ಶಿವಮೊಗ್ಗ, ಜ.26:
ರಾಮಕೃಷ್ಣ ವಿದ್ಯಾನಿಕೇತನ ಗೋಪಾಳ, ಶಿವಮೊಗ್ಗ ಇಲ್ಲಿ 75ನೇ ಗಣರಾಜ್ಯೋತ್ಸವ ದ ಆಚರಣೆ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಎ.ಎನ್.ವೆಂಕಟೇಶ ರಾವ್ ಅವರು ಮುಖ್ಯ ಅತಿಥಿ ಗಳಾಗಿ ಆಗಮಿಸಿ, ಧ್ವಜಾರೋಹಣ ನಡೆಸಿ, ನಮ್ಮ ಮಕ್ಕಳ ಕವಾಯತು ನೋಡಿ, ಮಕ್ಕಳಿಗೆ ದೇಶ ಭಕ್ತಿ ಮೂಡಿಸುವಲ್ಲಿ ಅತ್ಯಂತ ಸುಂದರ ವಾಗಿ ಮಾತನಾಡಿದರು.
ಅವರು 18 ವರ್ಷಗಳ ಕಾಲ ಭಾರತೀಯ ನೌಕಾ ಪಡೆಯಲ್ಲಿ, ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಮುಖ್ಯ ಅಥಿತಿಯಾಗಿ ನಿರ್ಮಲ ರವರು ಕೂಡ ಭಾಗವಹಿಸಿ ಮಕ್ಕಳಿಗೆ ಅತ್ಯಂತ ಉಪಯುಕ್ತ ಮಾಹಿತಿ ನೀಡಿ, ಹಾಡುಗಳನ್ನು ಹೇಳಿ ರಂಜಿಸಿದರು.
ಅಧ್ಯಕ್ಷತೆಯನ್ನು ಕಾರ್ಯದರ್ಶಿ ಶೋಭಾ ವೆಂಕಟರಮಣ ವಹಿಸಿದ್ದು, ಅಥಿತಿಗಳ ಧರ್ಮಪತ್ನಿ ಗಾಯತ್ರಿ ಕೂಡ ಭಾಗವಸಿದ್ದರು.
ಸಾವಿರಾರು ವಿದ್ಯಾರ್ಥಿಗಳು ಮನೋರಂಜನೆ ನೀಡಿದರು.