ಶಿವಮೊಗ್ಗ: ಜಿಲ್ಲಾದ್ಯಂತ ಮರಳು ಅಕ್ರಮ ಗಣಗಾರಿಕೆ ನಡೆಯುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗ ಇಂದು ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದೆ.

ಜಿಲ್ಲಾದ್ಯಂತ ತುಂಗಾ, ಭದ್ರಾ, ಮತ್ತು ಕೆಲವು ಕೆರೆಗಳು, ಹಳ್ಳ ಕೊಳ್ಳಗಳಲ್ಲಿ ಅಕ್ರಮ ಮರಳು ಗಣ ಗಾರಿಕೆ, ಮರಳು ಸಾಗಾಣ ಕೆ ಮಣ್ಣು ಸಾಗಾಣ ಕೆ ನಡೆಯುತ್ತಿದೆ. ಇದರಿಂದ ಇಡೀ ನಿಸರ್ಗವೇ ಹಾಳಾಗಿದೆ. ನದಿಗಳು ಬತ್ತಿವೆ. ಅನೇಕ ಕೆರೆಗಳಲ್ಲಿ ಮಣ್ಣು ದೋಚಲಾಗಿದೆ. ಅಬ್ಬಲಗೆರೆ ಸುತ್ತಮುತ್ತ ಇರುವ ಎಲ್ಲಾ ಕೆರೆಗಳ ಮಣ್ಣು ದೋಚಲಾಗಿದೆ. ಹಾಗೆಯೇ ತುಂಗಾ ಮತ್ತು ಭದ್ರಾ ನದಿಗಳಲ್ಲಿ ಅವಿರತವಾಗಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇಷ್ಟಾದರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ಕೆಲವು ಸಚಿವರು ಈ ಅಕ್ರಮ ಗಣ ಗಾರಿಕೆಗೆ ಸಹಕಾರ ನೀಡುತ್ತಾರೆ ಎಂಬ ಆರೋಪಗಳಿವೆ. ಆದ್ದರಿಂದ ಎಸ್.ಎಸ್. ಮಲ್ಲಿಕಾರ್ಜುನ್, ಎನ್.ಎಸ್. ಬೋಸರಾಜು ಈ ಬಗ್ಗೆ ಗಮನಹರಿಸಬೇಕು. ಇಲ್ಲವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ರಾಜ್ಯಾಧ್ಯಕ್ಷ ಎಂ.ಆರ್. ಅನಿಲ್ ಕುಂಚಿ, ಪ್ರಮುಖರಾದ ಪುರುಷೋತ್ತಮ್, ಡಿ. ಪರಮೇಶ್ವರ್, ಅರ್ಜುನ್, ಅಭಿಷೇಕ್, ಆದರ್ಶ್, ಕಲ್ಲೇಶ್, ಮಂಜಾನಾಯ್ಕ್, ಲಂಕೇಶ್, ಶಕುಂತಲಾ, ಮಂಜುಳಾ, ಮಾಲಾ ಗೌಡ, ಪ್ರೇಮಾ, ನಿರ್ಮಲಾ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!