ಶಿವಮೊಗ್ಗ, ಜು.15: ಅನಗತ್ಯ ಧಾಂದಲೆ, ಪುಡಿಗಾಸಿಗೆ ದರೋಡೆಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ರೌಡಿ ಎನಿಸಿಕೊಳ್ಳಲು ಯತ್ನಿಸುತ್ತಿದ್ದ ನವುಲೆ ನಾಗೇಶ ನಿನ್ನೆ ರಾತ್ರಿ ಭೀಕರವಾಗಿ ಕೊಲೆಯಾಗಿದ್ದಾನೆ.
ಶಿವಮೊಗ್ಗ ಹೊರವಲಯದ ಬಸವನಗಂಗೂರು ನವುಲೆ ಮಧ್ಯದ ಚಾನಲ್ನ ಸುರಂಗದ ಬಳಿ ರಾತ್ರಿ ನವುಲೆ ನಾಗೇಶನಿಗೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ.
30 ವರ್ಷ ವಯಸ್ಸಿನ ನಾಗೇಶನನ್ನು ಕೊಂದವರ್ಯಾರು ಎಂಬುದನ್ನು ಹುಡುಕುವ ಕೆಲಸ ಈಗ ವಿನೋಬನಗರ ಪೊಲೀಸರ ಮೇಲಿದೆ. ಹುಡುಗಿಯ ವಿಚಾರವೊಂದಕ್ಕೆ ಇತನ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ಸಹ ಅದರಲ್ಲಿ ನಿಖರತೆ ಕಂಡು ಬರುತ್ತಿಲ್ಲ. ಶಿವಮೊಗ್ಗ ಗ್ರಾಮಾಂತರ, ವಿನೋಬನಗರ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಈತ ಇತ್ತೀಚೆಗಷ್ಟೆ ರೌಡಿ ಶೀಟರ್ನೊಳಗೆ ಹೆಸರು ಸೇರಿಕೊಂಡಿದ್ದ.
ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ ಟಿ.ಹೆಚ್.ಶೇಖರ್, ಡಿವೈಎಸ್ಪಿ ಈಶ್ವರ್ ಉಮೇಶ್ ಚಂದ್ರ, ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ವಿನೋಬನಗರ ಸಬ್ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಕೊಲೆ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