ಶಿವಮೊಗ್ಗ, ಮೇ.23:
NSUI, ABVPಯಂತಹ ವಿದ್ಯಾರ್ಥಿ ಸಂಘಟನೆಗಳಲ್ಲಿ ಬೆಳೆದು “ಹೀರೋ” ಆಗುವ ಕನಸು ಕಾಣಬೇಡಿ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್. ಪಿ. ದಿನೇಶ್ ಸಲಹೆ ನೀಡಿದರು.


ಅವರು ಇಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, ತಮಗೆ ಕಾಂಗ್ರೆಸ್ ಟಿಕೇಟ್ ತಪ್ಪಲು ಕಾರಣವೇನು ಎಂದದ್ದಕ್ಕೆ ಪೂರಕವಾಗಿ ಈ ವಿದ್ಯಾರ್ಥಿ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿ ಹಗಲಿರುಳು ದುಡಿದವರಿಗೆ ಕೊನೆ ರಾಜಕೀಯ ಪಕ್ಷಗಳು ಕೈಕೊಡೋದು ಗ್ಯಾರಂಟಿ ಎಂದರು.
ತಾವು ಮುವತ್ತೈದು ವರುಷಗಳಿಂದ ಇಂತಹದೇ ವಿದ್ಯಾರ್ಥಿ ಸಂಘಟನೆಯ ಮೂಲಕ ಬೆಳೆದೆ. ತಮ್ಮ ಅವಕಾಶವಾದಿತನಕ್ಕೆ ಟಿಕೇಟ್ ತಪ್ಪಿಸಿದರು ಎಂದರು.


ಯಾವುದೇ ಪಕ್ಷ ಇರಲಿ ಅಲ್ಲಿ ವಿದ್ಯಾರ್ಥಿ ಸಂಘಟನೆಯ ಮೂಲಕ ಬೆಳೆದು ನಾನು ಮುಂದೆ ಏನೋ ಅಗ್ತೇನೆ ಅನ್ನೋ ಆಸೆ ಬಿಟ್ಟುಬಿಡಿ. ಈ ದತ್ತಾತ್ರಿ, ರಘುಪತಿಭಟ್, ಗಿರೀಶ್ ಪಟೇಲ್, ಧರ್ಮರಾಜ್ ಅಂತಹವರಿಗೆ ಏನು ಮಾಡಿದ್ದಾರೆ ಗೊತ್ತಿಲ್ವೇ. ನೀವು ಮುಂದಿನ ಹಾದಿಯ ಕನಸುಕಾಣಬೇಡಿ. ನಂಬಬೇಡಿ ಎಂದು ವಿದ್ಯಾರ್ಥಿ ಸಂಘಟನೆಗಳ ನಾಯಕರಿಗೆ ಕಿವಿಮಾತು ಹೇಳಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!