ಶಿವಮೊಗ್ಗ:
ಮೂರು ವರುಷದ ಮಗುವಿನ ಮೇಲೆ ಪಕ್ಕದ ಮನೆಯ ಯುವಕನೇ ಅತ್ಯಾಚಾರವೆಸಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.
ಮಗುವಿಗೆ ಟಿವಿ ತೋರಿಸುವ ಆಮಿಷವೊಡ್ಡಿ ಕರೆದೊಯ್ದ ನೆರೆಮನೆ ಯುವಕ ಈ ನೀಚ ಕೃತ್ಯವೆಸಗಿದ್ದಾನೆ.
ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೃತ್ಯದ ಬಗ್ಗೆ ಗೊತ್ತಾಗಿದೆ.
ಆರೋಪಿ ಯುವಕನನ್ನು ಹಿಡಿದು ಪೋಷಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ತ ಎಷ್ಟು ವಿಕೃತನಾಗುತ್ತಿದ್ದಾನೆ. ಮಾನವೀಯ ಸಂಬಂಧಗಳಿಗೆ ಇರುವ ಬೆಲೆ ಕಳೆದುಕೊಳ್ಳುತ್ತಿದ್ದಾನೆ. ದುಶ್ಚಟ ಒಂದು ಕಡೆಯಾದರೆ, ಮತ್ತೊಂದೆಡೆ ವಿಕೃತತೆಯ ಮನಸು ತಾಂಡವವಾಡುತ್ತಿರುವು ದುರಂತವೇ ಹೌದು.