!

ಶಿವಮೊಗ್ಗ, ಜ.12:

ಸಮೀಪದ ಗಾಜನೂರಿನ ಡ್ಯಾಮ್ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ತುಂಗ ನದಿ ನೀರು ಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ನಗರದ ಗಾಜನೂರು ಡ್ಯಾಂ ನಲ್ಲಿ ಕುಟುಂಬ ಮತ್ತು ಕುಟುಂಬದ ಸ್ನೇಹಿತರ ಜೊತೆ ಬಂದಿದ್ದ ಶಿವಮೊಗ್ಗ ನಗರದ ವಿನಾಯಕ ಎಂಬ 22 ವರ್ಷದ ಯುವಕ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾಗಿದ್ದಾನೆ.
ಗಾಜನೂರಿನ ಪಂಪ್ ಹೌಸ್ ಬಳಿ ಹರಿಯುವ ನೀರಿನ ಕೆಳಗೆ ನಿಂತು ಸೆಲ್ಫಿ ತೆಗೆಯುವ ವೇಳೆ ಆಯಾ ತಪ್ಪಿ ವಿನಾಯಕ ನೀರಿಗೆ ಬಿದ್ದಿದ್ದಾನೆ.
ತಕ್ಷಣವೇ ಅಗ್ನಿಶಾಮಕ ದಳದ ಡಿಎಫ್ ಒ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿಗಳು ವಿನಾಯಕನ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ಮೂರು ಗಂಟೆಯ ನಂತರ ಆತನ ಮೃತ ದೇಹ ಪತ್ತೆಯಾಗಿದೆ. ಪಂಪ್ ಹೌಸ್ ಬಳಿ ನೀರನ್ನ ಹರಿಯದಂತೆ ನೋಡಿಕೊಳ್ಳಲಾಗಿದೆ. ಘಟನೆ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.
ಸವಳಂಗ ರಸ್ತೆಯ ವಿನಾಯಕ ನಗರದ ನಿವಾಸಿ ಸುಕುಮಾರ್ ಅವರ ಪುತ್ರ ನಾಗಿದ್ದಾನೆ. ವಿನಾಯಕನ ಹುಡುಕಾಟದ ಕಾರ್ಯಶೋಧದಲ್ಲಿ ಎಫ್ ಎಸ್ ಒ ಹುಲಿಯಪ್ಪ, ಲೀಡಿಂಗ್ ಫೈರ್ ಮ್ಯಾನ್ ಸುನೀಲ್, ಚಾಲಕ ಸತೀಶ್, ಫೈರ್ ಮ್ಯಾನ್ ಅರುಣ್, ಶಿವಕುಮಾರ್, ಪ್ರಭು ಹಾಗೂ ತುಂಗ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳೀಯರು ಭಾಗಿಯಾಗಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!