ಶಿವಮೊಗ್ಗ: ಕನ್ನಡಿಗ ಮರಾಠಿಗರಾದ ನಾವು ಕನ್ನಡ ನಾಡಿನಲ್ಲೇ ನಮ್ಮ ನಿಷ್ಠೆ ಕರ್ನಾಟಕಕ್ಕೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕನ್ನಡನಾಡಿನ ಪರವಾಗಿ ಕನ್ನಡಿಗ ಮರಾಠಿಗರು ಬದ್ಧರಾಗಿದ್ದೇವೆ.
ಈ ಮಾತುಗಳು ಕ್ಷತ್ರಿಯ ಮರಾಠ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳದ್ದು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ತಾನಾಜಿರಾವ್, ಕನ್ನಡಿಗ ಮರಾಠರಾದ ನಾವು ಪರಿಶುದ್ಧ ಈ ನಾಡಿನಲ್ಲಿ ಜನಿಸಿದ್ದೇವೆ. ನಮ್ಮ ನಿಷ್ಠೆ ಕರ್ನಾಟಕಕ್ಕೆ ಮೀಸಲು. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕರ್ನಾಟಕದ ಭೂ ಭಾಗದ ಕೆಲವು ಸ್ಥಳಗಳನ್ನು ಆಕ್ರಮಿಸುವ ಬಗ್ಗೆ ಅಸಂಬಂಧ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಕರ್ನಾಟಕದ ಕನ್ನಡಿಗ ಮರಾಠಿಗರು ಇಲ್ಲಿನ ಭಾಷೆ, ನೆಲ, ಜಲವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಾವು ಕನ್ನಡಿಗ ಮರಾಠಿಗರು ಎಂಬುದೇ ಹೆಮ್ಮೆ. ಕನ್ನಡಿಗರ ಪರವಾಗಿ ಯಾವ ಹೋರಾಟಕ್ಕೂ ಸಿದ್ಧ ಎಂದರು.
ಕರ್ನಾಟಕದ ಗಡಿ ಭಾಗದ ಸ್ಥಳಗಳನ್ನು ಆಕ್ರಮಿಸುವಂತಹ ದುಸ್ಸಾಹಸಕ್ಕೆ ಮಹಾರಾಷ್ಟ್ರ ಕೈ ಹಾಕಿದರೆ ಮುಖ್ಯಮಂತ್ರಿ ಠಾಕ್ರೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಆದರಿಂದ ಈ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಕ್ನನಡಿಗರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ವಿ.ನರಸಿಂ ಹರಾವ್ ಜಾಧವ್, ಶಿವಕುಮಾರ್, ರಾಘ ವೇಂದ್ರ ಮತ್ತಿತರರಿದ್ದರು.