ಶಿವಮೊಗ್ಗ:
ಇವತ್ತು ಶಿವಮೊಗ್ಗ ಮಹಾನಗರ ಪಾಲಿಕೆಗೆ ಅದೆಂತ ದಿನವೋ ಗೊತ್ತಿಲ್ಲ. ಸ್ಮಾರ್ಟ್ ಸಿಟಿ ಅವಾಂತರಗಳ ಬಗ್ಗೆ ನಿತ್ಯದ ಬೈಗುಳ ಇದು ಅಂದುಕೊಳ್ಳಬೇಡಿ. ಇದು ಪಾಲಿಕೆಯ ಕಂದಾಯ ವಿಭಾಗದ ಅವಾಂತರಗಳ ಬಗ್ಗೆ ನಡೆದ ಎಸಿಬಿ ಅಧಿಕಾರಿಗಳ ದಿಡೀರ್ ದಾಳಿ ಹಾಗೂ ಪರಿಶೀಲನೆ….!
ಘಟನೆ ಬಗ್ಗೆ ಅ ಸಿಕ್ಕ ಮಾಹಿತಿ ಇದು
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇಂದು ಭ್ರಷ್ಟಾಚಾರ ನಿಗ್ರಹ
ದಳದ(ಎಸಿಬಿ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.


ಎಸಿಬಿ ಡಿವೈಎಸ್ಪಿಗಳಾದ ಜಯಪ್ರಕಾಶ್, ಲೋಕೇಶ್, ಇನ್ಸ್ ಪೆಕ್ಟರ್ ವಸಂತಕುಮಾರ್
ಸೇರಿದಂತೆ 6 ಜನ ಇನ್ಸ್ ಪೆಕ್ಟರ್ ಗಳು ಮತ್ತು 20 ಮಂದಿ ಸಿಬ್ಬಂದಿ ವ್ಯವಸ್ಥಿತವಾಗಿ
ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಪಾಲಿಕೆಯ ಕಂದಾಯ ವಿಭಾಗದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿವೆ ಎಂಬ ದೂರಿನ
ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಜೊತೆಗೆ
ಸ್ಥಳದಲ್ಲಿದ್ದ ಮಧ್ಯವರ್ತಿಗಳ ವಿಚಾರಣೆ ನಡೆಸಿದ್ದಾರೆ. ಅವರ ಮೊಬೈಲ್ ನಂಬರ್
ದಾಖಲಿಸಿಕೊಂಡಿದ್ದಾರೆ. ಈ ದಾಳಿಯಿಂದಾಗಿ ಕಂದಾಯ ವಿಭಾಗದಲ್ಲಿ ಮಿಂಚಿನ ಸಂಚಲನ
ಉಂಟಾಗಿದೆ.


ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಅನೇಕ ಅಕ್ರಮ ಕಂಡು ಬಂದಿದ್ದು. ಪರಿಶೀಲನೆ
ಮುಂದುವರೆಸಲಾಗಿದೆ. ಸಮಗ್ರ ಮಾಹಿತಿ ಹುಡುಕಾಟದತ್ತ

ಸುದ್ದಿ ಮಾಹಿತಿಗೆ 9448256183

By admin

ನಿಮ್ಮದೊಂದು ಉತ್ತರ

error: Content is protected !!