ಶಿವಮೊಗ್ಗ: ತಿರ್ಥಹಳ್ಳಿ ತಾಲೂಕು ಹೆದ್ದೂರಿನಲ್ಲಿ ಅಡಕೆ ನುಂಗಿ ಹಸುಳೆಯೊಂದು ಅಸುನೀಗಿದ ಹೃದಯ ವಿದ್ರಾವಕ ಘಟನೆ ಶನಿವಾರ ನಡೆದಿದೆ.


ಸಂದೇಶ ಮತ್ತು ಅರ್ಚನಾ ದಂಪತಿ ಮಗು ನಿಶಾನ್ ದುರಂತ ಸಾವಿಗೀಡಾದ ಮಗು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ ಕುಟುಂಬ ಲಾಕ್ ಡೌನ್ ಕಾರಣಕ್ಕೆ ಊರಿಗೆ ಬಂದಿದ್ದು, ಬೆಂಗಳೂರಿಗೆ ಹೋಗುವ ತಯಾರಿಯಲ್ಲಿತ್ತು.

ಈ ಸಂದರ್ಭದಲ್ಲಿಯೇ ಮಗು ಸಾವುಕಂಡಿದೆ. ಒಂದು ವರ್ಷ ಒಂದು ತಿಂಗಳ ಪ್ರಾಯದ ಈ ಮಗು ಮನೆಯಲ್ಲಿ ಆಡುವಾಗ ಅಚಾನಕ್ ಆಗಿ ಅಡಕೆ ನುಂಗಿದೆ. ಆ ಕ್ಷಣದಲ್ಲಿಯೇ ಉಸಿರು ಕಟ್ಟಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದೆ. ಮಗುವಿಗೆ ಏನಾಯಿತೆಂಬುದರ ಅರಿವಾಗುವ ಮುನ್ನವೇ ದುರಂತ ನಡೆದುಹೋಗಿದೆ. ಇತ್ತೀಚೆಗಷ್ಟೇ ನಡೆದಿದ್ದ ಆರೋಗ್ಯವಂತೆ ಮಗು ಸ್ಪರ್ಧೆಯಲ್ಲಿ ನಿಶಾನ್‌ಗೆ ಪ್ರಥಮ ಬಹುಮಾನ ಬಂದಿತ್ತು. ಕರುಳ ಕುಡಿಯ ಕಳೆದುಕೊಂಡ ಪೋಷಕರ ಆಕ್ರಂದನ ಹೃದಯ ಕಲಕುತಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!