ಸಾಧಕರಿಗೆ ಸಂದ ಸನ್ಮಾನ
ಇಂದು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಶ್ರೀಧರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ರೋಟರಿ ಮಿಡ್ ಟೌನ್ ಶಿವಮೊಗ್ಗ, ರವರ ಪರವಾಗಿ ಕೋವಿಡ್ 19 ಸಾಂಕ್ರಾಮಿಕ ರೋಗ ಹತೋಟಿಗೆ ತರುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಸತತ ಆರು ತಿಂಗಳಿಗೂ ಹೆಚ್ಚು ಕಾಲ ಒಂದು ದಿನವೂ ವಿಶ್ರಾಂತಿಯ ರಜೆಯನ್ನು ಪಡೆಯದೆ ಕರ್ತವ್ಯ ನಿರ್ವಹಿಸಿದ ಹಿರಿಯ ಫಾರ್ಮಸಿ ಅಧಿಕಾರಿ ಟಿ. ವಿಜಯಕಾಂತ ರವರನ್ನು ಹಾಗೂ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ಮೇರಿಯಮ್ಮ ಇವರನ್ನು ಸನ್ಮಾನಿಸಲಾಯಿತು.
ಮೆಗ್ಗಾನ್ ಬೋಧನಾ ಆಸ್ಪತ್ರೆಯ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾಕ್ಟರ್ ಶ್ರೀಧರ್ ರವರು ಕರ್ತವ್ಯನಿಷ್ಠೆ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ದಿನದ ಕರ್ತವ್ಯವನ್ನು ಮುಗಿಸಿ ಮನೆ ಸೇರಿದರೆ ಪ್ರತಿಯೊಬ್ಬ ನೌಕರರ ಆರೋಗ್ಯ ದಕ್ಷತೆ ವೃದ್ಧಿಸಿ ಕೌಟುಂಬಿಕ ಸಾಮರಸ್ಯವು ಹೆಚ್ಚಾಗುವುದು, ಕೆಲಸ ನಿರ್ವಹಿಸಿದ ಆನಂದವು ಸಹ ಅಂತ ನೌಕರರಿಗೆ ಪ್ರಾಪ್ತಿಯಾಗುವುದು ಹಾಗಾಗಿ ಪ್ರತಿಯೊಬ್ಬ ನೌಕರರು ತಮ್ಮ ಕರ್ತವ್ಯ ಪರತೆಯನ್ನು ಪಾಲಿಸಬೇಕು , ಹೀಗೆ ಪ್ರತಿಯೊಬ್ಬ ನೌಕರರನ್ನು ಸನ್ಮಾನಿಸುವ ಅವಕಾಶ ನನ್ನದಾಗಬೇಕು ಎಂದರು.
ಸನ್ಮಾನಿತರ ಪರವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಫಾರ್ಮಸಿ ಅಧಿಕಾರಿ ಟಿ. ವಿಜಯಕಾಂತ ರವರು ನನ್ನ ಪಾಲಿನ ಕೆಲಸವನ್ನು ನಾನು ನಿರ್ವಹಿಸಿದ್ದೇನೆ ಇವತ್ತಿನ ಈ ಕ್ಷಣಕ್ಕೆ ವೈದ್ಯರು, ನರ್ಸಿಂಗ್ ಅಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಕ್ಷಕಿರಣ ತಂತ್ರಜ್ಞರು, ಹಾಗೂ ಸಹಾಯಕರು ಮತ್ತು ನನ್ನೊಟ್ಟಿಗೆ ಕೆಲಸ ನಿರ್ವಹಿಸುವ ಫಾರ್ಮಸಿ ಅಧಿಕಾರಿಗಳ ಸಹಕಾರದಿಂದ ಈ ಗೌರವಕ್ಕೆ ಭಾಜನ ನಾಗಿದ್ದೇನೆ ಹಾಗಾಗಿ ಇದು ಅವರೆಲ್ಲರಿಗೂ ಸೇರಿದ ಗೌರವ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾಕ್ಟರ್ ಶ್ರೀನಿವಾಸ್ ಡಾಕ್ಟರ್ ಶಿವಯೋಗಿ ಜಿಲ್ಲಾ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ವಿ ಪ್ರಭಾಕರ್, ಜಿಲ್ಲಾ ನರ್ಸಿಂಗ್ ಅಧಿಕಾರಿಗಳ ಸಂಘದ ಅಧ್ಯಕ್ಷೆ ಶ್ರೀಮತಿ ಚಂದ್ರಮತಿ ಹೆಗ್ಗಡೆ,ಲಕ್ಷಮಣ್, ಸಾವನ್ ಕುಮಾರ್ ರವಿಶಂಕರ್ ಶ್ರೀಮತಿ ಗೀತಾ ,ಮಂಜುನಾಥ್ ಅರುಣ ಮತ್ತಿತರರು ಹಾಜರಿದ್ದರು