ವಿಕಸಿತ ಭಾರತ್ ಯುವ ನಾಯಕರ ಸಂಭಾಷಣೆ: ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ

 ಶಿವಮೊಗ್ಗ ನ. 27
 ಯುವ ಜನರಿಗೆ ಸನ್ಮಾನ್ಯ ಪ್ರಧಾನಿಯವರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಮತ್ತು ಭಾರತದ ಭವಿಷ್ಯಕ್ಕಾಗಿ ತಮ್ಮನ್ನು ಪ್ರಸ್ತುತ ಪಡಿಸುವ, ರಾಜಕೀಯ ಮತ್ತು ನಾಗರೀಕ ಜೀವನದಲ್ಲಿ ತೊಡಗಿಸಿಕೊಳ್ಳುವಿಕೆಗೆ ಸುವರ್ಣ ಅವಕಾಶವನ್ನು ವಿಕಸಿತ ಭಾರತ್ ಯುವ ನಾಯಕರ ಸಂಭಾಷಣೆ ಕಾರ್ಯಕ್ರಮ ಒದಗಿಸಲಿದೆ.
 ದೇಶದ ಎಲ್ಲಾ ಮೂಲೆಗಳಿಂದ ಆದರ್ಶಪ್ರಾಯ ಯುವ ದಾರ್ಶನಿಕರನ್ನು ಗುರುತಿಸುವುದು, ವಿಕಸಿತ ಭಾರತ್ ಬಗ್ಗೆ ಯುವಕರಿಗೆ ಅವರ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪರಿಣಾಮಕಾರಿ ವೇದಿಕೆ ಒದಗಿಸುವುದು, ಭಾರತೀಯರನ್ನು ಸಶಕ್ತಗೊಳಿಸಲು ಯುವಕರನ್ನು ಚಾಲನೆಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
 2025 ರ ಜನವರಿ 11 ಮತ್ತು 12 ರಂದು ರಾಷ್ಟಿçÃಯ ಯುವ ಉತ್ಸವ ಸಂದರ್ಭದಲ್ಲಿ ‘ವಿಕಸಿತ ಭಾರತ್ ಯುವ ನಾಯಕರ ಸಂವಾದ’ ನಡೆಯಲಿದೆ. ಈ 2 ದಿನದ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿ 3000 ಯುವ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ವಿಕಸಿತ ಭಾರತ್ ಯುವ ನಾಯಕರ ಸಂವಾದ-ರಾಷ್ಟಿçÃಯ ಯುವ ಉತ್ಸವ 2025 ರಲ್ಲಿ ಮೂರು ಪ್ರಮುಖ ವಿಭಾಗಗಳಲ್ಲಿ ಯುವ ನಾಯಕರ ಕ್ರಿಯಾತ್ಮಕ ಗುಂಪನ್ನು ಮಾಡಲಾಗುವುದು.
 ಮೊದಲ ಗುಂಪು ವಿಕಸಿತ್ ಭಾರತ್ ಚಾಲೆಂಜ್‌ನಲ್ಲಿ ಭಾಗವಹಿಸುವವರು, ಎರಡನೇ ಗುಂಪು ಚಿತ್ರಕಲೆ, ವಿಜ್ಞಾನ ಪ್ರದರ್ಶನಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಘೋಷಣೆ ಸ್ಪರ್ಧೆಗಳಲ್ಲಿ ಜಿಲ್ಲಾ, ರಜ್ಯ ಮಟ್ಟದ ಯುವಜನೋತ್ಸವಗಳಿಂದ ಆಯ್ಕೆಯಾದ ಯುವ ಪ್ರತಿಭೆ ಹಾಗೂ ಮೂರನೇ ಗುಂಪು ಉದ್ಯಮಶೀಲತೆ, ಕ್ರೀಡೆ, ಕೃಷಿ ಮತ್ತು ತಂತ್ರಜ್ಞಾನದAತಹ ಕ್ಷೇತ್ರಗಳಲ್ಲಿ ಅಸಾಧಾರಣ ಯುವ ಐಕಾನ್‌ಗಳನ್ನು ಒಳಗೊಂಡಿರುತ್ತದೆ. 3000 ಯುವ ನಾಯಕರ ಪೈಕಿ 1500 ಯುವ ನಾಯಕರನ್ನು ನನ್ನ ಭಾರತ್ ಪ್ಲಾಟ್‌ಫಾರ್ಮ್ನಲ್ಲಿ ವಿಕಸಿತ ಭಾರತ್ ಚಾಲೆಂಜ್‌ನಿAದ ಆಯ್ಕೆ ಮಾಡಲಾಗುತ್ತದೆ.
 ಒಂದನೇ ಹಂತದಲ್ಲಿ ವಿಕಸಿತ ಭಾರತ್ ಚಾಲೆಂಜ್ ರಸಪ್ರಶ್ನೆ ಕಾರ್ಯಕ್ರಮವು ಭಾರತದ ಹೆಗ್ಗುರುತು ಸಾಧನೆಗಳು ವಿಷಯ ಕುರಿತು ನ.25 ರಿಂದ ಆರಂಭವಾಗಿ ಡಿ.05 ರವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ವಿಕಸಿತ ಭಾರತ್ ಬ್ಲಾಗ್/ಪ್ರಬಂಧ ಸ್ಪರ್ಧೆ ನಡೆಯಲಿದೆ. ವಿಕಸಿತ ಭಾರತ್ ಚಾಲೆಂಜ್‌ನಲ್ಲಿ ಭಾಗವಹಿಸಲು ಮೈಭಾರತ್ ನಲ್ಲಿ www.mybharat.gov.in ಲಾಗಿನ್ ಆಗಬಹುದು ಎಂದು ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ ಟಿ ಕೆ ತಿಳಿಸಿದ್ದಾರೆ.

