ಶಿವಮೊಗ್ಗ,ಜು.04: ಶಿವಮೊಗ್ಗ ಕೊರೊನಾ ಏರಿಕೆ ಬಗ್ಗೆ ಭಯ ಮಾಮೂಲಿಯಾಗಿದೆ. ಕಳೆದ ನಾಲ್ಕು ದಿನದಿಂದ ದಿನಪ್ರತಿ 23, 23, 31 ಹಾಗೂ ಇಂದು ಬಿತ್ತರವಾದ 8ರ ನಂತರದ ನಾಳೆ ಕನಿಷ್ಟ 23 ಜನರಿಗೆ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಶಿವಮೊಗ್ಗ ನಗರದ ಓರ್ವರ ಸಾವು ಸಹ ಸೇರ್ಪಡೆಯಾಗಿದೆ. ಇದರನ್ವಯ 274ಗಡಿಯನ್ನು ಮುಟ್ಟುತ್ತದೆ. ನಾಳಿನ ವರದಿಯಲ್ಲಿ ತ್ರಿಶತಕದ ಬಳಿಯ ಸಂಖ್ಯೆ ಕಾಣುವ ಎಲ್ಲಾ ಲಕ್ಷಣಗಳಿವೆ.
ನಿನ್ನೆ ರಾತ್ರಿ ತುಂಗಾತರಂಗ ಪತ್ರಿಕೆ ಹೇಳಿದ್ದಂತೆ ಶಿವಮೊಗ್ಗದಲ್ಲಿ ಇಂದು ಎಂಟು ಜನರಿಗೆ ಸೊಂಕು ಕಾಣಿಸಿಕೊಂಡಿದೆ. ಇದರಲ್ಲಿ ಹೊರಗಿನ ಜಿಲ್ಲೆಯ ಒಂದು ಸೇರಿದಂತೆ ಎಂಟು ಜನರಿಗೆ ಸೊಂಕು ಕಂಡುಬಂದಿದೆ.
ನಗರವೇ ಸೀಲ್ಡೌನ್ ಮಾಡಬೇಕಿದೆ
ನಾಳೆ ಸಂಜೆಯ ಹೊತ್ತಿಗೆ ಹೊರಬರುವ ಈ ಅಂಕಿಅಂಶಗಳಲ್ಲಿ ಮತ್ತೆ ಶಿವಮೊಗ್ಗ ನಗರದ್ದೇ ಮೇಲುಗೈ ಎನ್ನಬಹುದು.
ಶಿವಮೊಗ್ಗದ ಹೊಸಮನೆಯಲ್ಲಿ ಮತ್ತೊಂದು, ಗಾಂಧಿಬಜಾರ್ , ವಿನೋಬನಗರ, ಬಸವನಗುಡಿ, ಅಶೋಕನಗರ,ಟಿಪ್ಪುನಗರ ಸೇರಿದಂತೆ ಜಿಲ್ಲೆಯಲ್ಲಿ ಕನಿಷ್ಟ 23 ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ.
ಉಳಿದಂತೆ ಶಿಕಾರಿಪುರ, ಹೊಸನಗರ, ಸೊರಬ, ಭದ್ರಾವತಿಯಲ್ಲಿ ಕೇಸುಗಳಿವೆ ಎನ್ನಲಾಗಿದೆ.
ಎಂಟಕ್ಕೆ ಮುಗಿದಿರುವ ಇಂದಿನ ಸಂತೋಷ ನಾಳೆ ದ್ವಿದಶಕ ಮೀರಿರುವ ಹಿನ್ನೆಲೆಯಲ್ಲಿ ಆತಂಕ ಮೂಡಿಸಿದೆ.
ಲಾಕ್ ಡೌನ್ ಶಿವಮೊಗ್ಗದಲ್ಲಿ ಯಶಸ್ವಿ
ರಾಜ್ಯದಲ್ಲಿ ಕೊರೋನ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರೆ ನೀಡಿರುವ ಲಾಕ್ ಡೌನ್ ಗೆ ಶಿವಮೊಗ್ಗದಲ್ಲಿ ಇಂದು ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಅಗತ್ಯವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲಿ ಅಷ್ಟಕ್ಕೆ ಮಾತ್ರ ಜನಗಳು ಓಡಾಡುತ್ತಿರುವುದು ಕಂಡುಬರುತ್ತಿದೆ.
ಚುಟು ಚುಟು ಮಳೆ ಹಾಗೂ ಕಾಣದ ಚಂದ್ರಗ್ರಹಣ ಸಹ ಜನ ಹೊರಗೆ ಬರಲು ಹಿಂದು ಮುಂದು ಯೋಚಿಸುತ್ತಿದ್ದರೆಂಬುದು ಕಂಡುಬರುತ್ತಿದೆ. ಹಾಲು, ದಿನಸಿ ಹಾಗೂ ಇತರೆ ಖರೀದಿಗಷ್ಟೆ ಜನ ಅಲ್ಲಿ ಕಂಡುಬಂದಿದ್ದರು
ಶಿವಮೊಗ್ಗದ ಖಾಸಗಿ ಹಾಗೂ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಜನರ ಮತ್ತು ವಾಹನಗಳು ಹೆಚ್ಚಾಗಿ ಕಂಡುಬಂದರೂ ಸಹ ತಾಲೂಕುಗಳಿಗೆ ಹೋಗಲು ಅಲ್ಲಿ ಇಲ್ಲಿ ಬಸ್ ಗಳು ಇವೆಯಾ? ಎಂದು ವಿಚಾರಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ವಿನೋಬನಗರ ಹಾಗೂ ಇತರೆ ಕಡೆ ಲಸಕ್ ಡೌನ್ ಯಶಸ್ವಿಯಾಗಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು ಕಂಡು ಬಂತು.
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಸ್ಥಬ್ಧಗೊಂಡಿದೆ. ಭಾನುವಾರ ಲಾಕ್ ಡೌನ್ ಎಂದು ತಿಳಿದು ಬಂದರೂ ಸಹ ಅಲ್ಲಿ ಇಲ್ಲಿ ಮಹಿಳೆಯರು ಮಕ್ಕಳು ಕಂಡುಬರುತ್ತಿದ್ದಾರೆ.
ಜೊತೆಗೆ ಬಸ್ ನಿಲ್ದಾಣದ ಅಶೋಕ ವೃತ್ತದ ಬಳಿ ಬೆಳಗ್ಗೆ ಇಂದ ಯಾವುದೇ ಪೊಲೀಸ್ ಆಗಲಿ ಅಥವಾ ಗೃಹರಕ್ಷಕದಳದವರಾಗಲಿ ನಿಯೋಜಿಸದೆ ಇರುವುದು, ಬ್ಯಾರಿಕೇಡ್ ಗಳನ್ನ ರಸ್ತೆಯಲ್ಲಿ ಹಾಕದಿರುವುದು ಕಂಡುಬರುತ್ತದೆ.
(ರಾಜ್ಯ ಹಾಗೂ ಜಿಲ್ಲಾ ವರದಿಯ ಇಂದಿನ ಮಾಹಿತಿ ಹಾಗೂ ಟಿಪ್ಪುನಗರ ಸೀಲ್ಡ್ ಡೌನ್ ಚಿತ್ರಣ ನೀಡಲಾಗಿದೆ)