ಶಿವಮೊಗ್ಗ, ಫೆ.23:
ಮೀಸಲಾತಿ ವಿಷಯಕ್ಕೆ ಸಂಬಂಧ ಪಟ್ಟಂತೆ ತಮ್ಮ ಕುರುಬ ಸಮುದಾಯದ ಬಗ್ಗೆ ಹೋರಾಟ ನಡೆಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮರಳು ದಂಧೆಯ ಅಕ್ರಮದ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾಗಿರುವ ಶಾಸಕ ಆರಗ ಜ್ಞಾನೇಂದ್ರ ಅವರು ಮೊದಲು ಪಕ್ಷಕ್ಕೆ, ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಹೋರಾಟ ಮಾಡಲಿ ಎಂದು  ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಅವರ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರ ಸರ್ಕಾರದ ವಿರುದ್ಧ ಅವರದೇ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡುವುದೆಂದರೆ ಅಲ್ಲಿ ನ್ಯಾಯ ದೊರೆತಿಲ್ಲ ಎಂಬುದಾಗುತ್ತದೆಯಲ್ಲವೇ.? ವಿಷಯಗಳ ಬಗ್ಗೆ ವಿಧಾನ ಮಂಡಲದ ಅಧಿವೇಶನಗಳಲ್ಲಿ ಮಾತನಾಡಲಿಲ್ಲ. ಬೀದಿಗೆ ಬಂದು ಮಾತನಾಡಿದರೆ ಏನು ಪ್ರಯೋಜನಾ..? ಎಂದರು.
ಪ್ರತಿಭಟಿಸುವುದು ನಿಜವಾದರೆ ಮೊದಲು ಪಕ್ಷಕ್ಕೆ, ಅಧಿಕಾರಕ್ಕೆ ರಾಜಿನಾಮೆ ನೀಡಿ ಹೋರಾಟ ಮಾಡಿ ಎಂದ ಕಿಮ್ಮನೆ ರತ್ನಾಕರ್  ಅವರು ಜ್ಞಾನೇಂದ್ರ ಅವರು ದಿನ ಬೆಳಗ್ಗೆ ಮರಳು ಗುಡ್ಡೆಯ ಮೇಲೆ ಗಣಪನನ್ನು ಪೂಜಿಸುವ ಮೂಲಕ ದಿನ ಆರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಜಿ.ಪಂ.ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್, ಸದಸ್ಯ ಕಲಗೋಡು ರತ್ನಾಕರ್, ಪಾಲಿಕೆ ಸದಸ್ಯರಾದ ಹೆಚ್.ಸಿ.ಯೋಗೀಶ್, ರಮೇಶ್ ಹೆಗಡೆ ಹಾಗೂ ಇತರರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!