==

ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ ನವೆಂಬರ್ 27 ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಕಸಬಾ, ಶಿವಮೊಗ್ಗ ತಾಲ್ಲೂಕು ಕೋಟೆ ರಸ್ತೆಯಲ್ಲಿರುವ ವಸತಿ ಶಾಲೆಯಲ್ಲಿ ಆರೋಗ್ಯ ಮೇಲ್ವಿಚಾರಣೆಗಾಗಿ ಸ್ಟಾಫ್ ನರ್ಸ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
 ಸ್ಪಾಫ್ ನರ್ಸ್ ಹುದ್ದೆಗೆ ಜಿಎನ್‌ಎಂ ಅಥವಾ ಬಿಎಸ್ಸಿ ನರ್ಸಿಂಗ್ ಪದವಿಯನ್ನು ಪಡೆದ ಮಹಿಳಾ ಅಭ್ಯರ್ಥಿಗಳು ಡಿ.5 ರೊಳಗೆ ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಕಸಬಾ ಕೋಟೆ ರಸ್ತೆ ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ಇಎಸ್‌ಐ, ಪಿಎಫ್ ಕಟಾಯಿಸಿ ಮಾಸಿಕ ರೂ.13499/- ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9880238509 ಗೆ ಸಂಪರ್ಕಿಸಬಹುದಾಗಿದೆ ಎಂದು ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==

