ಶಿವಮೊಗ್ಗ,ಫೆ.೧೩: ಪಂಚಮಿ ಆರ್ಯುವೇದ ಚಿಕಿತ್ಸಾ ಕೇಂದ್ರದ ವತಿಯಿಂದ ನಗರದ ಕುವೆಂಪು ರಸ್ತೆಯ ಗುತ್ತಿ ಮಲೆನಾಡು ಆಸ್ಪತ್ರೆ ಎದುರಿಗಿರುವ ಪಂಚಮಿ ಆರ್ಯುವೇದ ಚಿಕಿತ್ಸಾ ಕೇಂದ್ರದಲ್ಲಿ ಫೆ.೨೦ರಿಂದ ೨೪ರವರೆಗೆ ೫ ದಿನಗಳ ಕಾಲ, ಬೆಳಿಗ್ಗೆ ೧೦ರಿಂದ ಸಂಜೆ೫ರವರೆಗೆ ಗರ್ಭ ಸಂಸ್ಕಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಸ್ಥಾಪಕಿ ಡಾ.ಕಂಚನ ಕುಲಕರ್ಣಿ ಹೇಳಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಂದು ಗರ್ಭಿಣಿಯರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಹಲವು ಎಚ್ಚರಿಕೆಯನ್ನು ಅವರು ಗಮನಿಸಬೇಕಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಕಷ್ಟದ ಕೆಲಸವಾಗಿದೆ. ಸದಾ ಒತ್ತಡ ಕೌಟುಂಬಿಕ ಹಿನ್ನಲೆ ಮುಂತಾದ ಕಾರಣಿಗಳಿಂದ ಬಳಲುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಹಿನ್ನಲೆಯಲ್ಲಿ ಅವರಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.


೫ ದಿನಗಳ ಈ ಅಭಿಯಾನದಲ್ಲಿ ಗರ್ಭಿಣಿಯರಿಗೆ ಧ್ಯಾನ, ಯೋಗ,ಮಂತ್ರಪಠಣ, ಸಂಗೀತ ಆಲಿಸುವಿಕೆ, ಗರ್ಭ ಸಂವಾದ, ಸೇವಿಸಬೇಕಾದ ಆಹಾರ, ಆಚಾರ, ವಿಚಾರ, ಗರ್ಭಾವಸ್ಥೆಯಲ್ಲಾಗುವ ಬದಲಾವಣೆ ಹೀಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಗರ್ಭಿಣಿಯರಿಗೆ ಸಂಸ್ಕಾರದ ಜೊತೆಗೆ ಅನುಸರಿಸಬೇಕಾದ ಮುನ್ನೆಚರಿಕೆಯ ಕ್ರಮಗಳನ್ನು ತಿಳಿಸಲಾಗುವುದು ಎಂದರು.


ಈ ಜಾಗೃತಿಯಿಂದ ಮುಂದೆ ಜನಿಸಲಿರುವ ಮಗುವಿನ ಉತ್ತಮ ಬೆಳವಣಿಗೆ ಹಾಗೂ ಮೆದುಳಿನ ಕ್ರಿಯಾತ್ಮಕತೆ ಸಕ್ರಿಯಗೊಳಿಸುತ್ತದೆ. ಮೆದುಳು ಚುರುಕಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವು ಇದೆ. ಅವರೊಂದಿಗೆ ಸಂವಾದ, ಭಯದಿಂದ ದೂರ ಮಾಡುವುದು, ವಿಶ್ರಾಂತಿ ಜೊತೆ ವಿಶೇಷ ತರಬೇತಿ, ಮನಸ್ಸಿನ ಕೆಟ್ಟ ಭಾವನೆಗಳ ದೂರ ಮಾಡುವುದು ಹೀಗೆ ಹಲವು ವಿಷಯಗಳನ್ನು ತಿಳಿಸಲಾಗುವುದು ಎಂದರು.


ಈ ತರಬೇತಿ ಮತ್ತು ಚಿಕಿತ್ಸಾ ಕ್ರಮದ ಅಭಿಯಾನದಲ್ಲಿ ಮನೋರೋಗ ತಜ್ಞರು, ಯೋಗ ಚಿಕಿತ್ಸಾಕರು, ಅಧ್ಯಾತ್ಮಿಕ ಚಿಕಿತ್ಸಾಕರು, ನುರಿತ ಸ್ತ್ರೀ ರೋಗ ತಜ್ಞರು,ಮಕ್ಕಳ ವೈದ್ಯರು, ಪ್ರಕೃತಿ ಚಿಕಿತ್ಸಕರು ಭಾಗವಹಿಸುತ್ತಾರೆ. ಇದರ ಸದುಪಯೋಗವನ್ನು ಪಡೆಯಬೇಕು ಎಂದ ಅವರು, ನಿಗಧಿತ ಮಹಿಳೆಯರಿಗೆ ಅವಕಾಶವಿದ್ದು, ಕಡಿಮೆ ದರದ ಪ್ರವೇಶ ಶುಲ್ಕವನ್ನು ವಿಧಿಸಲಾಗಿದೆ ಎಂದ ಅವರು, ಹೆಚ್ಚಿನ ಮಾಹಿತಿಗೆ ಮೊ. ಸಂ.೯೯೦೦೫೯೫೯೫೫ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಮೃಂದ, ಚಂದ್ರಕಲಾ, ಯಶಸ್ವಿನಿ, ಡಾ.ಚೈತ್ರ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!