ಕೋವಿಡ್ ನಿಯಮದಂತೆ ಸಕಲ ಸಿದ್ಧತೆಮಾಡಿಕೊಂಡ ಆಯೋಗ

ದ್ರಾವತಿ, ಏ.26:


ಇಲ್ಲಿನ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ಹಳೇನಗರದ ಸಂಚಿ ಹೊನ್ಮಮ್ಮ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣಾಧಿಕಾರಿಗಳು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗಳಿಗೆ ಅಂತಿಮ ಮಾಹಿತಿ ನೀಡಿ ಮತ್ತು ಚುನಾವಣಾ ಪರಿಕರಗಳನ್ನು ವಿತರಿಸಿ ನಿಯೋಜಿತ ಮತಘಟ್ಟೆಗಳಿಗೆ ಕಳುಹಿಸಿದರು. ನಾಳೆ ನಡೆಯಲಿರುವ ಭದ್ರಾವತಿ ನಗರಸಭೆಯ ಚುನಾವಣೆಗೆ ಪೂರಕವಾಗಿ ಕೊರೊನಾ ನಿಯಮ ಪಾಲನೆಗೆ ಸಕಲ ವ್ಯವಸ್ಥೆ ಕೈಗೊಂಡಿದೆ.

ಭದ್ರಾವತಿ ಗೆಲುಮಾ ಹಾಲಿ ಹಾಗೂ ಮಾಜಿಯಾ,….? ನೂತನ ಪ್ರವೇಶವೋ?


ಈ ಸಂದರ್ಭದಲ್ಲಿ ಚುನಾವಣಾಕಾರಿಗಳಾದ ಶಿವಮೊಗ್ಗ ಉಪವಿಭಾಗಾಕಾರಿ ಪ್ರಕಾಶ್, ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಚುನಾವಣಾ ಸಿಬ್ಬಂದಿಗಳನ್ನುದ್ಧೇಶಿಸಿ ಮಾತನಾಡಿ ಮತಪತ್ರಗಳನ್ನು ಮತಯಂತ್ರದಲ್ಲಿ ಅಳವಡಿಸುವ ಕುರಿತಂತೆ ಮತ್ತು ಮತಘಟ್ಟೆಯಲ್ಲಿ ಮತದಾನದ ವೇಳೆ ಅನುಸರಿಸಬೇಕಾದ ಕ್ರಮ ಹಾಗೂ ಮತದಾರರ ಪಟ್ಟಿಯಲ್ಲಿರುವ ಹೆಸರು ಧೃಢಪಡಿಸಿ ಕೊಳ್ಳಲು ಮತದಾರರಿಂದ ಕೇಳಿ ಪಡೆಯಬೇಕಾದ ದಾಖಲಾತಿಗಳ ಪರಿಶೀಲನೆ ಎಲ್ಲವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಚುನಾವಣೆಯಲ್ಲಿ ವಿವಿಪ್ಯಾಟ್ ಇಲ್ಲ ಆದ್ದರಿಂದ ಮತಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪೂರ್ವಭಾವಿಯಾಗಿ ಖಚಿತಪಡಿಸಿಕೊಳ್ಳಬೇಕು. ತರಬೇತಿ ಅವಧಿಯಲ್ಲಿ ನೀಡಲಾದ ಎಲ್ಲಾ ಅಂಶಗಳನ್ನೂ ಚಾಚೂ ತಪ್ಪದೆ ಪಾಲಿಸಬೇಕು. ಚುನಾವಣೆ ಮುಗಿದ ನಂತರ ಅದೇ ವಾಹನದಲ್ಲಿ ಪುನಃ ಇದೇ ಸ್ಥಳಕ್ಕೆ ಮತಯಂತ್ರ ಹಾಗೂ ಪರಿಕರಗಳನ್ನು ತಂದು ಮುಟ್ಟಿಸುವವರೆಗೆ ಚುನಾವಣಾ ನಿಯೋಜಿತ ಸಿಬ್ಬಂದಿಗಳ ಜವಾಬ್ದಾರಿಯಿರುತ್ತದೆ, ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!