ಶಿವಮೊಗ್ಗ,ಜೂ.೨೫:
ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಂಘದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ನೂತನ ವಿಧಾನ ಪರಿಷತ್ತಿನ ಸದಸ್ಯರಾದ ಎಲ್.ಎಲ್. ಭೋಜೇಗೌಡರ ಅಭಿನಂದನಾ ಸಮಾರಂಭದ ಕುರಿತಾಗಿ ನಡೆಯುತ್ತಿರುವ ಅಪ್ರಚಾರದ ಕುರಿತಾಗಿ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ಸ್ಪಷ್ಟನೆ ನೀಡಿದೆ.


ಸಂಘದ ಸಭಾಂಗಣದಲ್ಲಿ ಭೋಜೇಗೌಡ ರಿಗೆ ಅಭಿನಂದನಾ ಸಮಾರಂಭ ಮತ್ತು ಮನವಿ ಪತ್ರ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಅನೇಕ ಕಾರ್ಯಭಾರದ ನಡುವೆಯೂ ಕಾರ್ಯಕ್ರಮಕ್ಕೆ ಬರುವುದಾಗಿ ಭೋಜೇಗೌಡರು ಆಶ್ವಾಸನೆ ನೀಡಿದ್ದರು. ಅದರಂತೆ ಒತ್ತಡಗಳ ನಡುವೆಯೂ ಅವರು ಸಂಘಕ್ಕೆ ಬೇಟಿ ನೀಡಿ ಸಂಘದ ಹಾಗೂ ಶಿಕ್ಷಕರ ಕುರಿತಾಗಿ ಸರ್ಕಾರಕ್ಕೆ ಅಧಿವೇಶನದಲ್ಲಿ ಒತ್ತಾಯ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಸಂಘವು

ಭೋಜೇಗೌಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತದೆ. ಕಾರ್ಯಕ್ರಮ ನಡೆಯಬೇಕಾದರೆ, ಸಭೆ ಮುಕ್ತಾಯಕ್ಕೆ ಬಂದು ಭೋಜೇಗೌಡರು ಸನ್ಮಾನ ಸ್ವೀಕರಿಸಿ, ನಂತರ ವಿನಯಪೂರ್ವಕವಾಗಿ ಸಭೆಯ ಅನುಮತಿ ಪಡೆದು ಹೊರಡಲನುವಾದಾಗ ಸಭೆಯಲ್ಲಿ ಎರಡು ಮೂರು ಜನ ಪ್ರಶ್ನೆ ಕೇಳಲು ಅನುವಾದಾಗ ಸ್ವಲ್ಪ ಗೊಂದಲ

ಉಂಟಾಗಿ ಭೋಜೇಗೌಡರು ಈಗ ಸಮಯದ ಅಭಾವ ವಿದೆ. ಸಂಘದವರು ಪ್ರವಾಸಿ ಮಂದಿರಕ್ಕೆ ಬನ್ನಿ, ರಾತ್ರಿ ಎಷ್ಟು ಹೊತ್ತಾದರೂ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಈಗ ಇನ್ನೊಂದು ಕಾರ್ಯಕ್ರಮಕ್ಕೆ ತೆರಳುವುದಿದೆ ಎಂದು ಹೊರಟರು.


ಇದು ನಡೆದ ಘಟನೆ. ಇನ್ನೆಲ್ಲಾ ಸತ್ಯಕ್ಕೆ ದೂರವಾದದ್ದು. ಈ ಸಮಾರಂಭದ ಬಗ್ಗೆ ಅಪಪ್ರಚಾರ ನಡೆಯುತ್ತಿರುವುದನ್ನು ಸಂಘವು ಖಂಡಿಸುತ್ತದೆಂದು ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!