*
ಶಿವಮೊಗ್ಗ, ಜನವರಿ
ಅರಿವು ಇದ್ದರೆ ಗುರು ಆಗಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಶ್ರೀ ಮಡಿವಾಳ ಮಾಚಿದೇವರು ಎಂದು ಶಾಸಕರಾಸ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
12 ನೇ ಶತಮಾನದಲ್ಲಿ ಜಾತಿ ಪದ್ದತಿ, ಅಸಮಾನತೆ ಪೆಡಂಭೂತದಂತೆ ಇತ್ತು. ದಾರ್ಶನಿಕರ, ಶರಣರ ಹೋರಾಟ ಪ್ರತಿಭಟನೆಯಿಂದ, ಆ ಧ್ವನಿಯಿಂದಾಗಿ ಇಂದು ನಾವು ನೆಮ್ಮದಿಯಿಂದ ಇದ್ದೇವೆ.
ಒಬ್ಬ ವ್ಯಕ್ತಿಯ ಸನ್ನಡತೆ, ಉತ್ತಮ ವ್ಯಕ್ತಿತ್ವದಿಂದ ಮಾನ್ಯನಾಗುತ್ತಾನೆ. ಮಾಚಿದೇವರ ಸನ್ನಡತೆಯಿಂದ ಬಿಜ್ಜಳ ಮಹಾರಾಜರೇ ಸ್ವತಃ ಅವರ ಮನೆಗೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನುಡಿದಂತೆ ನಡೆದ ಶ್ರೇಷ್ಠ ಪರಂಪರೆ ಮಾಚಿದೇವರದು. ಅಕ್ಕಮಹಾದೇವಿಯವರು ಸಹ ಮಾಚಿದೇವರನ್ನು ತಮ್ಮ ತಂದೆ ಎನ್ನುತ್ತಾರೆ. ಇದು ನಮ್ಮ ಸಂಸ್ಕøತಿಯ ಹೆಗ್ಗಳಿಕೆ.
ಅನುಭವ ಮಂಟಪದಲ್ಲಿ ಶರಣರ ವಸ್ತ್ರ ಮಡಿ ಮಾಡುವ, ಮಲಿನ ಮನಸುಗಳನ್ನು ಮಡಿ ಮಾಡುವ ಕಾಯಕದಲ್ಲಿ ನಿರತರಾಗಿದ್ದ ಮಾಚಿದೇವರು ತಮ್ಮ ಅನೇಕ ವಚನಗಳ ಮೂಲಕ, ಸತ್ಯನಿಷ್ಟೆಯ ಕಾಯಕದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಆದ್ದರಿಂದ ನಾವೂ ಸಹ ನಮ್ಮ ಮನೆಗಳಲ್ಲಿ ಮಕ್ಕಳು ನಮ್ಮನ್ನು ಅನುಸರಿಸುವಂತೆ ಬಾಳಬೇಕು. ದಾರ್ಶನಿಕರ ಗುಣಗಳನ್ನು ಮೈಗೂಡಿಕೊಂಡು ಆ ಮಾರ್ಗದಲ್ಲಿ ನಡೆಯಬೇಕೆಂದು ಕರೆ ನೀಡಿದರು.
ಆದಿಚುಂಚನಗಿರಿ ಶಾಲಾ ಶಿಕ್ಷಕ ಮಧುಕುಮಾರ್ ಎಂ.ಎನ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 12 ನೇ ಶತಮಾನದ ದಾರ್ಶನಿಕರು ಮಡಿವಾಳ ಮಾಚಿದೇವರು. ಎಲ್ಲ ಮಹಾಪುರುಷರ ಜನ್ಮದ ಹಿಂದೆ ಒಂದು ಪೌರಾಣಿಕ ಹಿನ್ನೆಲೆ ಇರುತ್ತದೆ. ಹಾಗೆಯೇ ಮಾಚಿದೇವರ ಜನ್ಮದ ಹಿಂದೆ ಪೌರಾಣಿಕ ಹಿನ್ನೆಲೆ ಇದೆ. ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ತಂದೆ ಪರ್ವತಯ್ಯ, ತಾಯಿ ಸುಜ್ಞಾನವ್ವರಿಗೆ 1111 ರಲ್ಲಿ ಇವರು ಜನಿಸುತ್ತಾರೆ.
