ಶಿವಮೊಗ್ಗ,ಮಾ.19: ಕೆರೆ ನೀರು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊಸಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಶಿವಮೊಗ್ಗದಿಂದ 6 ಕಿ.ಮೀ. ಹೊಸಹಳ್ಳಿ ಗ್ರಾಮದಲ್ಲಿ ವಿ.ಎಸ್. ನಂ. 45ರಲ್ಲಿ ಕೆರೆ ಇದೆ. ಈ ಕೆರೆಯಿಂದ ಸುಮಾರು 200 ಎಕರೆ ಜಮೀನಿಗೆ ನೀರುಣಿಸಲಾಗುತ್ತಿದೆ. 150ಕ್ಕೂ ಹೆಚ್ಚು ಕೃಷಿಕರ ಬದುಕಿಗೆ ಇದು ಆಧಾರವಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಬೇರೆಯವರು ಅಕ್ರಮವಾಗಿ ಪಂಪ್‍ಸೆಟ್ ಮೂಲಕ ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ ಎಂದು ಮನವಿದಾರರು ದೂರಿದ್ದಾರೆ.

ಅಲ್ಲದೇ ಲಾಭದಾಯಕ ಉದ್ದಿಮೆಯಾದ ಅಡಕೆ ಸಸಿ ಬೆಳೆಸಲು ಕೂಡ ಇದೇ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಸಿಲಿನ ಬೇಗೆ ಮತ್ತು ಬರಗಾಲದ ನಡುವೆ ಕೆರೆಯಲ್ಲಿ ನೀರು ಈಗಾಗಲೇ ಬತ್ತಿಹೋಗಿದೆ. ಬೆಳೆದು ನಿಂತ ಅಡಕೆತೋಟಗಳಿಗೆ ನೀರು ಇಲ್ಲದಂತೆ ಆಗಿದೆ. ಆದ್ದರಿಂದ ಅಕ್ರಮವಾಗಿ ನೀರು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!