ಸಿಎಂ ತವರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತಂಕ

ಶಿವಮೊಗ್ಗ,ಜು.04: ಶಿವಮೊಗ್ಗ ಕೊರೊನಾ ಏರಿಕೆ ಬಗ್ಗೆ ಭಯ ಮಾಮೂಲಿಯಾಗಿದೆ. ಕಳೆದ ಮೂರು ದಿನದಿಂದ ದಿನಪ್ರತಿ 23, 23, 31 ಎಂಬಂತೆ ಇನ್ನೂರೈವತ್ತರ ಗಡಿ ದಾಟಿರುವ ಶಿವಮೊಗ್ಗದಲ್ಲಿ ಇಂದು ಕೇವಲ ಹೊರಗಿನ ಜಿಲ್ಲೆಯ ಒಂದು ಸೇರಿದಂತೆ ಎಂಟು ಜನರಿಗೆ ಸೊಂಕು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ದುರಂತವೆಂದರೆ, ನಾಳೆ ಸಂಜೆಯ ಹೊತ್ತಿಗೆ ಹೊರಬರುವ ಈ ಅಂಕಿಅಂಶಗಳಲ್ಲಿ ಶಿವಮೊಗ್ಗ ನಗರದ್ದೇ ಮೇಲುಗೈ ಎನ್ನಬಹುದು.
ಶಿವಮೊಗ್ಗದ ಹೊಸಮನೆ, ಗಾಂಧಿಬಜಾರ್, ಸೂಳೆಬೈಲಿನಲ್ಲಿ ತಲಾ ಒಬ್ಬರಿಗೆ ಸೊಂಕು ಬಂದಿದೆ.
ಉಳಿದಂತೆ ಶಿಕಾರಿಪುರ, ಸೊರಬ, ಸಾಗರ, ಭದ್ರಾವತಿಯಲ್ಲಿ ತಲಾ ಒಂದೂಂದು ಕೇಸುಗಳಿವೆ.
ಬಾಳೆಹೊನ್ನೂರು ಮೂಲದ ವ್ಯಕ್ತಿಯೊಬ್ಬ ಇಲ್ಲಿನ ಆಸ್ಪತ್ರೆಯಲ್ಲಿ ಸೊಂಕಿತ ಎಂದು ನಿರ್ಧಾರವಾಗಿದೆ.
ಎಂಟಕ್ಕೆ ಇಂದಿನ ನಿರ್ಧಾರ ಮುಗಿಯುವ ಲಕ್ಷಣಗಳಂತೂ ಇಲ್ಲವೇ ಇಲ್ಲ.


By admin

ನಿಮ್ಮದೊಂದು ಉತ್ತರ

You missed

error: Content is protected !!