ತುರ್ತು ಸಂದರ್ಭದಲ್ಲಿ ಬೈಕ್ ಸವಾರರ ಶಿರಸ್ತ್ರಾ ಣವಾಗಿ ಬಳಕೆಯಾಗುತ್ತಿದ್ದ ಸಾವಿರಾರು ಸಂಖ್ಯೆಯ ಅರ್ಧ ಹೆಲ್ಮೆಟ್‌ಗಳು ಗುರುವಾರ ಸಂಜೆ ಇಲ್ಲಿನ ಗೋಪಿ ವೃತ್ತದಲ್ಲಿ ಬುಲ್ಡೋಜರ್‌ನ ಚಕ್ರಗಳಡಿ ಸಿಲುಕಿ ಪುಡಿಪುಡಿಯಾದವು.
ಈ ಹಿಂದೆ ವಿಶೇಷ ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳಲಾಗಿದ್ದ ಸುಮಾರು ೩೦೦೦ ಅರ್ಧ ಹೆಲ್ಮೆಟ್‌ಗಳು, ೭೫ ದೋಷಪೂರಿತ ಸೈಲೆನ್ಸರ್ ಮತ್ತು ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್‌ಗಳನ್ನು ಪೊಲೀಸ್ ಇಲಾಖೆಯಿಂದ ಬುಲ್ಡೋಜರ್ ಹರಿಸಿ ನಾಶಪಡಿಸಲಾಯಿತು.
ತಾವೇ ಧರಿಸಿ ಓಡಾಡುತ್ತಿದ್ದ ಅರ್ಧ ಹೆಲ್ಮೆಟ್‌ಗಳು ಹೀಗೆ ಕಣ್ಣೆದುರೇ ದಾರುಣವಾಗಿ ಬುಲ್ಡೋಜರ್‌ನ ಚಕ್ರಕ್ಕೆ ಸಿಲುಕಿ ಬಲಿಯಾಗಿದ್ದು ಕಂಡು ಸಾರ್ವಜನಿಕರು ಸಂಕಟಪಟ್ಟರು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸಮ್ಮುಖದಲ್ಲಿಯೇ ನಡೆದ ಈ ಕಾರ್ಯಾಚರಣೆಯನ್ನು ಸಾವಿರಾರು ಸಾರ್ವಜನಿಕರು ಕಣ್ತುಂಬಿಕೊಂಡರು. ಈ ಹಿಂದೆ ತಮ್ಮಿಂದ ವಶಪಡಿಸಿಕೊಂಡಿದ್ದ ವಸ್ತುಗಳು ಹೀಗೆ ನಡು ಬೀದಿಯಲ್ಲಿ ನಾಶವಾಗಿದ್ದು ಕಂಡು ಪೊಲೀಸರಿಗೆ ಹಿಡಿಶಾಪ ಹಾಕಿ ಮರಳಿದರು.
ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈ ಎಸ್ಪಿಗಳಾದ ಎಂ. ಸುರೇಶ್, ಸಂಚಾರ ವಿಭಾಗದ ಇನ್ ಸ್ಪೆಕ್ಟರ್ ಸಂತೋಷ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಗೆ ಸಾಕ್ಷಿಯಾದರು.