ಶಿವಮೊಗ್ಗ, ಜು.,02:
ಹುಡುಕಾಟದ ವರದಿ
ಶಿವಮೊಗ್ಗ ಮೀನುಗಾರಿಕೆ ಇಲಾಖೆ ನಬಾರ್ಡ್ ನಿಂದ ಸಾಲ ಪಡೆದ ಹಣವನ್ನು ಟೆಂಡರ್ ಹಾಗೂ ಹಳೆಯ ಕಾಮಗಾರಿಯನ್ನೇ ಪುನಹ ರೀ ಎಸ್ಟೀಮೇಟ್ ಮಾಡಿರುವುದರಿಂದ ಕೋಟ್ಯಾಂತರ ರೂಪಾಯಿ ಹಣದ ಭ್ರಷ್ಟಾಚಾರ ನಡೆದಿದೆ ಎಂದು ನಂಬಲರ್ಹ ಮೂಲಗಳು ಪತ್ರಿಕೆಗೆ ತಿಳಿಸಿವೆ.
ನಬಾರ್ಡ್ ನಿಂದ ಪಡೆದ ಸಾಲಕ್ಕೆ ಇಲ್ಲಿಯವರೆಡಗೆ ಅಪಾರ ಬಡ್ಡಿ ಹಣವನ್ನು ಕಟ್ಟಬೇಕಿರುವುದಲ್ಲದೆ, 2023 ಸೆಪ್ಟೆಂಬರ್ ನಲ್ಲಿ ಕರೆದಿದ್ದ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ತಿಲಾಂಜಲಿ ನೀಡಿ ಈಗ 2024ರಲ್ಲಿ ರೀ ಟೆಂಡರ್ ಕರೆದು ತಮಗೆ ಅಪಾರ ಮೊತ್ತದ ವ್ಯವಹಾರ ಬರುವಂತೆ ಮಾಡಿಕೊಂಡು ಬಾರಿ ವಂಚನೆ ಮಾಡಿದ್ದಾರೆ ಎಂಬುದು ಈ ಆರೋಪಗಳ ಮೂಲ ಪ್ರಶ್ನೆ.
2022 ರಲ್ಲಿ ಪಡೆದ ಸಾಲಕ್ಕೆ ಸಂಬಂಧಪಟ್ಟಂತೆ 2023 ಸೆಪ್ಟೆಂಬರ್ ನಲ್ಲಿ ಈ ಪ್ರಕ್ಯೂರ್ಮೆಂಟ್ ಮೂಲಕ ಟೆಂಡರ್ ಕರೆದಿದ್ದು, ಅದರಲ್ಲಿ ಏಳು ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಸೌಮ್ಯ ದೇವದಾಸ್ ಶೆಟ್ಟಿ ಕಮಲ ಕಿಶೋರ್ ಹೆಗಡೆ, ಪಾಲಿಮರ್ ಗಿರೀಶ್ , ಕೋನಿ ಫಿಲಿಫ್ ಡಿಸೋಜ, ಎಸ್ ಅಬ್ದುಲ್ ಖಾದರ್, ದಿವಾಕರ ಶೆಟ್ಟಿ ಬಿ., ಅಬ್ದುಲ್ ಬಿಲಾಂ ಅಜಾದ್ ಅವರು ಈ ಟೆಕ್ನಿಕಲ್ ಬಿಡ್ ನಲ್ಲಿ ಪಾಸಾಗಿ ಫೈನಾನ್ಸಿಯಲ್ ಬಿಡ್ ಗೆ ಅರ್ಹರಾಗಿರುತ್ತಾರೆ.
ಆದರೆ ಈ ಟೆಂಡರನ್ನು ಐಡಿ ಪೋರ್ಟ್ ಹಾಗೂ ಐವಿಟಿ ಡಿಪಾರ್ಟ್ಮೆಂಟ್ ಪೋರ್ಟ್ ಅಂಡ್ ಉಡುಪಿಯ ಮೀನುಗಾರಿಕೆ ವಿಭಾಗ ರದ್ದುಗೊಳಿಸಿದೆ ಎಂದಿದ್ದಾರೆ.
