಾಗಕ್ಕೆ ರೈಲ್ವೆ ಯೂಜರ್ಸ್ ಕನ್ಸ್‌ಲ್‌ಟೇಟೀವ್ ಕಮೀಟಿ (ಡಿ.ಆರ್.ಯು.ಸಿ.ಸಿ) ನಾಮನಿರ್ದೇಶಿತ ಸದಸ್ಯರನ್ನಾಗಿ ಎಸ್.ಎಸ್. ಉದಯಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.


ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಸ್.ಉದಯ್‌ಕುಮಾರ್ ಈ ಹಿಂದೆಯೂ ಸದರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಜಿಲ್ಲೆಯ ರೈಲ್ವೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮುಂದಿನ ಅವಧಿಯಲ್ಲಿ ಮತ್ತೊಮ್ಮೆ ರೈಲ್ವೆ ಯೂಜರ್ಸ್ ಕನ್ಸ್‌ಲ್‌ಟೇಟೀವ್ ಕಮೀಟಿಗೆ ಪುನರಾಯ್ಕೆ ಮಾಡಿರುವುದಕ್ಕೆ ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೂ, ಅಧ್ಯಕ್ಷರಿಗೂ ಧನ್ಯವಾದಗಳನ್ನು ತಿಳಿಸಿದರು.


ಮುಂದೆಯೂ ಶಿವಮೊಗ್ಗ ಜಿಲ್ಲೆ ಮತ್ತು ನಗರಕ್ಕೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಗೆ ಆಗಬೇಕಾದ ಎಲ್ಲಾ ಸೌಲಭ್ಯಗಳ ಕುರಿತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಮಾಣಿಕೆ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಜಂಟಿ ಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿಯವರಾದ ಮಧುಸೂಧನ ಐತಾಳ್, ನಿರ್ದೇಶಕರುಗಳಾದ ಎಸ್.ಎಸ್ ಉದಯಕುಮಾರ್, ಪ್ರದೀಪ್ ವಿ. ಎಲಿ, ಪರಮೇಶ್ವರ್ ಇ, ಎಂ. ರಾಜು, ಜಗದೀಶ್ ಮಾತನವರ್, ಬಿ.ಆರ್ ಸಂತೋಷ್, ಕೆ.ಎಸ್ ಸುಕುಮಾರ್, ಗಣೇಶ ಎಂ. ಅಂಗಡಿ, ಬಿ.ಮಂಜೇಗೌಡ, ಮರಿಸ್ವಾಮಿ , ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್. ವಾಸುದೇವ, ಮಾಜಿ ಅಧ್ಯಕ್ಷರುಗಳಾದ ಎಂ. ಭಾರದ್ವಾಜ್, ಡಿ.ಎಂ. ಶಂಕರಪ್ಪ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!