ಸಾಗರ(ಶಿವಮೊಗ್ಗ),ಜುಲೈ.೦೪:ಸಾಗರದ ಅಭಿವೃದ್ಧಿಗೆ ಮಾಜಿ ಶಾಸಕ ಹಾಲಪ್ಪನವರ ಕೊಡುಗೆ ಶೂನ್ಯ,ಅನುದಾನ ಬಿಡುಗಡೆ ಮಾಡಿಸದೆ ಕಾಮಗಾರಿ ಮಂಜೂರು ಮಾಡಿರುವುದೇ ಅವರ ಸಾಧನೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು.


ಅವರು ಸಾಗರದ ಜೈಲು ಅಬಿವೃದ್ಧಿ ಕಾಮಗಾರಿ ವೀಕ್ಷಣೆ ನಂತರ ಮಾದ್ಯಮದವರೊಂದಿಗೆ ಮಾತನಾಡಿ ಸಾಗರ ಬೈಪಾಸ್ ರಸ್ತೆಗೆ ಈಗ ಕಾಂಗ್ರೆಸ್ ಸರ್ಕಾರದಿಂದ ಅನುದಾನ ತಂದು ಕಾಮಗಾರಿ ಮಾಡಿಸಿದ್ದೇನೆ.ಹೊಸನಗರ ರಸ್ತೆ ಅಬಿವೃದ್ಧಿಗೂ ಹಣ ತಂದಿಲ್ಲ.ಕೇವಲ ಕಾಮಗಾರಿಗೆ ಅನುಮೋದನೆ ಪಡೆದಿದ್ದಾರೆ.ಪ್ರಸ್ತುತ ಕಾಂಗ್ರೆಸ್ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿದ್ದೇನೆ.ರಿಪ್ಪಿನ್‌ಪೇಟೆಯಲ್ಲಿನ ರಸ್ತೆ ವಿಭಜಕ

ಕಾಮಗಾರಿಗೂ ಈಗಿನ ಸರ್ಕಾರ ಹಣ ಬಿಡುಗಡೆಗೊಳಿಸಿದೆ.ಇದರಿಂದ ಹಾಲಪ್ಪನವರ ಸಾಧನೆ ಶುನ್ಯ ಎನ್ನುವುದು ಬಹಿರಂಗವಾಗಿದೆ ಎಂದರು.
ಸಾಗರದ ಒಳಚರಂಡಿ ಕಾಮಗಾರಿಗೆ ೨೦೦೮ ರಲ್ಲಿ ನಾನು ಶಾಸಕರಾಗಿದ್ದಾಗ ೭೦ ಕೋಟಿ ಅನುದಾನ ತಂದು ಕಾಮಗಾರಿ ಆರಂಬಿಸಿದ್ದೆ.ಈಗ ೨೦೨೪ ರಲ್ಲಿ ಮತ್ತೆ ನಾನೆ ಶಾಸಕನಾಗಿ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ೩೪ ಕೋಟಿ ರೂಗಳನ್ನು ಬಿಡುಗಡೆ ಮಾಡಿಸಿದ್ದು,ಅದರಲ್ಲಿ ೨೦ ಕೋಟಿ ರೂಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ.ಈ ಅನುದಾನದಲ್ಲಿ ಒಳಚರಂಡಿಯ ಕಾಮಗಾರಿ ಪೂರ್ಣಗೊಳಿಸಿ ಸಾಗರ ನಗರದ ಕಲ್ಮಶ ತ್ಯಾಜ್ಯದ ನೀರು ಸರಾಗವಾಗಿ ಸಾಗುವಂತೆ ಮಾಡಲಾಗುತ್ತದೆ ಎಂದರು.


ಸಾಗರದ ಮಿನಿವಿಧಾನಸೌದ ಕಟ್ಟಡಕ್ಕೆ ಕಾಗೋಡು ಸಾಹೇಬರು ೧೦ ಕೋಟಿ ರೂಗಳನ್ನು ಬಿಡುಗಡೆಗೊಳಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಂಕುಸ್ಥಾಪನೆ ಮಾಡಿಸಿದ್ದರು.ನಂತರ ಈಗ ೪.೮೦ ಕೋಟಿ ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರದಿಂದ ನಾನು ಶಾಸಕನಾಗಿ ಅನುದಾನ ತಂದಿದ್ದೇನೆ.ಈ ನಡುವೆ ಶಾಸಕರಾಗಿದ್ದವರ ಸಾಧನೆ ಏನು?ತಾಲ್ಲೂಕು ಕಚೇರಿ ಕಾಮಗಾರಿಯನ್ನು ೫ ವರ್ಷ ವಿಳಂಬ ಮಾಡಿರುವುದೇ ಮಾಜಿ ಶಾಸಕ ಹಾಲಪ್ಪನವರ ಸಾಧನೆಯಲ್ಲವೇ?ಎಂದು ಪ್ರಶ್ನಿಸಿದರು.