ಮುಂದೆ ಅವರು ಕಲ್ಯಾಣದಲ್ಲಿ ಶಿವಶರಣರ ಗಣ ಸೇರಿ ಕಾಯಕದಲ್ಲಿ ತೊಡಗುತ್ತಾರೆ. ಭವಿ, ಭೋಗಿಗಳ ಬಟ್ಟೆ, ವಸ್ತ್ರಗಳನ್ನು ಶುದ್ದ ಮಾಡುವುದಿಲ್ಲವೆಂದು ಕಟ್ಟಪ್ಪಣೆ ಹಾಕಿಕೊಳ್ಳುತ್ತಾರೆ. ಕೆಲವರು ಅನೇಕ ಕುಚೇμÉ್ಟ, ತೊಂದರೆಗಳನ್ನು ನೀಡುತ್ತಾರೆ. ಇದರ ನಡುವೆಯೂ ಸತ್ಯನಿμÉ್ಟಯಿಂದ ಕಾಯಕದಲ್ಲಿ ತೊಡಗಿಕೊಂಡು ಜನರ ಮನಸಿನ ಕೊಳೆಯನ್ನು ಸಹ ಶುಭ್ರಗೊಳಿಸುತ್ತಾರೆ.
ಅನುಭವ ಮಂಟಪ ಕಟ್ಟುವಲ್ಲಿ ಮಾಚಿದೇವರ ಕಾಯಕ ಅತಿ ಮಹತ್ವದ್ದಾಗಿದ್ದು, ವೀರಗಣಾಚಾರಿ ಹಾಗೂ ವೀರಭದ್ರನ ದೇವಾಂಶ ಸಂಭೂತ, ಅವತಾರ ಪುರುಷ ಎಂದು ಕರೆಯಲಾಗುತ್ತಿತ್ತು. ಬಸವಣ್ಣನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇವರು ವಚನಗಳ ಸಂರಕ್ಷಕರಾಗಿದ್ದಾರೆ.
ಮಾಚಿದೇವರು ಸುಮಾರು 3.300 ಕೋಟಿ ವಚನ ರಚಿಸಿದ್ದಾರೆಂದು ಹೇಳಲಾಗುತ್ತದೆ. ಆದರೆ 511 ವಚನಗಳು ಮಾತ್ರ ಲಭ್ಯವಿದೆ.
ಕಾರಿಮನೆಯಲ್ಲಿ ಮಾಚಿದೇವರ ಗದ್ದುಗೆ ಇದ್ದು, ದೇವರ ಹಿಪ್ಪರಗಿಯನ್ನು ಮಾಚಿದೇವರ ಹಿಪ್ಪರಗಿಎಂದು ಹೆಸರಿಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದ ಅವರು ಲಿಂಗಪೂಜೆ ಹಾಗೂ ಶರಣರ ತತ್ವಗಳನ್ನು ಮೈಗೂಡಿಸಿಕೊಂಡು ಬದುಕೋಣ ಎಂದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಮಡಿ ಬಟ್ಟೆಗಳನ್ನು ಗಂಟೆ ಬಾರಿಸುತ್ತಾ ತಲೆ ಮೇಲೆ ಹೊತ್ತು ತರುವ ಮೂಲಕ ಅತ್ಯಂತ ಶ್ರದ್ದೆಯಿಂದ ಶ್ರೇಷ್ಟ ಕಾಯಕವೆಂದು ಅವರು ಮಾಡುತ್ತಿದ್ದರು. ಅನುಭವ ಮಂಟಪಕ್ಕೆ ಬರುವವರನ್ನು ಪರೀಕ್ಷಿಸಿ, ನೆಲದ ಮೇಲೆ ಬಟ್ಟೆ ಹಾಸಿ ಅತಿಥಿಗಳನ್ನು ಬರ ಮಾಡಿಕೊಳ್ಳುತ್ತಿದದ ಶ್ರೇಷ್ಟರು ಅವರು. ಮಡಿವಾಳ ಸಮಾಜ ಸಹ ಅತ್ಯಂತ ಪ್ರೀತಿ, ವಿಶ್ವಾಸ ತೋರುವ ಸಮಾಜವಾಗಿದೆ ಎಂದರು.
ಮಡಿವಾಳ ಸಮಾಜ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಸದಾಶಿವಪ್ಪ ಮಾತನಾಡಿ, ಶೂದ್ರರಿಗೆ ವಿದ್ಯೆ ಸಿಗುವುದು ಕಷ್ಟವಾಗಿದ್ದ ಕಾಲದಲ್ಲಿ ಕ್ರಾಂತಿಕಾರಿ ಗುಣದ ಗುರುಗಳಾದ ಮಲ್ಲಿಕಾರ್ಜುನ್ಯನವರಲ್ಲಿ ಮಾಚಿದೇವರು ವಿದ್ಯೆ ಪಡೆದು, ಮುಂದೆ ಕಲ್ಯಾಣದ ಅನುಭವ ಮಂಟಪದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಒದಗಿಸುವ ಕ್ರಾಂತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್ ಉಮೇಶ್ ಸ್ವಾಗತಿಸಿದರು. ಪಾಲಿಕೆ ಆಡಳಿತಾಧಿಕಾರಿ ತುμÁರ್ ಗಿರಿನಾಥ್, ಸಮಾಜ ಸಂಘದ ಇತರೆ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.