ಕಾರಣ ಭಾಗವಹಿಸಿದ ಗುತ್ತಿಗೆದಾರದಿಂದ ಅಧಿಕಾರಿಗಳು ಬಹಳಷ್ಟು ಹಣ ಕೇಳಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ಎಸ್ ಆರ್ ದರಕ್ಕಿಂತ ಕಡಿಮೆ ದರಕ್ಕೆ ಕೋಟ್ ಮಾಡಿದ್ದ ಕಾರಣದಿಂದ ನಾವು ಯಾವುದೇ ಹಣವನ್ನು ಕೊಡಲು ಒಪ್ಪುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದರಂತೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಲಾಭವಾಗುತ್ತಿತ್ತು. ಆದರೆ ಅಧಿಕಾರಿಗಳೆಲ್ಲರೂ ಸೇರಿ ತಮಗೆ ದೊಡ್ಡ ಮಟ್ಟದ ಹಣ ಸಿಗಲ್ಲವೆಂದು ಟೆಂಡರ್ ರದ್ದುಗೊಳಿಸಿ ಪುನಃ 2024ರಲ್ಲಿ ರೀ ಟೆಂಡರ್ ಮೂಲಕ ತಮಗೆ ಬೇಕಿರುವ ವ್ಯಕ್ತಿಗೆ ಈ ಟೆಂಡರ್ ನೀಡಿದ್ದಾರೆ. ಈ ಟೆಂಡರ್ ಗೆ ಸಂಬಂಧಪಟ್ಟಂತೆ ನಬಾರ್ಡ್ ನಿಂದ ಪಡೆದ ಸಾಲಕ್ಕೆ ದುಬಾರಿ ಬಡ್ಡಿ ಬೀಳಲು ಟಂಡರನ್ನು ವರ್ಷಗಟ್ಟಲೆ ವಿಳಂಬ ಮಾಡಿದ್ದಲ್ಲದೆ ಇವರು ಮಾಡಿರುವ ಎಸ್ಟಿಮೇಟ್ ಹಾಗೂ ಇತರ ವಿಷಯದಲ್ಲಿ ಸರ್ಕಾರಕ್ಕೆ ದೊಡ್ಡ ಮೋಸವಾಗಿರುತ್ತದೆ ಎಂದಿದ್ದಾರೆ.
ಏಕೆಂದರೆ ಭದ್ರಾ ಪ್ರಾಜೆಕ್ಟ್ ನಲ್ಲಿ ಇರುವ ಇಲಾಖೆಯಲ್ಲಿ ಮೂರು ವಿಭಾಗವಿದ್ದು ಬಂದ್ ಬೀಡಿಂಗ್, ನ್ಯಾಷನಲ್ ಫಿಶರೀಸ್, ಟ್ರೈನಿಂಗ್ ಸೆಂಟರ್ ನಲ್ಲಿ ತಲಾ ಒಬ್ಬೊಬ್ಬ ಡೆಪ್ಯುಟಿ ಡೈರೆಕ್ಟರ್ ಇರುತ್ತಾರೆ. ಈ ಮೂರು ವಿಭಾಗಗಳಲ್ಲಿ ಕಳೆದ ಐದು ವರ್ಷಗಳಿಂದಲೂ ಪ್ರತಿ ವರ್ಷವೂ ನಿರ್ಮಿತಿ ಕೇಂದ್ರ, ಬ್ರಿಡಲ್ ನಿರ್ದೇಶಕರ ಕಛೇರಿ ಬೆಂಗಳೂರು ಈ ಸಂಸ್ಥೆಗಳ ಮೂಲಕ ಮಾಡಿಕೊಂಡಿರುತ್ತಾರೆ ಪ್ರತಿವರ್ಷವೂ ಇದೇ ಕಾಮಗಾರಿಯನ್ನು ತೋರಿಸಿ ಕೋಟ್ಯಾಂತರ ಬಿಲ್ ಪಡೆದಿರುತ್ತಾರೆ ಎಂಬುದು ಮತ್ತೊಂದು ಗಂಭೀರ ಆರೋಪ.
ಈಗ ಕರೆದಿರುವ ಟೆಂಡರ್ ನಲ್ಲಿ ಮತ್ತು ಹಳೆಯ ಕಾಮಗಾರಿಯನ್ನೇ ಪುನಃ ರೀ ಎಸ್ಟಿಮೇಟ್ ಮಾಡಿ ಶೇಕಡ 60ರಷ್ಟು ಮುಗಿದಿರುವ ಕಾಮಗಾರಿಯನ್ನೇ ಈ ಟೆಂಡರ್ ನಲ್ಲಿ ಸೇರಿಸಿರುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಬಹುತೇಕ ಎಲ್ಲಾ ಅಧಿಕಾರಿಗಳು ಸೇರಿ ಹೊಸ ಗುತ್ತಿಗೆದಾರರಿಗೆ ಕೋಟ್ಯಾಂತರ ರೂಪ ಹಣವನ್ನು ಪಡೆದು ಗುತ್ತಿಗೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಬಹುದೊಡ್ಡ ನಷ್ಟ ಉಂಟು ಮಾಡಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಈ ಈ ಮೂಲಗಳು ಹಲವು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೂಡಲೇ ನ್ಯಾಯ ಒದಗಿಸಬೇಕು ಹಾಗೂ ಆಗಿರುವ ವಂಚನೆಯನ್ನು ಟೆಂಡರ್ ನ ಬೊಗಸ್ ಎಸ್ಟೀಮೇಟ್ ಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.