ಸಾಗರ : ಜೋಗ ಜಲಪಾತ ಅಭಿವೃದ್ದಿಗೆ ಅನುದಾನ ತಂದಿದ್ದಾಗಿ ಸಂಸದ ಬಿ.ವೈ.ರಾಘವೇಂದ್ರ ಹೇಳುತ್ತಿರುವುದು
ಶುದ್ದಸುಳ್ಳು. ನಾನು ಶಾಸಕನಾದ ಮೇಲೆ ಜೋಗ ಜಲಪಾತ ಅಭಿವೃದ್ದಿಗೆ ೯೫ ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.


ಇಲ್ಲಿನ ನಗರಸಭೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಕಾರ್ಯಚಟುವಟಿಕೆ ಪರಿಶೀಲನೆ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮೊದಲು ೨೦ ಕೋಟಿ ರೂ. ಮಂಜೂರು ಮಾಡಿಸಿದ್ದು, ಈಗ ೭೫ ಕೋಟಿ ರೂ. ಮಂಜೂರು ಆಗುತ್ತಿದೆ. ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಹಣ ಕೊಟ್ಟಿರಲಿಲ್ಲ. ನಾನು ಶಾಸಕನಾದ ಮೇಲೆ ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ಹೇರಿ ಅನುದಾನ ಮಂಜೂರು ಮಾಡಿಸಿದ್ದೇನೆ. ಹಿಂದಿನ ಶಾಸಕರೂ ಸಹ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.


ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಅಗತ್ಯ ಇರುವ ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವುದು, ಹಂಪ್ ಹಾಕಲು ಮಾಹಿತಿ ಕೇಳಲಾಗಿದ್ದು ಸದ್ಯದಲ್ಲಿಯೆ ಅಳವಡಿಸಲಾಗುತ್ತದೆ. ಮೀನು ಮಾರುಕಟ್ಟೆಗೆ ೧.೨೦ ಕೋಟಿ. ಮಿನಿ ವಿಧಾನ ಸೌಧಕ್ಕೆ ರೂ. ೪.೮೦ ಕೋಟಿ. ಆಸ್ಪತ್ರೆಗೆ ೧.೭೦ ಕೋಟಿ ರೂ. ಹೀಗೆ ಎಲ್ಲ ಕಡೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಸರ್ಕಾರದ ಬಳಿ ಹಣ ಇಲ್ಲ. ನಾನು ಅನುದಾನ ತಂದಿಲ್ಲ ಎಂದು ಹೇಳುವವರು ಇದನ್ನೆಲ್ಲ ಗಮನಿಸಬೇಕು. ಈ ಬಾರಿ ೩.೭೧ಸಾವಿರ ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಮುಂದಿನ ವರ್ಷ ೪ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಇದರಿಂದ ಅಭಿವೃದ್ದಿಗೆ ಅನುದಾನ ಕಡಿಮೆ ಆಗುವುದಿಲ್ಲ ಎಂದರು.


ನಾಡಕಲಸಿ ಗ್ರಾಮದಲ್ಲಿ ಗೋಶಾಲೆ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೆ ಜಾಗವನ್ನು ಗುರುತಿಸಲಾಗಿದೆ. ಯಾರೇ ಜಾಗ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಗೋಶಾಲೆಗೆ ಕೊಡಲಾಗುತ್ತದೆ. ಉಳಿದ ಜಾಗವನ್ನು ವಸತಿ ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ರೈತರಿಗೆ ಸೇವೆ ಸಲ್ಲಿಸಬೇಕು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್‌ಗೆ ಸ್ಪರ್ಧೆ ಮಾಡಿದ್ದೇನೆಯೆ ವಿ

ನಃ ಯಾವುದೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಜಿಲ್ಲಾ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ.ಮಂಜುನಾಥ ಗೌಡ ಅವರಿಗೆ ನಮ್ಮ ಬೆಂಬಲ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಶಾಸಕರು, ಸಚಿವರು, ಸಹಕಾರಿ ಕ್ಷೇತ್ರದ ಮೂಲಕ ಅಪೆಕ್ಸ್, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ

ಅಧ್ಯಕ್ಷರಾಗಿದ್ದಾರೆ. ನಾನು ಸಹ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಒಂದಷ್ಟು ಸಹಕಾರ ನೀಡಲು ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಯತೀಶ್ ಆರ್., ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ತಸ್ರೀಫ್, ಹಮೀದ್, ರವಿಕುಮಾರ್ ಇನ್ನಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!