ನಗರದ ಪಿಇಎಸ್ ಐಎಎಮ್‌ಎಸ್ ಕಾಲೇಜಿನಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ವಿವಿಧ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ೩ ದಿನಗಳ ಡಿಜಿಟಲ್ ಮೊಬೈಲ್ ಪ್ಲಾನೆಟೇರಿಯಂ ಶೋವನ್ನು ಆಯೋಜಿಸಲಾಗಿತ್ತು. ಕಳೆದ ವರ್ಷ ಚಂದ್ರಯಾನ-೩ ರ ಭಾಗವಾಗಿ ನಮ್ಮದೇಶದ ಹೆಮ್ಮೆಯ ಇಸ್ರೋ ಬಾಹ್ಯಾಕಾಶ ಸಂಸ್ಥೆಯು ಉಡಾವಣೆ ಮಾಡಿದ ರಾಕೆಟ್

ಯಶಸ್ವಿಯಾಗಿ ಚಂದ್ರನಕಕ್ಷೆಯನ್ನು ಸೇರಿ ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡಿತ್ತು. ಈ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ನಾಮಕರಣವನ್ನು ಮಾಡಲಾಗಿತ್ತು. ಈ ಸವಿನೆನಪಿಗಾಗಿ ಪ್ರತೀ ವರ್ಷ ಆಗಸ್ಟ್ ೨೩ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸುವಂತೆ ಕೇಂದ್ರ ಸರ್ಕಾರವು ಘೋಷಿಸಿತ್ತು. ಇದರ ಅಂಗವಾಗಿ ಈ ಔಟ್‌ರೀಚ್ ಕಾರ್ಯಕ್ರಮವನ್ನು

ಆಯೋಜಿಸಲಾಗಿತ್ತು. ಬೆಂಗಳೂರಿನ ವರ್ಣಾಜ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಅವರು ಹಾಗೂ ಇಸ್ರೋದ ಅಧಿಕೃತ ಬಾಹ್ಯಾಕಾಶ ಬೋಧಕ ಸಂಸ್ಥೆಯಾದ ತಾರೆ ಜಮೀನ್ ಪರ್ ಸಂಸ್ಥೆಗಳು ಮೊಬೈಲ್ ತಾರಾಲಯವನ್ನು ಸ್ಥಾಪಿಸಿದ್ದರು. ೩ ದಿನಗಳಲ್ಲಿ ೩೨ ಪ್ಲಾನೆಟೋರಿಯಂ

ಶೋಗಳನ್ನು ನಡೆಸಲಾಯಿತು. ವಿವಿಧ ಶಾಲೆ ಮತ್ತು ಪಿಯುಸಿ ಕಾಲೇಜುಗಳ ಸುಮಾರು ೧೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ಜರ್ನಿ ಟು ದಿ ಮೂನ್, ಅಡ್ವೆಂಚರ್ಸ್ ಆಫ್ ಸೌರವ್ಯೂಹ, ಡಾರ್ಕ್ ಎನರ್ಜಿ ಹಾಗೂ ಏಜ್ ಆಫ್ ಯುನಿವರ್ಸ್ ಮುಂತಾದ ವಿಷಯಗಳ ವೈಶಿಷ್ಟ್ಯಪೂರ್ಣ ಪ್ರದರ್ಶನಗಳನ್ನು ನಡೆಸಲಾಯಿತು. ಶಿವಮೊಗ್ಗ ಶಾಲಾ ವಲಯದಲ್ಲಿ ಡಿಜಿಟಲ್ ಮೊಬೈಲ್

ಪ್ಲಾನೆಟೇರಿಯಂ ಶೋ ವನ್ನು ಪ್ರಥಮ ಬಾರಿಗೆ ಆಯೋಜಿಸಿದ ಗರಿಮೆಯೂ ಪಿಇಎಸ್ ನ ಪಾಲಾಗಿತ್ತು. ಪ್ಲಾನೆಟೋರಿಯಂ ಶೋವನ್ನು ಪಿಇಎಸ್‌ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿಗಳಾದ ಡಾ. ನಾಗರಾಜ ಆರ್ ಅವರು ಉದ್ಘಾಟಿಸುವ ಮೂಲಕ ಚಾಲನೆಯನ್ನು ನೀಡಿದ್ದರು. ಪ್ರಾಂಶುಪಾಲರಾದ ಡಾ. ಅರುಣಾ ಎ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು,

ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ಈ ಕಾರ್ಯಕ್ರಮದ ಸಂಚಾಲಕರು ಹಾಗೂ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಯಶಸ್ವಿತಾ ಬಿ. ಚವ್ಹಾಣ್ ಹಾಗೂ ಸಾರ್ವಜನಿಕ ಸಂಬಂಧಗಳ ಕಾರ್ಯನಿರ್ವಾಹಕರಾದ ಅಭಿನವ್ ಯು ಅವರುಗಳು ಉಪಸ್ಥಿತರಿದ್ದರು. ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗದವರಿಂದ ಉತ್ತಮ ಪ್ರತಿಕ್ರಿಯೆ ಮೂಡಿ ಬಂದಿತು.

By admin

ನಿಮ್ಮದೊಂದು ಉತ್ತರ

error: Content is protected !!