ಶಿವಮೊಗ್ಗ,ಜು.03: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ರೌದ್ರ ನರ್ತನ ಮಾಡುತ್ತಿದೆ. ಇಂದು ಸಂಜೆಯ ಹೊತ್ತಿಗೆ 32 ಸೊಂಕಿತರು ಪತ್ತೆಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ಸೊಂಕಿತರ ಸಂಖ್ಯೆ ಇಂದಿನ 23ಸೊಂಕು ತಗುಲಿ 222ರ ಗಡಿಯಲ್ಲಿದ್ದ ಶಿವಮೊಗ್ಗದ ಪಾಲಿಗೆ ಇಂದು ಮತ್ತೆ ಇಂದು ಮುವತ್ತಕ್ಕೂ ಹೆಚ್ಚು ಜನ ಸೇರ್ಪಡೆಯಾಗಲಿದ್ದಾರೆಂದು ಮೂಲಗಳು ಹೇಳಿವೆ. ಈ ಮಾಹಿತಿ ನಾಳೆ ಸಂಜೆ ಆರೋಗ್ಯ ಇಲಾಖೆಯಿಂದ ಹೊರಬರುವ ನಿರೀಕ್ಷೆಗಳಿವೆ.
ಇಂದು ವೈದ್ಯರೊಬ್ಬರು ಸೇರಿದಂತೆ ಅಂದಾಜು 23ಜನರಿಗೆ ಸೊಂಕು ಕಾಣಿಸಿಕೊಂಡಿದೆ. ದುರಂತವೆಂದರೆ ನಿನ್ನೆ ಸಂಜೆ ಬಿಡುಗಡೆಯಾದ ಕೋವಿಡ್ 19ವರದಿಯಂತೆ ಜೂ 4ರಂದು ಸಹ 32 ಜನರಿಗೆ ಸೊಂಕು ಕಾಣಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಹೊರಬಿದ್ದಿರುವ 23ಸೇರಿ ಜಿಲ್ಲೆಯಲ್ಲಿ ಒಟ್ಟು 222 ಜನರಿಗೆ ಸೊಂಕು ಕಾಣಿಸಿಕೊಂಡಿತ್ತು.
ಶಿವಮೊಗ್ಗ ನಗರ ಸುಸ್ತು
ಈಗಿನ ಹೊಸ ಸೇರ್ಪಡೆ ಪ್ರಕಾರ ಶಿವಮೊಗ್ಗ 14, ಸೊರಬ11, ಶಿಕಾರಿಪುರ 5, ರಿಪ್ಪನ್ ಪೇಟೆ 2 ಪ್ರಕರಣಗಳ ವಿಚಾರ ನಾಳೆ ಬಹಿರಂಗವಾಗಲಿದೆ ಎನ್ನಲಾಗಿದೆ.
ಶಿವಮೊಗ್ಗ ನಗರದ ರವಿವರ್ಮಬೀದಿ ಅತಿ ಹೆಚ್ಚು ಅಂದರೆ 7, ಹೊಸಮನೆ 2, ಗೋಪಾಳ, ರವೀಂದ್ರನಗರ, ಅಶೋಕನಗರ ಸ್ವಾಮಿವಿವೇಕಾನಂದ ಬಡಾವಣೆಗಳಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತೀರಾ ಭಯ ಹುಟ್ಟಿಸಿರುವ ಶಿವಮೊಗ್ಗ ನಗರದ ರವಿವರ್ಮಬೀದಿ,
ಸ್ವಾಮಿ ವಿವೇಕಾನಂದ ಬಡಾವಣೆ, ಕುಂಬಾರಗುಂಡಿ, ತುಂಗಾನಗರ ಸೀಲ್ಡೌನ್ ಆದ ನಂತರ ಈಗ ರಾಜೇಂದ್ರ ನಗರ,ವಿನೋಬನಗರ, ಶಿವಪ್ಪನಾಯ್ಕ ಬಡಾವಣೆ, ಜಿಎಸ್ ಕೆಎಂ ರಸ್ತೆ, ರವಿವರ್ಮ ಬೀದಿ, ಪೆಕ್ಷನ್ ಮೊಹಲ್ಲಾ, ಬೇಡರಹೊಸಳ್ಳಿ ಸೇರಿದಂತೆ
ಭದ್ರಾವತಿ ಕಾಗದನಗರ, ಹಳೇನಗರ,ಶಿರಾಳಕೊಪ್ಪ, ತೀರ್ಥಹಳ್ಳಿ, ಶಿಕಾರಿಪುರದ ಹಲವು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಚನ್ನಗಿರಿ ಮೂಲದ ಮಹಿಳೆ ಹಾಗೂ ಶಿಕಾರಿಪುರ ಮೂಲದ ಮಹಿಳೆ ಸೇರಿ ಇಬ್ಬರು ಸಾವು ಕಂಡಿದ್ದಾರೆ. ಕಡೂರು ಮೂಲದ ಶಿಕ್ಷರರ ಸಾವು ಹಾಗೂ ಶಿವಮೊಗ್ಗ ಮೂಲದ ಮತ್ತೋರ್ವರ ಸಾವು ಸೇರಿ ನಾಲ್ಬರು ಸಾವು ಕಂಡಿರುವ ಮಾಹಿತಿ ಇಂದು ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಘೋಷಣೆಯಾಗಿದೆ.
ಭಯದ ನಡುವೆ ಬದುಕುತಿರುವ ಮಲೆನಾಡಿನಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಎನ್ನಲಾಗುತ್ತಿದೆ.