ಶಿವಮೊಗ್ಗ: ಶಿವಮೊಗ್ಗ ಸಮೀಪ ಗಾಜನೂರಿ ನಲ್ಲಿ 10 ಎಕರೆ ಜಾಗದಲ್ಲಿ ನೂತನ ಕಟ್ಟಡದಲ್ಲಿ ನಿರ್ಮಾಣವಾಗಿರುವ ಶರಣ್ಯ ಆಶ್ರಯ ಮತ್ತು ಆರೈಕೆ ಕೇಂದ್ರ ಕಳೆದ ೧೫ ವರ್ಷಗಳಿಂದ ನೂರಾರು ಜನರ ಕಳೆದು ಹೋದ ಬದುಕನ್ನು ಕಟ್ಟಿಕೊಟ್ಟಿದೆ.


ಸುಮಾರು ೨೦ಕ್ಕೂ ಹೆಚ್ಚು ಬೆಡ್‌ಗಳ ವ್ಯವಸ್ಥೆ ಇಲ್ಲಿದ್ದು, ಮುಖ್ಯವಾಗಿ ಕ್ಯಾನ್ಸರ್, ಸಂಪೂರ್ಣ ಪ್ಯಾರಲಿಸಿಸ್ ಮುಂತಾದ ಉಲ್ಬಣಿಸಿದ, ಗುಣಮುಖವಾಗದ, ಯಾವುದೇ ವೈದ್ಯಕೀಯ ಔಷಧಿ ಚಿಕಿತ್ಸೆಗಳಿಗೆ ಸ್ಪಂದಿಸದ ಹಂತ ತಲುಪಿರುವ ರೋಗಗಳಿಂದ ನರಳುತ್ತಿರುವ ರೋಗಿಗಳಿಗೆ ಅತ್ಯುತ್ತಮ ಪರಿಸರ ಮತ್ತು ಸ್ವಚ್ಛತೆಯುಳ್ಳ ಈ ಆರೈಕೆ ಕೇಂದ್ರದಲ್ಲಿ ಉಚಿತವಾಗಿ ಆಶ್ರಯ, ಆರೈಕೆ, ಸಂತ್ವಾನ, ವೈದ್ಯಕೀಯ ಚಿಕಿತ್ಸೆ, ಊಟೋಪಚಾರ ಮತ್ತು ಆದ್ಯಾತ್ಮಿಕತೆ ನೀಡಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.
ರೋಗಿಯ ಜೊತೆಯಲ್ಲಿ ಅವರ ಕುಟುಂಬದ ಓರ್ವ ಸದಸ್ಯರಿಗೆ ಅವಕಾಶವಿದ್ದು, ಈ ವ್ಯವಸ್ಥೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಜಾತಿ, ಮತಬೇಧವಿಲ್ಲದೇ ಮಾಡಲಾಗು ತ್ತಿದೆ ಎಂದಿರುವ ಸಂಸ್ಥೆಯ ಅಧ್ಯಕ್ಷ ಟಿ.ಆರ್.ಅಶ್ವಥನಾರಾಯಣಶ್ರೇಷ್ಠಿ ಅವರು ಸೇವೆಯ ಅವಶ್ಯಕತೆ ಇರುವವರು ಮೊದಲು ರೋಗಿಯ ವೈದ್ಯಕೀಯ ದಾಖಲೆಗಳನ್ನು ಕೇಂದ್ರಕ್ಕೆ ಕೊಟ್ಟು ವೈದ್ಯರು ಸೂಚಿಸಿದ ನಂತರ ರೋಗಿಯನ್ನು ಕೇಂದ್ರಕ್ಕೆ ಕರೆತರಬೇಕು ಎಂದಿದ್ದಾರೆ.


ಈ ಕೇಂದ್ರಕ್ಕೆ ಆರ್ಥಿಕ ನೆರವು ನೀಡುವವರಿಗೆ ೮೦ಜಿ ರಿಯಾಯಿತಿ ಇದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ 095431043000018,, ಐಎಫ್‌ಎಸ್‌ಸಿ: ಯುಬಿಐಎನ್0809543ಗೆ ನೆರವು ನೀಡಲು ಕೋರಲಾಗಿದೆ. ಮದ್ಯಾಹ್ನ ೩ರಿಂದ ಸಂಜೆ ೬ರವರೆಗೆ ಗಾಜನೂರಿನ ಅಗ್ರಹಾರದಲ್ಲಿರುವ ಶರಣ್ಯ ಕೇಂದ್ರದ ಆಡಳಿತ ಕಛೇರಿಯಲ್ಲಿ ವಿವರ ಪಡೆಯಬ ಹುದು. ದೂರವಾಣಿ ಸಂಖ್ಯೆ08182 223366ಆಗಿರುತ್ತದೆ

By admin

ನಿಮ್ಮದೊಂದು ಉತ್ತರ

error: Content is protected !!