ಸೊರಬ: ಎತ್ತುಗಳಿಗೆ ನೀರು ಕುಡಿಸಲು ಹೋದ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕಿನ ಭದ್ರಾಪುರ ಸಮೀಪದ ವರದಾ ನದಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಭದ್ರಾಪುರ ಗ್ರಾಮದ ನಿವಾಸಿ ಮಹೇಶ ಈರಪ್ಪ ದೊಡ್ಡ ಕುಂಬಾರ ಮನೆ ( 24) ಮೃತ ದುರ್ಧೈವಿ. ಈತ ಗುರುವಾರ ಸಂಜೆ ವರದಾನದಿಗೆ ಎತ್ತುಗಳಿಗೆ ನೀರು ಕುಡಿಸಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು, ನೀರು ಪಾಲಾಗಿದ್ದಾನೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ‌ ಪ್ರಯತ್ನದಿಂದ ಶುಕ್ರವಾರ ಬೆಳಗ್ಗೆ ಮೃತ ಯುವಕನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿತ್ತು.
ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By admin

ನಿಮ್ಮದೊಂದು ಉತ್ತರ

You missed

error: Content is protected !!