ಶಿವಮೊಗ್ಗ, ಫೆಬ್ರವರಿ 01,  ರಾಜ್‍ಕೋಟ್‍ನಲ್ಲಿ ಸೈನ್ಸ್ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಪರಿಸರ ಸೈದ್ಧಾಂತಿಕ ವಿಷಯ ಆಧರಿಸಿ

ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳದಲ್ಲಿ ಜ್ಞಾನದೀಪ ಶಾಲೆಯ 8ನೇ ತರಗತಿಯ ಅಶ್ವಿನಿ ಎನ್ ಬಿ.  ಮತ್ತು ಪ್ರಣತಿ ಹೆಚ್.ಎಸ್. ಎಂಬ ವಿದ್ಯಾರ್ಥಿನಿಯರು ತೃತೀಯ ಸ್ಥಾನ ಪಡೆದಿದ್ದಾರೆ.


ಅಶ್ವಿನಿ ಎನ್ ಬಿ. “ಮೌಲ್ಯವರ್ಧಿತ ಮಿಶ್ರಗೊಬ್ಬರಕ್ಕಾಗಿ ಅಡಿಕೆ ಸಿಪ್ಪೆಯ ಜೈವಿಕ ಮೃದುಗೊಳಿಸುವಿಕೆ” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಾಜೆಕ್ಟ್  ಮಂಡಿಸಿ ತೃತೀಯ ಸ್ಥಾನ ಪಡೆಯುವದರೊಂದಿಗೆ ರಾಷ್ಟ್ರಮಟ್ಟದ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.


ಪ್ರಣತಿ ಹೆಚ್.ಎಸ್. “ತೋಟಕ್ಕೆ ತ್ಯಾಜ್ಯ ಮಾಂತ್ರಿಕ ಕಸ” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಾಜೆಕ್ಟ್  ಮಂಡಿಸಿ ತೃತೀಯ ಸ್ಥಾನ ಪಡೆಯುವದರೊಂದಿಗೆ ರಾಷ್ಟ್ರಮಟ್ಟದ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.


 ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ ಹೆಗಡೆ, ಮತ್ತು ಎಲ್ಲಾ ಶಿಕ್ಷಕರು, ಅಡಳಿತ ಮಂಡಳಿಯವರು  ಹಾಗೂ ತರಬೇತಿಗೊಳಿಸಿದ ವಿಜ್ಞಾನ ಶಿಕ್ಷಕಿ ಶ್ವೇತಾ ಎಂ ಎಸ್. ಮಕ್ಕಳನ್ನು ಅಭಿನಂದಿಸಿದ್ದಾರೆ. (ಛಾಯಾಚಿತ್ರ ಲಗತ್ತಿಸಿದೆ)

By admin

ನಿಮ್ಮದೊಂದು ಉತ್ತರ

You missed

error: Content is protected !!