ಇಂದು ಶಾಹಿ ಎಕ್ಸಪೊರ್ಟ್‌ ರವರಿಂದ 5 ಹೆಮೊಟೊಲೊಜಿ ಎನಲೈಸರ್‌ ಸಿ ಬಿ ಸಿ ಮಿಷಿನ್‌ ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳು ಶಿವಮೊಗ್ಗ ರವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

12.5 ಲಕ್ಷ ಮೌಲ್ಯದ ಮಷಿನ್‌ ಗಳು ಬಡ ಜನರಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ರಕ್ತ ತಪಾಸಣೆಯ ಅನುಕೂಲಕ್ಕಾಗಿ ನೀಡಲಾಗಿದೆ.

ಸಾಮನ್ಯವಾಗಿ ಒಂದು ಸಿ ಬಿ ಸಿ ಪರಿಕ್ಷೆಗೆ ರೂ.350 ನೀಡಲಾಗುತ್ತಿದ್ದು, ಒಂದು ಮಿಷಿನ್‌ ಸುಮಾರು 1.5 ಲಕ್ಷ ಪರೀಕ್ಷೆ ಮಾಡುವ ಸಾಮಾರ್ಥ್ಯವಿದ್ದು 3.50 ಕೋಟಿ ರೂಪಾಯಿಯ ಸೇವೆಯನ್ನು ಜನರಿಗೆ ನೀಡಲಾಗುತ್ತಿದೆ.

ಒಟ್ಟು 5 ಮಷಿನ್‌ ಗಳು 16.5ಕೋಟಿ ರೂ ಮೌಲ್ಯದ ಸೇವೆಗಳನ್ನು ನೀಡುತ್ತದೆ. 5 ಮಷಿನ್ ಗಳಿಗೆ ಜೀವಮಾನ ಎ,ಎಂ.ಸಿ ಪಡೆದಿದೆ.
ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಶಾಹಿ ಅವರ ಸಾಮಾಜಿಕ ಕಳಕಳಿ ಜವಾಬ್ದಾರಿಗೆ ಪ್ರಶಂಸಿಸಿದರು.

ಡಾ//.ನಾಗರಾಜ ನಾಯ್ಕ ಆರ್‌ ಸಿ, ಎಚ್‌ ಓ ಆಫಿಸರ್‌, ಡಾ// ಗುಡದಪ್ಪ ಗಸಬಿ, ಡಿ.ಎಂ.ಓ, ಡಾ// ಕೆ. ಈಶ್ವರಪ್ಪ, ಸಹಾಯಕ ಆಡಳಿತಾಧಿಕಾರಿಗಳು ಡಿ,ಎಚ್‌,ಓ , ವಾಯ್‌, ಜೇ ಶಶಿಕುಮಾರ, ಹಿರಿಯ ಅಧಿಕಾರಿಗಳು, ಶಾಹಿ ಗಾರ್ಮೆಂಟ್ಸ್ ನ ಎಜಿಎಂ ಲಕ್ಷಣ್ ದರ್ಮಟ್ಟಿ ಮತ್ತು ನಾಗಯ್ಯ ಸಿ.ಎಸ್‌,ಆರ್‌ ವಿಭಾಗ ಶಾಹಿ ರವರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!