ಕಲ್ಮನೆ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಎರಡು ಶಾಸನ ಪತ್ತೆ
ಶಿವಮೊಗ್ಗ ನ. 27ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕರಾದ(ಪುರಾತತ್ತ್ವ)(ಪ್ರ) ಡಾ.ಆರ್.ಶೇಜೇಶ್ವರ ಮತ್ತು ಮಂಜಪ್ಪ ಚುರ್ಚಿಗುಂಡಿ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದ ಬನ್ನಿಕಾಳಮ್ಮನ ಗುಡಿಯ ಹತ್ತಿರ ಕಲ್ಯಾಣ ಚಾಲುಕ್ಯರ ಎರಡು ಶಾಸನಗಳು ಪತ್ತೆಯಾಗಿವೆ.
 ಈ ಎರಡು ಶಾಸನಗಳು ಕಲ್ಲಿನ ಶಾಸನಗಳಾಗಿದ್ದು ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕ್ರಿ.ಶ.1084 ಹಾಗೂ 1096 ರ ಕಾಲಕ್ಕೆ ಸೇರಿದವುಗಳಾಗಿವೆ.
 ಒಂದನೇ ಶಾಸನವು ಕ್ರಿ.ಶ 1084 ಕ್ಕೆ ಸೇರಿದ್ದಾಗಿದೆ. ಕಲ್ಮನೆಯ ಮಲ್ಲಿಕಾರ್ಜುನ ದೇವರಿಗೆ ದಾನ ಬಿಟ್ಟ ವಿಷಯವಿದ್ದು ಶಾಸನದ ಮೇಲ್ಬಾಗದಲ್ಲಿ ಸೂರ್ಯ ಚಂದ್ರ. ಲಿಂಗ ಪೂಜೆ ಮಾಡುತ್ತಿರುವ ಯತಿ, ನೀರಿನ ಕೊಡ, ಹಸು ಮತ್ತು ಕರುವಿನ ಉಬ್ಬು ಶಿಲ್ಪ ಇದೆ. ಸಂಕಗೊಣ್ಣನ ಹೆಂಡತಿ ಬೆಳೆಂಬೆ ಭೂಮಿ ದಾನ ನೀಡಿದ ವಿಷಯ ಇದೆ.
 ಎರಡನೇ ಶಾಸನವು 18 ಸಾಲುಗಳಿಂದ ಕೂಡಿದೆ. ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕ್ರಿ.ಶ 1096 ಕ್ಕೆ ಸೇರಿದ ಶಾಸನವಾಗಿದ್ದು ಇದರ ಮೇಲ್ಬಾಗದಲ್ಲೂ ಶಿವಲಿಂಗ ಮತ್ತು ಹಸು ಚಿತ್ರ ಇದೆ. ಇದು ಬಹಳ ಸವೆದಿದೆ. ಇಲ್ಲಿನ ಬೆಟ್ಟೇಶ್ವರ ದೇವರ ನಂದಾ ದೀಪಕ್ಕೆ 5 ಗದ್ಯಾಣ ದಾನ ಬಿಡಲಾಗಿದೆ. ಈ ಶಾಸನದಲ್ಲಿ ಕಲ್ಮನೆ ಗ್ರಾಮದ ಹೆಸರು ಕಲ್ಸಲವಾನಿ ಎಂದು ಉಲ್ಲೇಖವಾಗಿದೆ. ಶಾಸನವನ್ನು ಡಾ.ಜಗದೀಶ ಓದಿ ಅರ್ಥೈಸಿದ್ದು ಗ್ರಾಮಸ್ಥರಾದ ಡೈರಿ ಪರಶುರಾಮ, ಲೋಹಿತಾಚಾರ್, ಮಾಯಾಚಾರ್, ಶಿವಮೂರ್ತಪ್ಪ ಇವರುಗಳಿಗೆ ಧನ್ಯವಾದಗಳನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ-ಹಂಪಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕರು(ಪುರಾತತ್ವ)(ಪ್ರ) ಡಾ.ಶೇಜೇಶ್ವರ ತಿಳಿಸಿದ್ದಾರೆ.

==

ನ.30 ರಂದು ರಂಗಾಯಣದಲ್ಲಿ ಏಕಲವ್ಯ ನಾಟಕ ಪ್ರದರ್ಶನ
ಶಿವಮೊಗ್ಗ ನವೆಂಬರ್ 27:
ಶಿವಮೊಗ್ಗ ರಂಗಾಯಣವು ನ.30 ರಂದು ಸಂಜೆ 6.30 ಕ್ಕೆ ಕಾಲೇಜು ರಂಗೋತ್ಸವ 2024-25 ರಲ್ಲಿ ಏಕಲವ್ಯ ನಾಟಕವನ್ನು ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಇಲ್ಲಿ ಪ್ರದರ್ಶಿಸಲಿದೆ.
ಡಾ. ಸಿದ್ದಲಿಂಗಯ್ಯ ರಚನೆಯ, ಪ್ರಮೊದ್ ಶಿಗ್ಗಾಂವ್ ವಿನ್ಯಾಸ ಮತ್ತು ನಿರ್ದೇಶನದ, ನಾಗರ್ಜುನ ಕಾಲೇಜ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್, ಚಿಕ್ಕ ಮರಳಿ, ಚಿಕ್ಕಬಳ್ಳಾಪುರ ಜಿಲ್ಲೆ ಅಭಿನಯಿಸುವ ಏಕಲವ್ಯ ನಾಟಕವು ಮೂಡಲಪಾಯ ಶೈಲಿಯಲ್ಲಿ ನ.30 ರ ಸಂಜೆ 6.45 ಕ್ಕೆ ಪ್ರದರ್ಶನಗೊಳ್ಳಲಿದೆ. ಟಿಕೆಟ್ ದರ ಒಬ್ಬರಿಗೆ ರೂ. 30. ಗಳನ್ನು ನಿಗದಿಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

