ಶಿವಮೊಗ್ಗ, ಫೆ.23:
ಪೊಲೀಸರು ನಿತ್ಯ ಗಸ್ತುಕಾಯುವ ಬೀಟಿನ ಸ್ಥಳದ ಮಗ್ಗುಲಲ್ಲೇ ಇರುವ ದೇವಾಲಯದ ಕಾಣಿಕೆ ಹುಂಡಿ ಹಾಗೂ ದೇವಿಯ ಮುಖವಾಡವನ್ನೇ ಕಳ್ಳರು ಅಪಹರಿಸಿರುವ ಘಟನೆ ರಾತ್ರಿಯ ಸರಿಹೊತ್ತಿನಲ್ಲಿ ನಡೆದಿದೆ.
ಶಿವಮೊಗ್ಗ ಸೋಮಿನಕೊಪ್ಪ ಮುಖ್ಯರಸ್ತೆಯಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಬೆಳ್ಳಿಯ ಮುಖವಾಡ ಸೇರಿದಂತ ಲಕ್ಷಾಂತರ ರೂ ಕಾಣಿಕೆ ಹಣ ಕಳುವು ಮಾಡಲಾಗಿದೆ.
ದುರಂತವೆಂದರೆ ವಿನೋಬನಗರ ಪೊಲೀಸರು ನಿತ್ಯ
ಕಾವಲಾಗಿರುವ ಈ ಸ್ಥಳದಲ್ಲಿ ಹಗಲು ರಾತ್ರಿ ಪೊಲೀಸರಿರುತ್ತಾರೆ. ಆದರೆ, ಈ ಘಟನೆ ನಡೆದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲದಿರುವುದು ಕಳುವು ಹೇಗೆ, ಯಾವಾಗ ಯಾರಿಂದ ಆಗಿರಬಹುದೆಂಬ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.ಬಾಗಿಲ ಬೀಗ ಹೊಡೆಯಲಾಗಿದೆ, ಕಾಣಿಕೆ ಡಬ್ಬಿಯನ್ನು ಒಡೆದ ಹಣ ತೆಗೆದುಕೊಂಡು ಹೋಗಿದ್ದಾರೆ. ವಿನೋಬನಗರ ಪೊಲೀಸರು ತನಿಖೆ ನಡೆಸಿದ್ದಾರೆ.