ಹೊನ್ನಾಳಿ ಫೆ:10:
ಇಲ್ಲಿನ ದುರ್ಗಿಗುಡಿ ಎರಡನೇ ಕ್ರಾಸ್ ನಿವಾಸಿ ಎಸ್ .ರಾಮಪ್ಪನವರ ಮಗ ಹರ್ಷಿತ್.ಎಸ್, (28) ಇಂದು ಬೆಳಗ್ಗೆ ಮನೆಯಿಂದ ತಾಲೂಕಿನ ರಾಂಪುರ ಗ್ರಾಮದಲ್ಲಿರುವ ತನ್ನ ಜಮೀನಿಗೆ ಫೋರ್ಡ್ ಎಕಾಸ್ಫೋರ್ಟ್(ಕೆ ಎ 17-ಎಂ ಎ 1235) ಕಾರ್ ನಲ್ಲಿ ಹೋಗಿ ಹೊನ್ನಾಳಿ ನಗರಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಳಿ ಮನೆಗೆ ಬರುವಾಗ ಹೊನ್ನಾಳಿ ಮತ್ತು ಗೊಲ್ಲರಹಳ್ಳಿ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ
ತುಂಗಭದ್ರಾ ನದಿಯ ಹೊಸ ಸೇತುವೆಯ ಮೇಲೆ ಕಾರ್ ವೇಗವಾಗಿ ಚಲಿಸುತ್ತಿರುವಾಗ ಕಾರ್ ನ ಮುಂದಿನ ಚಕ್ರ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಅಪ್ಪಳಿಸಿ ಸೇತುವೆಯ ಮೇಲಿಂದ ಕಾರ್ ಕೆಳಗಡೆ ಬಿದ್ದಿದ್ದು ಸಂಪೂರ್ಣ ಕಾರ್ ನುಚ್ಚು ಗುಚ್ಚಾಗಿದ್ದು. ಕಾರ್ ನಲ್ಲಿ ಹರ್ಷಿತ್ ಒಬ್ಬನೇ
ಪ್ರಯಾಣಿಸುತ್ತಿರುವಾಗಿ ತಿಳಿದುಬಂದಿದ್ದು, ಇದನ್ನು ಕಂಡ ಕೆಲವರು ಕೂಡಲೇ ಹೊನ್ನಾಳಿ ಪೊಲೀಸ್ ಠಾಣೆಗೆ ಫೋನ್ ಮೂಲಕ ತಿಳಿಸಿದ ಕೂಡಲೇ ಹೊನ್ನಾಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ನಲ್ಲಿ ಇದ್ದ ವ್ಯಕ್ತಿಯನ್ನು ಹೊನ್ನಾಳಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿತ್ತಾರೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.