==

ಪೋಷಕತ್ವ ಯೋಜನೆಯಡಿ ಮಗು ಪಡೆಯಲು ಪೋಷಕರಿಂದ ಅರ್ಜಿ ಆಹ್ವಾನ
ಶಿವಮೊಗ್ಗ ನವೆಂಬರ್ 27:
 ರಾಷ್ಟಿçÃಯ ದತ್ತು ಮಾಸಾಚರಣೆ ಪ್ರಯುಕ್ತ ಪೋಷಕತ್ವ ಯೋಜನೆಯಡಿ ಮಗುವನ್ನು ಪಡೆಯಲು ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
 ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ 2021, ಸೆಕ್ಷನ್ 44 ಹಾಗೂ ನಿಯಮದಲ್ಲಿ ಉಲ್ಲೇಖಿಸಿದಂತೆ ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ ಸಾವು ಅಥವಾ ಇನ್ನತರೆ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳನ್ನು ವಿಸ್ತçತ ಕುಟುಂಬ ಸದಸ್ಯರು ಅಥವಾ ಅಸಂಬAಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವ ಹಾಗೂ ಕಾರಣಾಂತರಗಳಿAದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ನೀಡುವ ಪರ್ಯಾಯ ವ್ಯವಸ್ಥೆ ಮಕ್ಕಳನ್ನು ಪುನರ್ವಸತಿ ಮಾಡುವುದು ಹಾಗೂ ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸುವುದು ಪೋಷಕತ್ವ ಕಾರ್ಯಕ್ರಮದ ಗುರಿಯಾಗಿದೆ.
 ಸಾಮಾನ್ಯವಾಗಿ ಒಂದು ವರ್ಷದವರೆಗೆ ಅಗತ್ಯ ಪ್ರಕರಣಗಳಲ್ಲಿ ಪ್ರತಿ ವರ್ಷ ನವೀಕರಿಸಿ ಪೋಷಕತ್ವಕ್ಕೆ ಆಯ್ಕೆಯಾದ ಕುಟುಂಬ ಸದಸ್ಯರೊಂದಿಗೆ ಆರೈಕೆ ಮತ್ತು ರಕ್ಷಣೆಯ ಉದ್ದೇಶಕ್ಕಾಗಿ ಕೌಟುಂಬಿಕ ವಾತಾವರಣದಲ್ಲಿ ಪೊಷಕರನ್ನು ಇರಿಸಲಾಗುತ್ತದೆ. ಒಂದೇ ರೀತಿಯ ಸಂಸ್ಕೃತಿ, ಬುಡಕಟ್ಟು ಮತ್ತು ಸಮುದಾಯದ ಸಂಪರ್ಕವನ್ನು ಹಂಚಿಕೊಳ್ಳುವ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ. ಪೋಷಕತ್ವವು ಗುಂಪು ಪೋಷಕತ್ವವನ್ನು ಒಳಗೊಂಡಿರುತ್ತದೆ. ಆದ್ದರಿಂದ ಪೋಷಕತ್ವ ಯೋಜನೆಯಡಿ ಮಗುವನ್ನು ಪಡೆಯಲು ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿರುತ್ತದೆ.
 ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೋಳ, ಶಿವಮೊಗ್ಗಕ್ಕೆ ದೂರವಾಣಿ ಸಂಖ್ಯೆ:08182-295709 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
===

ಅಪಘಾತ ನಡೆಸಿದ ವ್ಯಕ್ತಿ ಪತ್ತೆಗೆ ಮನವಿ
 ಶಿವಮೊಗ್ಗ ನ. 27
 ಅ. 10 ರಂದು ರಾತ್ರಿ 7.20 ಕ್ಕೆ ನಗರದ ಸಾಗರ ರಸ್ತೆ ಹೆಲಿಪ್ಯಾಡ್ ಸರ್ಕಲ್ ಬಳಿ ಶಶಿಕುಮಾರ್ ಎಂಬುವವರ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಅನಾಮಧೇಯ ವ್ಯಕ್ತಿಯೋರ್ವರು ಮೋಟಾರ್ ಬೈಕ್‌ನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾರೆ.
 ಗಾಯಾಳುಗಳಾದ ಶಶಿಕುಮಾರ್ ಹಾಗೂ ಶಫಿ ಅಹ್ಮದ್ ಈ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬೈಕ್ ನಿಂದ ಡಿಕ್ಕಿ ಹೊಡೆಸಿz ಅನಾಮಧೇಯ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾತನಾಡಿಸಿಕೊಂಡು ಹೋಗಿರುತ್ತಾನೆ. ಆದರೆ ಅಪರಿಚಿತ ಬೈಕ್ ಸವಾರ ಮತ್ತು ಬೈಕಿನ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಈ ಭಾವಚಿತ್ರದಲ್ಲಿರುವ ವ್ಯಕ್ತಿಯನ್ನು ನೋಡಿದವರು ಪಿ.ಎಸ್.ಐ ಪಶ್ಚಿವi ಸಂಚಾರ ಪೊಲೀಸ್ ಠಾಣೆ ಮೊ.ನಂ. 9480803346 ಮತ್ತು ದೂ. ಸಂ. 08182 261417 ಮಾಹಿತಿ ನೀಡುವಂತೆ ಪಶ್ಚಿವi ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!