ಸಾಗರ : ತಾಲ್ಲೂಕಿನ ಶರಾವತಿ ಹಿನ್ನೀರಿನ ಕಳಸವಳ್ಳಿ ಬಳಿ ತೆಪ್ಪ ಮುಳುಗಿ ಮೂವರು ಯುವಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ.


ತಾಲ್ಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ವಾಸಿ ಚೇತನ ಜೈನ್ (೨೮), ಹುಲಿದೇವರಬನ ವಾಸಿ ಸಂದೀಪ್ ಭಟ್ (೩೦), ಗಿಣಿವಾರ ವಾಸಿ ರಾಜು (೨೮) ಮೃತಪಟ್ಟ ಯುವಕರಾಗಿದ್ದಾರೆ.


ಬುಧವಾರ ಮಧ್ಯಾಹ್ನ ಐದು ಜನರು ಹೊಳೆ ಊಟಕ್ಕಾಗಿ ಕಳಸವಳ್ಳಿ ದಡಕ್ಕೆ ಹೋಗಿದ್ದರು. ಊಟ ಮುಗಿಸಿ ಐವರು ಅಂಬಾರಗೋಡ್ಲು ದಡಕ್ಕೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ತಪ್ಪಿ ನೀರಿನಲ್ಲಿ ಮುಳುಗಿದೆ. ತೆಪ್ಪದಲ್ಲಿದ್ದ ವಿನಯ್ ಮತ್ತು ಯಶವಂತ್ ಎಂಬುವವರು ಚೇತನ್, ಸಂದೀಪ್, ರಾಜು ಅವರನ್ನು ಹಿಡಿಯುವ ಪ್ರಯತ್ನ ನಡೆಸಿದ್ದು ಸಫಲವಾಗಲಿಲ್ಲ.


ಚೇತನ್ ಜೈನ್, ಸಂದೀಪ್ ಮತ್ತು ರಾಜು ಅವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಕಾರ್ಗಲ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!