ಹುಡುಕಾಟದ ವರದಿ
ಶಿವಮೊಗ್ಗ, ಮೇ.23:
ಶಿವಮೊಗ್ಗ ನಗರದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ, ಅದರಲ್ಲೂ ವೈದ್ಯಕೀಯ ವಿಜ್ಞಾನ ಕಾಲೇಜನ್ನು ಹೊಂದಿರುವ ಮೆಗಾನ್ ಆಸ್ಪತ್ರೆಗೆ ಏನಾಗಿದೆ?
ಆಸ್ಪತ್ರೆಯ ಯಜಮಾನ ಬಿಗಿಯಾಗಿದ್ದರೆ, ಎಲ್ಲಾ ವ್ಯವಸ್ಥೆ ಸರಿಯಾಗಿರುತ್ತದೆ. ಯಜಮಾನ ತನ್ನಷ್ಟಕ್ಕೆ ತಾನಿದ್ದರೆ ಏನೇನು ಆಗಬಹುದು? ಅದೆಲ್ಲ ಆಗಿರುವುದನ್ನು ಇಂದು ಬೆಳಿಗ್ಗೆ ಮೆಗಾನ್ ಆಸ್ಪತ್ರೆಯ ಕೇಂದ್ರದಲ್ಲೇ ನೋಡಬಹುದು.
ರೋಗಿಯೊಬ್ಬರಿಗೆ ರಕ್ತ ಕೊಡಲು ದಾನಿಗಳು ಬಂದಿದ್ದಾರೆ. ಅದರೊಂದಿಗೆ ಪೋಷಕರು ಇದ್ದಾರೆ ಆದರೆ ಆ ರಕ್ತದ ಬಗ್ಗೆ ಮಾಹಿತಿ ಕೊಡಲು ಕನಿಷ್ಠ ಅಲ್ಲಿ ಒಬ್ಬ ಸಿಬ್ಬಂದಿ ಇಲ್ಲ. ಯಾವುದೋ ಒಬ್ಬ ಹೆಣ್ಣುಮಗಳು ಕಂಪ್ಯೂಟರ್ ನಲ್ಲಿ ತನ್ನ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಎಲ್ಲರೂ ಬಂದೇ ಇಲ್ಲ. ಇದು ನಡೆದದ್ದು ಇಂದು ಬೆಳಿಗ್ಗೆ 11 ಗಂಟೆಯಿಂದ 11:20ರ ಅವಧಿಯಲ್ಲಿ.
ರಕ್ತ ಕೆಲವು ಅವಧಿಯಲ್ಲಿ ತುರ್ತಾಗಿ ಬೇಕಾಗಿರುತ್ತದೆ. ಆಪರೇಷನ್ ಅಥವಾ ಅಪಘಾತ ಸಂದರ್ಭದಲ್ಲಿ ರೋಗಿಗೆ ಬದುಕಿಸುವ ಒಂದೇ ಒಂದು ಶಕ್ತಿ ಇರುವುದು ರಕ್ತದಲ್ಲಿ ಎಂಬುದು ವೈದ್ಯಲೋಕಕ್ಕೆ ಗೊತ್ತಿದೆ. ಆದರೆ ಅಲ್ಲಿ ಒಬ್ಬರು ಇಲ್ಲ. ಇಂತಹ ಒಂದು ಘಟನೆಯ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರು ಗಮನಿಸಬೇಕು. ಅದನ್ನು ಬಿಟ್ಟು ಬರೀ ಕೆಲಸ ಎಂಬುದನ್ನ ಪೆನ್ನು ಹಾಳೆಗಳ ಮೂಲಕ ಲೆಕ್ಕ ಬರೆಯುವುದಲ್ಲ. ರೋಗಿಗಳಿಗೆ ಸ್ಪಂದಿಸುವ ಜೊತೆಗೆ ಅವರ ಪೋಷಕರನ್ನು ಸಮಾಧಾನ ಪಡಿಸುವ ಕಾಯಕವನ್ನು ಅಧಿಕಾರಿಗಳು ಎಲ್ಲರಿಗೂ ಕಲಿಸಬೇಕಿದೆ.
ಇಂತಹದೊಂದು ಮಾತು ಹೇಳಲು ಕಾರಣ ಯಜಮಾನನಿಂದ ಗಂಭೀರ ಗಮನಸುವಿಕೆ ಇಲ್ಲ ಎಂಬುದಕ್ಕೆ. ಯಾರು ಎಷ್ಟೊತ್ತಿಗೆ ಬರುತ್ತಾರೆ. ಅವರ ಕರ್ತವ್ಯ ಏನು? ರೋಗಿಗಳ ಜೊತೆ ಅವರ ವರ್ತನೆಯನ್ನು ನೋಡಬೇಕು.
ಸಿಬ್ಬಂದಿಗಳು ಸರಿ ಇದ್ದಾರಾ? ಸಿಬ್ಬಂದಿಗಳನ್ನು ಗೌರವಿಸಿ, ಪ್ರೀತಿಸಿ ಅವರಿಂದ ಉತ್ಸಾಹ ನೀಡಿ ಕೆಲಸ ಮಾಡಲು ಮುಂದಾಗುವಂತೆ ಮಾಡುವ ಕೆಲಸ ಆಸ್ಪತ್ರೆಯ ಯಜಮಾನನಿಂದ ಆಗಬೇಕಿದೆ.
ಇಂತಹ ಘಟನೆಗೆ ಸಾಕಷ್ಟು ಹಿಂದಿನ ಘಟನೆಗಳನ್ನು ಉದಾಹರಿಸಬಹುದು. ಈಗ ಅದು ಇಲ್ಲಿ ಅನಗತ್ಯವೆನಿಸುತ್ತಿದೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ವೈದ್ಯರ ಚಲನವಲನಗಳ ಬಗ್ಗೆ ಗಮನಿಸುವುದು ಅಗತ್ಯವಾಗಿದೆ.
ಹೌದು ಇಂದು ಬೆಳಗ್ಗೆ 11 ಗಂಟೆಯಿಂದ ರಕ್ತನಿಧಿ ಕೇಂದ್ರದಲ್ಲಿ ಯಾವುದೇ ನೌಕರ ಕನಿಷ್ಠ ಮಾಹಿತಿ ಕೊಡಲು ಈ ಗುಂಪಿನ ರಕ್ತ ಸಿಗುತ್ತದೆಯೇ ಇಲ್ಲವೇ ಎಂದು ಹೇಳಲು ಇಲ್ಲದಿರುವುದನ್ನು ನೋಡಿದೆ.
ರೋಗಿ ಒಬ್ಬರ ಪೋಷಕ ರಕ್ತ ಕೇಳಲು ಬಂದು ಸುಮಾರು 20 ನಿಮಿಷಗಳ ಕಾಲ ಯಾರಿದ್ದೀರಿ? ಯಾರಿದ್ದೀರಿ ಎಂದು ಹುಡುಕಿದ್ದ ಸನ್ನಿವೇಶ ನೋಡಿದೆ. ಇದು ತಪ್ಪು ಒಂದು ವ್ಯವಸ್ಥೆ ಅತ್ಯಂತ ಸುಲಲಿತವಾಗಿ ನಡೆಯಬೇಕು. ಇದು ಜೀವದ ಪ್ರಶ್ನೆ.
ಡಿ. ಸಿ. ಜಗದೀಶ್ವರ್, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕಾಂಗ್ರೆಸ್