ಶಿವಮೊಗ್ಗ: ಕುಡಿದ ಮತ್ತಿನಲ್ಲಿ ತಾಯಿಯನ್ನೇ ಮಗ ಕೊಲೆ ಮಾಡಿದ ಘಟನೆ ಇಲ್ಲಿಗೆ ಸಮೀಪದ ಬುಳ್ಳಾಪುರದಲ್ಲಿ ಮಂಗಳವಾರ ಸಂಭವಿಸಿದೆ.
ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ದೇವರಾಜ ನಾಯ್ಕ್ (೨೭) ಕೊಲೆ ಮಾಡಿ ಈಗ ಬಂಧಿತನಾಗಿದ್ದಾನೆ. ತಾಯಿ ವನಜಾಕ್ಷಿ ನಾಯ್ಕ್ ಕೊಲೆಗೀಡಾದವರು. ಕುಡಿದ ಮತ್ತಿನಲ್ಲಿ ಬಂದ ಮಗ ತಾಯಿಯ ಕಪಾಳಕ್ಕೆ ಹೊಡೆದು ಕೆಡವಿ, ಕಾಲಿನಿಂದ ತುಳಿದು ಸಾಯಿಸಿದ್ದಾನೆ. ಈ ಸಂಬಂಧ ಆತನ ತಂದೆ ಲೋಕೇಶ್ ನಾಯ್ಕ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ನವಜಾತ ಶಿಶು ಶವ ಪತ್ತೆ:
ಮೀನು ಹಿಡಿಯಲು ಹೋದ ಬೆಸ್ತರಿಗೆ ನವಜಾತ ಶಿಶುವಿನ ಶವ ಸಿಕ್ಕ ಘಟನೆ ಮಂಡಗದ್ದೆಯಿಂದ ವರದಿಯಾಗಿದೆ.
ಇನ್ನೂ ಕಣ್ಣುಬಿಡದ, ಹೊಕ್ಕುಳ ಬಳ್ಳಿ ಇರುವ ಗಂಡು ಮಗುವಿನ ಶವ ಇದಾಗಿದೆ. ಅಕ್ರಮ ಸಂಬಂಧದಿಂದ ಜನಿಸಿದ ಮಗು ಇದಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೀನು ಹಿಡಿಯಲು ಹೋದವರು ವ್ಯಕ್ತಿ ಈ ಬಗ್ಗೆ ಮಾಹಿತಿಯನ್ನು ಗ್ರಾಪಂ ಸದಸ್ಯರಿಗೆ ತಿಳಿಸಿದ್ದು, ಅವರು ಮಾಳೂರು ಪೊಲೀಸರಿಗೆ ದೂರು ನೀಡಿದ್ದಾರೆ.