ಶಿವಮೊಗ್ಗ, ಅ.09;
ಗಂಡು ಮಗುವಿನ ಕನಸಿನೊಂದಿಗೆ ಎರಡನೇ ಹೆಂಡತಿಗೂ ಕಿರುಕುಳ ನೀಡಿ, ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿವರ: ವರದಕ್ಷಿಣೆ ಕಿರುಕುಳದ ಹಿನ್ನಲೆಯಲ್ಲಿ ಹಾಗೂ ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕೆ ಎರಡನೇ ಹೆಂಡತಿಯನ್ನ ದೂರ ಮಾಡಲು ಸಿದ್ದನಾದ ವ್ಯಕ್ತಿಯ ವಿರುದ್ಧ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ
ಭದ್ರಾವತಿಯ ಕೋಟೆ ರಸ್ತೆಯ ನಿವಾಸಿಗೆ ನಸ್ರುಲ್ಲಾ ಶರೀಫ್ ನೊಂದಿಗೆ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಸಾದಿಯಾ ಎಂಬುವರೊಂದಿಗೆ 2018 ರಲ್ಲಿ ಮದುವೆಯಾಗಿತ್ತು. ಮೂರುವರ್ಷದ ವೈವಾಹಿಕ ಜೀವನಜೀವನದಲ್ಲಿ 10 ತಿಂಗಳ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಸಾದಿಯಾರೊಂದಿಗೆ ಮದುವೆಯಾಗಲು ಮುನ್ನಾ ಶರೀಫರಿಗೆ ಈ ಮೊದಲೇ ಒಂದು ಮದುವೆಯಾಗಿ ವಿಚ್ಛೇದನವಾಗಿತ್ತು. ಅವರಿಗೂ ಸಹ ಹೆಣ್ಣು ಮಗುವಾಗಿತ್ತು.
ಸಾದಿಯಾ ಜೊತೆ ಮದುವೆಯ ವೇಳೆ 1 ಲಕ್ಷ ರೂ ವರದಕ್ಷಿಣಿ ಮತ್ತು ಬಂಗಾರದ ಉಂಗುರ ಮತ್ತು ಸರ ನೀಡಲಾಗಿತ್ತು. ಹೆಣ್ಣು ಮಗು ಹುಟ್ಟಿದ ಕಾರಣ ಸಾದಿಯಾಳಿಗೆ ಗಂಡು ಮಗು ಬೇಕು ಗಂಡು ಮಗುವಿದ್ದರೆ ಮನೆಯಲ್ಲಿರು ಇಲ್ಲ ಮನೆ ಬಿಟ್ಟು ಹೋಗು ಎಂಬ ಕಿರುಕುಳ ನೀಡುತ್ತಿದ್ದರು
ಮದುವೆ ನಂತರ ಶರೀಫ್ ಕೊಡುತ್ತಿದ್ದರು ಎಂದು ಎಫ್ ಐ ಆರ್ ನಲ್ಲಿ ದೂರಿದ್ದಾರೆ.
ಮದುವೆ ವೇಳೆ ಕೊಟ್ಟ ಹಣವನ್ನ ಖಾಲಿ ಮಾಡಿದ ಶರೀಫ್ ಬಂಗಾರದ ಮಾರಾಟ ಮಾಡಿ ಹೆಚ್ಚಿನ ಹಣವನ್ನ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಲು ಆರಂಭಿಸಿದ್ದಾರೆ. ಇದಕ್ಕೆ ಇವರ ತಂದೆ ತಾಯಿ ಸಪೋರ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಸಾದಿಯಾ ಮತ್ತು ನಸ್ರುಲ್ಲಾ ಶರೀಫ್
ಅಡುಗೆ ಎಣ್ಣೆ ಖಾಲಿಯಾಗಿದೆ ಹಣಕೊಡಿ ಎಂದಿದ್ದಕ್ಕೆ ನಸ್ರುಲ್ಲಾ ಶರೀಫ್ ನಿಮ್ಮಪ್ಪನ ಮನೆಯಿಂದಲೇ ತೆಗೆದುಕೊಂಡು ಬಾ ಎಂದು ಗದುರಿಸಿದ್ದಾನೆ.
ಹಣ ಒಡವೆ ತಂದರೆ ಮಾತ್ರ ಮನೆಯಲ್ಲಿ ಜಾಗ ಎಂದು ಕಾಲಿನಿಂದ ಎದೆಗೆ ಒದ್ದು ಇಲ್ಲೇ ನೇಣುಹಾಕುವುದಾಗಿ ಸಾದಿಯಾರವರ ಬಟ್ಟೆಯನ್ನ ಸಾರ್ವಜನಿಕವಾಗಿ ಹರಿದುಹಾಕಿದ್ದಾನೆ ಎಂದು ಸಾದಿಯಾ ದೂರಿನಲ್ಲಿ ಆರೋಪಿಸಿದ್ದಾರೆ.
ಅಕ್ಕಪಕ್ಕದ ಜನ ಆತನಿಂದ ಬಜಾವ್ ಆಗಿದ್ದು ಮರುದಿನ ಮೆಗ್ಗಾನ್ ಚಿಕಿತ್ಸೆ ಪಡೆದು ತವರು ಮನೆಗೆ ವಾಪಾಸಾಗಿದ್ದಾರೆ. ಆರೋಪಿ ನಸ್ರುಲ್ಲಾರಿಂದ ನ್ಯಾಯಕೊಡಿಸುವಂತೆ ಸಾದಿಯಾ ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರೊಂದಿಗೆ ಮಹಜರ್ ಗೆ ಹೋದಾಗ ನಸ್ರುಲ್ಲಾ ಮತ್ತು ಅವರ ಅಣ್ಣ ಸಾದಿಯಾರಿಗೆ ಜೀವ ಬೆದರಿಕೆ ಹಾಕಿರುವುದಾಗಿ ಕುಟುಂಬ ಆರೋಪಿಸಿದೆ.