ಶಿವಮೊಗ್ಗ,ಜೂ.೧:
ವಿಧಾನಪರಿಷತ್‌ನ ಪದವೀಧರ ಕ್ಷೇತ್ರದ ಚುನಾವಣೆಯ ಪಾವಿತ್ರ್ಯತೆ ಯನ್ನೇ ಹಾಳುಮಾಡುತ್ತಿರುವ ದುಷ್ಟ ಪರಂಪರೆಗೆ ಕಡಿವಾಣ ಹಾಕಲೇ ಬೇಕಾ ಗಿದೆ ಎಂದು ನೈರುತ್ಯ ಪದವೀಧರ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆಯನೂರು ಮಂಜು ನಾಥ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಅಭ್ಯರ್ಥಿ ಪದ ವೀಧರರ ಪಾವಿತ್ರ್ಯತೆಯನ್ನೇ ಹಾಳು ಮಾಡಲು ಹೊರಟಿದ್ದಾರೆ. ವಿದ್ಯಾವಂತರ ಮತಗಳನ್ನು ಖರಿದಿಸುತ್ತಿದ್ದಾರೆ. ಹಣ ಮತ್ತು ಹೆಂಡದ ವ್ಯವಸ್ಥೆಯನ್ನು ನಿರಂತರ ವಾಗಿ ಮಾಡುತ್ತ ಬಂದಿದ್ದಾರೆ. ವಿದ್ಯಾ ವಂತರ ಕ್ಷೇತ್ರವನ್ನು ಅಪಕೀರ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಳೆದ ೪೦ ವರ್ಷಗಳಿಂದ ನಾನು ಹಲವು ಚುನಾವಣೆಗಳನ್ನು ಮಾಡಿದ್ದೇನೆ.

ಆದರೆ, ಈ ಪರಿಷತ್‌ನ ಚುನಾವಣೆ ಇಷ್ಟೊಂದು ಹೀನವಾಗಿರುವುದನ್ನು ನಾನು ಕಂಡಿರಲಿಲ್ಲ ಎಂದರು.
ಅನಾಚರದ ಹಣ ಆಚಾರವನ್ನೇ ಕಸಿದುಕೊಂಡಿದೆ. ಬಿಜೆಪಿ ಅಭ್ಯರ್ಥಿ ಯವರು ತಮ್ಮ ವೈದ್ಯಕೀಯ ಕ್ಷೇತ್ರವನ್ನು ಉದ್ಯಮವನ್ನಾಗಿ ಮಾಡುತ್ತೇನೆ. ಕರಪತ್ರ ದಲ್ಲಿಯೇ ಹಾಕಿಕೊಂಡಿದ್ದಾರೆ

ಎಂದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುವುದನ್ನು ಮತದಾರರೇ ಊಹಿಸಬೇಕಾಗುತ್ತದೆ. ಹೇಳಿಕೇಳಿ ವೈದ್ಯಕೀಯ ಕ್ಷೇತ್ರ ಸೇವೆಗೆ ಸಂಬಂಧಪಟ್ಟಿದ್ದು, ಕೊರೋನ ಸಂದರ್ಭ ದಲ್ಲಿಅವರೆಷ್ಟು ಫಲಾನುಭವಿಗಳು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು..


ನಾನು ಮತಕ್ಕೆ ಮೌಲ್ಯ ನೀಡುವೆ, ಬಿಜೆಪಿ ಈ ಹಿಂದೆ ಕೆಸರಿನಲ್ಲಿ ಕಮಲ ಅರಳಿತು. ಆದರೆ ಈಗ ಅರಳಿದ ಕಮಲದಲ್ಲಿ ಕೆಸರು ಮೆತ್ತಿಕೊಳ್ಳಲಾಗುತ್ತಿದೆ. ಅವರಲ್ಲಿ ಹಣವಿದೆ. ನನಗೆ ಛಲವಿದೆ. ನಾನು ಎಂದು ಭ್ರಷ್ಟಚಾರ ಮಾಡಲಿಲ್ಲ. ಆದರೆ ಹೋರಾಟವನ್ನೇ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ಹೋರಾಟವನ್ನು ಬಿಟ್ಟುಕೊಟ್ಟಿಲ್ಲ. ನಿಷ್ಕಳಂಕದಿಂದ ರಾಜಕಾರಣವನ್ನು ಹೋರಾಟವನ್ನು

ಮಾಡಿಕೊಂಡು ಬಂದಿದ್ದೇನೆ. ಮತದಾರರಿಗೆ ನನ್ನ ಬಗ್ಗೆ ನಂಬಿಕೆ ವಿಶ್ವಾಸವಿದೆ. ಎದುರಾಳಿಗಳಿಗೆ ಯಾವ ಹೋರಾಟ ಹಿನ್ನಲೆಯೂ ಇಲ್ಲ. ವಾತಾವರಣ ಕಾಂಗ್ರೆಸ್ ಪರವಾಗಿದೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ಶ್ರೀನಿವಾಸ ಕರಿಯಣ್ಣ, ವೈ.ಹೆಚ್. ನಾಗರಾಜ್,

ಡಾ.ಟಿ.ನೇತ್ರಾವತಿ, ಶಾಂತ ವೀರನಾಯಕ, ದೀರರಾಜ್, ಹಿರಣ್ಣಯ್ಯ, ಶಿ.ಜು.ಪಾಶ, ಜಿ.ಪದ್ಮನಾಬ್, ಸೈಯ್ಯದ್ ಅಡ್ಡು, ಸುರೇಶ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!