ವಿಜಯನಗರದಲ್ಲಿ ಈಜುಕೊಳ ನಿರ್ಮಾಣಕ್ಕೆ ೨೦೦೯ ರಲ್ಲಿ ೨ ಕೋಟಿ ಅನುದಾನ ನೀಡಿದ್ದು ಬೇಳೂರು,ನಂತರ ಕಾಗೋಡು ಸಾಹೇಬರು ೫೦ ಲಕ್ಷ ನೀಡಿದ್ದಾರೆ.ಈಗ ಮತ್ತೆ ನಾನು ಶಾಸಕನಾದ ಮೇಲೆ ೨೦ ಲಕ್ಷ ಅನುದಾನ ನೀಡಿದ್ದೇನೆ.ಆದರೇ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಮಾತ್ರ ಮಾಜಿ ಶಾಸಕ ಹಾಲಪ್ಪನವರು ಎಂದರು.


ಸಾಗರದ ಪ್ರವಾಸಿಮಂದಿರ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ.ಈಗ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ೫೦ ಲಕ್ಷ,ಅಲ್ಪಸಂಖ್ಯಾತರ ಅಭಿವೃದ್ಧಿಗೆ ೫ ಕೋಟಿ, ಪೋಸ್ಟ್ ಮೆಟ್ರಿಕ್ ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕೆ ೫ ಕೋಟಿ ಹಣ ಈಗ ಕಾಂಗ್ರೆಸ್ ಸರ್ಕಾರ ನೀಡಿದೆ ಎಂದರು.
ಸಾಗರದ ಮೀನು ಮಾರುಕಟ್ಟೆ ಅಭಿವೃದ್ಧಿಗೆ ಹೆಚ್ಚುವರಿ ೧.೨೦ ಕೋಟಿ ಅನುದಾನ ಬಿಡುಗಡೆಯಾಗಿದೆ.ಜೋಗದಲ್ಲಿನ ಯೂತ್ ಹಾಸ್ಟೆಲ್ ಪಾಳುಬಿದ್ದಿದೆ.ಆದ್ದರಿಂದ ಯೂತ್‌ಹಾಸ್ಟೆಲ್‌ನ ಪುನಶ್ಚೇತನಕ್ಕೆ ೯೦ ಲಕ್ಷ ರೂಗಳ ಅನುದಾನ ಬಿಡುಗಡೆಯಾಗಿದೆ.ನಗರೋತ್ತಾನದಲ್ಲಿ ಅನುದಾನ ತಂದು ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿದ್ದೇನೆ.ಯಾರೋ ತಂದಿರುವ ಅನುದಾನಗಳಿಗೆ ನಾನು ಗುದ್ದಲಿಪೂಜೆ ಮಾಡಲಿಲ್ಲ ಎನ್ನುವ ಮೂಲಕ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.


ಎಪಿಎಂಸಿ ಅನುದಾನದಲ್ಲಿ ಕಾಮಗಾರಿಗಳು ನಡೆಯಲಿದ್ದು,ಸಿದ್ದರಾಮಯ್ಯನವರು ಎಲ್ಲಾ ಶಾಸಕರುಗಳಿಗೂ ೮೦ ಕೋಟಿ ರೂಗಳ ಅನುದಾನ ನೀಡುವ ನಿರ್ಣಯ ಕೈಗೊಂಡಿದ್ದಾರೆ.ಇದರಿಂದ ತಾಲ್ಲೂಕಿನ ಬಹುತೇಕ ರಸ್ತೆಗಳ ಅಬಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಅಬಿವೃದ್ಧಿಯ ಪರ್ವವನ್ನೇ ಆರಂಭಿಸುತ್ತೇವೆ ಎಂದರು.


ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೊಳಿಯಪ್ಪ ಮನೆಘಟ್ಟ, ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಕಲ್ಸೆ,ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್‌ಬಾಬು,ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಗೆರೆ,ನಗರಸಭೆ ಸದಸ್ಯ ರವಿಲಿಂಗಿನಮಕ್ಕಿ,ಸಹಕಾರಿ ಭೀಮನೇರಿ ಆನಂದ ,ತಾರಮೂರ್ತಿ,ಗಣಪತಿ ಮಂಡಗಳಲೆ,ಸುರೇಶ್,ಗಿರೀಶ್‌ಕೋವಿ ,ರಮೇಶ್ ಟಿ.ಪಿ.ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!